ಹಾರ್ದಿಕ್ ಪಾಂಡ್ಯಗೆ ₹4 ಕೋಟಿ ವಂಚಿಸಿದ ಸಹೋದರನ ಬಂಧನ

ಹಾರ್ದಿಕ್ ಪಾಂಡ್ಯಗೆ ₹4 ಕೋಟಿ ವಂಚಿಸಿದ ಸಹೋದರನ ಬಂಧನ

ಕ್ರಿಕೆಟಿಗರಾದ ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಅವರಿಗೆ ವ್ಯವಹಾರದಲ್ಲಿ ಸುಮಾರು 4 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಅವರ ಸಹೋದರ ವೈಭವ್ ಪಾಂಡ್ಯ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರಸ್ತುತ ಇದೀಗ 2024ನೇ ಆಬೃತ್ತಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯ ಆಡುತ್ತಿದ್ದು, ಇನ್ನು ಇವರ ಅಣ್ಣ ಕೃನಾಲ್‌ ಪಾಂಡ್ಯ ಅವರು ಲಕ್ನೋ ಸೂಪರ್‌ ಜೈಂಟ್ಸ್‌ ತಂಡದಲ್ಲಿ ಆಡುತ್ತಿದ್ದಾರೆ. ಇನ್ನು ಇದೀಗ ಇವರಿಬ್ಬರಿಗೆ 4 ಕೋಟಿ ರೂಪಾಯಿ ವಂಚಿಸಿ ಆರೋಪ ಹಿನ್ನೆಲೆ ಸಹೋದರ ವೈಭವ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ವೈಭವ್ (37) ಪಾಲುದಾರಿಕೆ ಸಂಸ್ಥೆಯಿಂದ ಸುಮಾರು 4.3 ಕೋಟಿ ರೂಪಾಯಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡುವ ಮೂಲಕ ಹಾರ್ದಿಕ್ ಪಾಂಡ್ಯ ಮತ್ತು ಅವರ ಸಹೋದರ ಕೃನಾಲ್‌ಗೆ ವಂಚನೆ ಮಾಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾದ ವರದಿ ಮಾಡಿದೆ ಅಂತಾ ನ್ಯೂಸ್‌ 18 ಇಂಗ್ಲೀಷ್‌ ತಿಳಿಸಿದೆ. ಇನ್ನು ವೈಭವ್ ವಿರುದ್ಧ ವಂಚನೆ ಮತ್ತು ನಕಲಿ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ. 2021ರಲ್ಲಿ ಪಾಲಿಮರ್ ವ್ಯವಹಾರಕ್ಕಾಗಿ ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಅವರು ಬಂಡವಾಳವಾಗಿ ತಲಾ ಶೇಕಡಾ 40ರಷ್ಟು ಹೂಡಿಕೆ ಮಾಡಿದ್ದರಂತೆ. ಇದರಲ್ಲಿ ವೈಭವ್ ಪಾಂಡ್ಯ ಕೂಡ ಶೇಕಡಾ 20ರಷ್ಟು ಹಣವನ್ನು ಹೂಡಿಕೆ ಮಾಡಿದ್ದರಂತೆ. ಆದರೆ, ನಂತರ ಸಹೋದರರಿಗೆ ತಿಳಿಯದಂತೆ ವೈಭವ್​ ಪಾಂಡ್ಯ ಅವರು ಸಂಸ್ಥೆಯ ಹಣವನ್ನು ಬೇರೆ ಕಂಪನಿಗೆ ವರ್ಗಾವಣೆ ಮಾಡಿಕೊಂಡಿದ್ದರಂತೆ ಎಂಬ ಆರೋಪ ಎದುರಾಗಿದೆ. ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್​ ಪಾಂಡ್ಯ ಇಬ್ಬರಿಗೂ ತಿಳಿಯದಂತೆ ದಾಖಲೆಗಳನ್ನು ಪೋರ್ಜರಿ ಮಾಡಿ 4.3 ಕೋಟಿ ರೂಪಾಯಿ ಹಣವನ್ನು ಸ್ವತಃ ವ್ಯವಹಾರಕ್ಕಾಗಿ ಬಳಸಿಕೊಂಡಿರುವ ಆರೋಪ ವೈಭವ್ ವಿರುದ್ದ ಕೇಳಿ ಬಂದಿದೆ. ಈ ಹಿನ್ನೆಲೆ ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ನಡೆಸಿದ ಮುಂಬೈ ಪೊಲೀಸರು ವೈಭವ್​ ಅವರನ್ನ ವಶಕ್ಕೆ ಪಡೆದು ಬಂಧನ ಮಾಡಿ ವಿಚಾರಣೆ ಮುಂದುವರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Previous Post
ಚೀನಾ ಜೊತೆ ಸೌಹಾರ್ದ ಸಂಬಂಧ ಭಾರತಕ್ಕೆ ಮುಖ್ಯ: ಮೋದಿ
Next Post
ಇಂಡಿಯಾ ಮೈತ್ರಿ ಪರ ‘ಮಹಾ’ ಜನತೆ- ಎನ್‌ಡಿಎ ಗೆಲ್ಲಬಹುದಾದ ಸೀಟುಗಳೆಷ್ಟು- ಸಮೀಕ್ಷೆ, ಅಂಕಿಅಂಶ

Recent News