ಹಾಲಿ 100 ಬಿಜೆಪಿ ಸಂಸದರಿಗೆ ಸಿಗಲ್ಲ ಟಿಕೆಟ್‌

ಹಾಲಿ 100 ಬಿಜೆಪಿ ಸಂಸದರಿಗೆ ಸಿಗಲ್ಲ ಟಿಕೆಟ್‌

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಹಾಲಿ ಕನಿಷ್ಠ 100 ಸಂಸದರಿಗೆ ಬಿಜೆಪಿ ಟಿಕೆಟ್‌ ನೀಡದೇ ಇರಲು ನಿರ್ಧರಿಸಿದೆ ಎನ್ನಲಾಗಿದೆ. ಗುರುವಾರ ರಾತ್ರಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ (ಸಿಇಸಿ) ನಡೆಯಿತು.

ಈ ಸಭೆಯಲ್ಲಿ 5 ವರ್ಷದ ಅವಧಿಯಲ್ಲಿ ಸಾಧನೆ ಮಾಡದೇ ಇರುವ ಸಂಸದರಿಗೆ ಮತ್ತೆ ಟಿಕೆಟ್‌ ನೀಡದೇ ಇರುವ ತೀರ್ಮಾನಕ್ಕೆ ಬರಲಾಗಿದೆ ಎಂದು ವರದಿಯಾಗಿದೆ. ಅಭ್ಯರ್ಥಿಗಳ ಆಯ್ಕೆಗೆ ತಾಂತ್ರಿಕ ವಿಧಾನ ಅಳವಡಿಸಿಕೊಳ್ಳಲು ಬಿಜೆಪಿ ಮುಂದಾಗಿದೆ. ತಳಮಟ್ಟದಲ್ಲಿ ಅಭಿಪ್ರಾಯ ಸಂಗ್ರಹಿಸಲು ಪಕ್ಷವು ವಿಶಿಷ್ಟ ವಿಧಾನ ಅಳವಡಿಸಿಕೊಂಡಿದೆ. ನಮೋ ಆ್ಯಪ್ ಮೂಲಕ ಪ್ರಸ್ತುತ ಸಂಸದರ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಗುರುವಾರ ರಾತ್ರಿ ನಡೆದ ಸಭೆ ನಸುಕಿನ ಜಾವ 3 ಗಂಟೆಯವರೆಗೆ ನಡೆದಿತ್ತು. ಸಭೆಯ ಬಳಿಕ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಲಿದ್ದು, ಮೊದಲ 100 ಮಂದಿ ಅಭ್ಯರ್ಥಿಗಳ ಪಟ್ಟಿ ಶೀಘ್ರವೇ ಪ್ರಕಟವಾಗುವ ಸಾಧ್ಯತೆಯಿದೆ. ಕಳೆದ ಬಾರಿ ಸೋಲನ್ನಪ್ಪಿದ ಕ್ಷೇತ್ರಗಳು ಮೊದಲ ಪಟ್ಟಿಯಲ್ಲಿರಲಿದ್ದು ಅಭ್ಯರ್ಥಿಗಳಿಗೆ ತಯಾರಿಗೆ ಹೆಚ್ಚು ಸಮಯ ನೀಡಲು ಚುನಾವಣೆ ಘೋಷಣೆಗೂ ಮುನ್ನ ಟಿಕೇಟ್ ಘೋಷಿಸಲಾಗುತ್ತಿದೆ.

Previous Post
ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ: 46 ಸಾವು
Next Post
ದೀದಿ ಸರ್ಕಾರ ಉರುಳಿಸೋ ವರೆಗೂ ತಲೆ ಕೂದಲು ಬೆಳೆಸಲ್ಲ ಶಪಥ ಮಾಡಿದ್ದ ‘ಕೈ’ ನಾಯಕ ಬಿಜೆಪಿ ಸೇರ್ಪಡೆ

Recent News