ಸ್ವಾತಿ ಮಲಿವಾಲಗೆ ಅತ್ಯಚಾರ, ಕೊಲೆ ಬೆದರಿಕೆ

ಸ್ವಾತಿ ಮಲಿವಾಲಗೆ ಅತ್ಯಚಾರ, ಕೊಲೆ ಬೆದರಿಕೆ

ನವದೆಹಲಿ : ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಬಿಭವ್ ಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಬಳಿಕ ನನಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ರಾಜ್ಯಸಭೆ ಸಂಸದೆ ಸ್ವಾತಿ ಮಲಿವಾಲ ಆರೋಪಿಸಿದ್ದಾರೆ. ಯೂಟ್ಯೂಬರ್ ದೃವ್ ರಾಠಿ ಘಟನೆಗೆ ಸಂಬಂಧಿಸಿಂತೆ ಏಪಪಕ್ಷಿವಾಗಿ ವಿಡಿಯೋ ಮಾಡಿದ ಬಳಿಕ ಇದು ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ನನ್ನ ಪಕ್ಷದ ನಾಯಕರು, ಕೆಲ ಕಾರ್ಯಕರ್ತರು ನನ್ನ ವಿರುದ್ಧ ಚಾರಿತ್ರ್ಯಹರಣ ಮಾಡುತ್ತಿದ್ದಾರೆ. ಸಂತ್ರಸ್ತರನ್ನು ಅವಮಾನಿಸುವ ಮತ್ತು ನನ್ನ ವಿರುದ್ಧ ಭಾವನೆಗಳನ್ನು ಕೆರಳಿಸುವ ಅಭಿಯಾನವನ್ನು ಆಯೋಜಿಸಿದ್ದಾರೆ. ಇಷ್ಟೇ ಅಲ್ಲದೇ ನನಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ಅವರು ಟ್ವಿಟ್ ಮಾಡಿ ಹೇಳಿಕೊಂಡಿದ್ದಾರೆ.

ಧ್ರುವ ರಥಿಯಂತಹ ಸ್ವತಂತ್ರ ಪತ್ರಕರ್ತರು ಇತರ ಎಎಪಿ ವಕ್ತಾರರಂತೆ ವರ್ತಿಸುವುದು ನಾಚಿಕೆಗೇಡಿನ ಸಂಗತಿ. ಧ್ರುವ್ ಅವರಿಗೆ ನನ್ನ ಅಯಾಮವನ್ನು ಹೇಳಲು ನಾನು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ ಆದರೆ ಅವರು ನನ್ನ ಕರೆಗಳನ್ನು ನಿರ್ಲಕ್ಷಿಸಿದ್ದಾರೆ ಮತ್ತು ಸಂದೇಶಗಳಿಗೆ ಉತ್ತರಿಸಿಲ್ಲ ಎಂದು ಎಕ್ಸ್‌ನಲ್ಲಿ ಸ್ವಾತಿ ಮಲಿವಾಲ್ ಹೇಳಿದ್ದಾರೆ.

ನಾನು ಈ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳನ್ನು ದೆಹಲಿ ಪೊಲೀಸರಿಗೆ ವರದಿ ಮಾಡುತ್ತಿದ್ದೇನೆ. ಅವರು ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಯಾವುದೇ ಸಂದರ್ಭದಲ್ಲಿ, ನನಗೆ ಏನಾದರೂ ಸಂಭವಿಸಿದರೆ ಅದನ್ನು ಪ್ರಚೋದಿಸಿದವರು ಯಾರು ಎಂದು ನಮಗೆ ತಿಳಿದಿದೆ ಎಂದು ಹೇಳಿದ್ದಾರೆ.

Previous Post
ಬಂಗಾಳಕ್ಕೆ ಅಪ್ಪಳಿಸಲಿರುವ ರೆಮಲ್ ಚಂಡಮಾರುತ
Next Post
ಐಟಿ ದಾಳಿ ಸುರಾನಾ ಜ್ಯುವೆಲರ್ಸ್ ಮಾಲೀಕರ ಕಚೇರಿಯಲ್ಲಿ 26 ಕೋಟಿ ನಗದು ಪತ್ತೆ

Recent News