17% ಭಾರತೀಯರು ಬ್ಯಾಕಿಂಗ್ ಪಾಸ್‌ವರ್ಡ್ ಅಸುರಕ್ಷಿತವಾಗಿವೆ – ಸಮೀಕ್ಷೆ

17% ಭಾರತೀಯರು ಬ್ಯಾಕಿಂಗ್ ಪಾಸ್‌ವರ್ಡ್ ಅಸುರಕ್ಷಿತವಾಗಿವೆ – ಸಮೀಕ್ಷೆ

ನವದೆಹಲಿ : ಜನರು ತಮ್ಮ ಬ್ಯಾಂಕಿಂಗ್ ಪಾಸ್‌ವರ್ಡ್‌ಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳದ ಕಾರಣ ಆನ್‌ಲೈನ್ ಕಳ್ಳತನಗಳು ಹೆಚ್ಚಾಗುತ್ತಿವೆ ಎಂದು ಲೋಕಲ್ ಸರ್ಕಲ್ಸ್ ಸಮೀಕ್ಷೆ ಹೇಳಿದೆ. ಕಳೆದ ಐದು ವರ್ಷಗಳಲ್ಲಿ ತಾವು ಅಥವಾ ತಮ್ಮ ಕುಟುಂಬದಲ್ಲಿ ಯಾರಾದರೂ ಒಬ್ಬರು ಆರ್ಥಿಕ ವಂಚನೆಯನ್ನು ಅನುಭವಿಸಿದ್ದಾರೆ ಎಂದು ಒಟ್ಟು 53 ಪ್ರತಿಶತ ಭಾರತೀಯರು ಹೇಳಿಕೊಂಡಿದ್ದಾರೆ.

ಲೋಕಲ್ ಸರ್ಕಲ್ಸ್ ಸಮೀಕ್ಷೆಯು ಭಾರತದ 367 ಜಿಲ್ಲೆಗಳಲ್ಲಿ ನೆಲೆಸಿರುವ ನಾಗರಿಕರಿಂದ 48,000 ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ. 63 ಪ್ರತಿಶತ ಪುರುಷರು, 37 ಪ್ರತಿಶತ ಮಹಿಳೆಯರು ಸಮಿಕ್ಷೆಯಲ್ಲಿ ಭಾಗಿಯಾಗಿ ಪ್ರತಿಕ್ರಿಯಿಸಿದ್ದಾರೆ. ಇದರಲ್ಲಿ ಕನಿಷ್ಠ 17% ನಾಗರಿಕರು ತಮ್ಮ ಪ್ರಮುಖ ಹಣಕಾಸಿನ ಪಾಸ್‌ವರ್ಡ್‌ಗಳನ್ನು ಮೊಬೈಲ್ ಫೋನ್‌ಗಳಲ್ಲಿ ಅಸುರಕ್ಷಿತ ರೀತಿಯಲ್ಲಿ ಸಂಗ್ರಹಿಸುವುದನ್ನು ಒಪ್ಪಿಕೊಂಡಿದ್ದಾರೆ.

ಎಂದು ಸ್ಥಳೀಯ ಸರ್ಲೆಸ್ ಸಮೀಕ್ಷೆಯಲ್ಲಿ 34% ಜನರು ತಮ್ಮ ಪಾಸ್‌ವರ್ಡ್‌ಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರೆ ಎಂದೂ ಸಮೀಕ್ಷೆ ಹೇಳಿದೆ. ಜನರು ತಮ್ಮ ಪಾಸ್‌ವರ್ಡ್‌ಗಳನ್ನು ಎಲ್ಲಿ ಸಂಗ್ರಹಿಸುತ್ತಾರೆ ಎಂದು ಕೇಳಿ ಪ್ರಶ್ನೆಗೆ 4% ಜನರು ಮೊಬೈಲ್ ಫೋನ್ ಸಂಪರ್ಕ ಪಟ್ಟಿ ಯಲ್ಲಿ ಪಾಸ್‌ವರ್ಡ್‌ಗಳನ್ನು ಸಂಗ್ರಹಿಸುತ್ತಾರೆ ಎಂದು ಹೇಳಿದ್ದಾರೆ‌ ಇನ್ನು 4% ಜನರು ಫೋನ್‌ನಲ್ಲಿರುವ ಪಾಸ್‌ವರ್ಡ್ ಅಪ್ಲಿಕೇಶನ್‌ನಲ್ಲಿ, 5% ರಷ್ಟು ಜನರು ವ್ಯಾಲೆಟ್ / ಪರ್ಸ್‌ನಲ್ಲಿ ಇಟ್ಟುಕೊಳ್ಳುತ್ತಾರೆ, 14% ಜನರು ಕಂಠಪಾಠ ಮಾಡಿ ಮತ್ತು 16% ಜನರು ಕಂಪ್ಯೂಟರ್ / ಲ್ಯಾಪ್‌ಟಾಪ್‌ನಲ್ಲಿ ಇಟ್ಟುಕೊಂಡಿರುವುದಾಗಿ ಹೇಳಿದ್ದಾರೆ.

ಎಟಿಎಂ ಮತ್ತು ಕ್ರೇಡಿಟ್ ಕಾರ್ಡ್ ಪಿನ್ ಬಗ್ಗೆ ಪ್ರಶ್ನಿಸಿದಾಗ, ಸಮೀಕ್ಷೆಯಲ್ಲಿ ಭಾಗವಹಿಸಿದ 34% ರಷ್ಟು ನಾಗರಿಕರು ತಮ್ಮ ಪ್ರಮುಖ ಪಾಸ್‌ವರ್ಡ್‌ಗಳನ್ನು ಬೇರೆಯವರೊಂದಿಗೆ ಹಂಚಿಕೊಂಡಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಇವರಲ್ಲಿ, 28 ಪ್ರತಿಶತದಷ್ಟು ಜನರು ತಮ್ಮ ಕುಟುಂಬ ಸದಸ್ಯರಲ್ಲಿ ಒಬ್ಬರು ಅಥವಾ ಹೆಚ್ಚಿನವರು ತಮ್ಮ ಪಾಸ್‌ವರ್ಡ್‌ಗಳನ್ನು ಹಂಚಿಕೊಂಡಿದ್ದಾರೆ. ಉಳಿದ 66% ತಮ್ಮನ್ನು ಹೊರತು ಬೇರೆ ಯಾರಿಗೂ ಗೊತ್ತಿಲ್ಲ ಎಂದು ಹೇಳಿದ್ದಾರೆ.

Previous Post
ಮೋದಿ ಪ್ರಪಂಚದಿಂದ ಸತ್ಯವನ್ನು ಹೊರಹಾಕಬಹುದು ವಾಸ್ತವದಲ್ಲಿ ಅಲ್ಲ – ರಾಗಾ ಆಕ್ರೋಶ
Next Post
ಹಳಿತಪ್ಪಿದ ಗೂಡ್ಸ್‌ರೈಲು, ರೈಲು ಸಂಚಾರಕ್ಕೆ ಅಡ್ಡಿ

Recent News