18 ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರಿಗೆ ದೆಹಲಿ ಸರ್ಕಾರದಿಂದ ತಿಂಗಳಿಗೆ 1 ಸಾವಿರ ರೂ.

18 ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರಿಗೆ ದೆಹಲಿ ಸರ್ಕಾರದಿಂದ ತಿಂಗಳಿಗೆ 1 ಸಾವಿರ ರೂ.

ನವದೆಹಲಿ, ಮಾ. 4: ದೆಹಲಿ ಹಣಕಾಸು ಸಚಿವ ಅತಿಶಿ ಸೋಮವಾರ 76,000 ಕೋಟಿ ಬಜೆಟ್ ಮಂಡಿಸುತ್ತಿದ್ದಂತೆ ದೆಹಲಿ ಸರ್ಕಾರವು ‘ಮುಖ್ಯಮಂತ್ರಿ ಸಮ್ಮಾನ್’ ಯೋಜನೆ ಅಡಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಮಹಿಳೆಯರಿಗೆ ತಿಂಗಳಿಗೆ ₹1,000 ರೂಪಾಯಿಗಳನ್ನು ಘೋಷಿಸಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರದ 10ನೇ ಬಜೆಟ್ ಇದಾಗಿದ್ದು, ದೆಹಲಿ ವಿಧಾನಸಭೆಯಲ್ಲಿ ಘೋಷಣೆ ಮಾಡಿದ ಸಚಿವೆ ಅತಿಶಿ, ‘ಹಿಂದೆ, ಸೀಮಿತ ಸಂಪನ್ಮೂಲಗಳನ್ನು ಹೊಂದಿದ್ದ ದೆಹಲಿಯ ನಿವಾಸಿಗಳು ತಮ್ಮ ಪುತ್ರರನ್ನು ಖಾಸಗಿ ಶಾಲೆಗಳಿಗೆ ಮತ್ತು ಹೆಣ್ಣು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತಿದ್ದರು’ ಎಂದು ಹೇಳಿದರು.
‘ಒಮ್ಮೆ 95 ಪ್ರತಿಶತ ಹುಡುಗಿಯರು ತಮ್ಮ ಸಹೋದರರು ಖಾಸಗಿ ಶಾಲೆಗಳಲ್ಲಿ ಓದುತ್ತಾರೆ ಎಂದು ನನಗೆ ಹೇಳಿದರು. ಆದರೆ, ಈಗ ದೆಹಲಿಯ ಸರ್ಕಾರಿ ಶಾಲೆಗಳ ಹುಡುಗಿಯರು ಐಐಟಿ, ನೀಟ್ ಪರೀಕ್ಷೆಗಳಲ್ಲಿ ತೇರ್ಗಡೆಯಾಗುತ್ತಿದ್ದಾರೆ’ ಎಂದು ಅವರು ಹೇಳಿದರು. ‘ಇದುವರೆಗೆ ಶ್ರೀಮಂತ ಕುಟುಂಬದ ಮಗು ಶ್ರೀಮಂತ ಮತ್ತು ಬಡ ಕುಟುಂಬದ ಮಗು ಬಡವಾಗಿರುತ್ತದೆ. ಆದರೆ ಇದು ‘ರಾಮ ರಾಜ್ಯ’ ಪರಿಕಲ್ಪನೆಗೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಕೇಜ್ರಿವಾಲ್ ಸರ್ಕಾರವು 2015 ರಿಂದ 22,711 ಹೊಸ ತರಗತಿ ಕೊಠಡಿಗಳನ್ನು ನಿರ್ಮಿಸಿದೆ. ಶಿಕ್ಷಣವು ನಮ್ಮ ಸರ್ಕಾರದ ಆದ್ಯತೆಯಾಗಿದೆ… ಈ ವರ್ಷ ಶಿಕ್ಷಣಕ್ಕಾಗಿ 16,396 ಕೋಟಿ ರೂ.ಗಳನ್ನು ಒದಗಿಸಿದೆ’ ಎಂದು ದೆಹಲಿ ಹಣಕಾಸು ಸಚಿವರು ಹೇಳಿದರು.

Previous Post
ಪಾಲ್ಘರ್ ನಕಲಿ ಎನ್‌ಕೌಂಟರ್‌ ಪ್ರಕರಣ: ಇಬ್ಬರು ಪೊಲೀಸರು ಬಂಧನ
Next Post
ದೆಹಲಿ ಬಜೆಟ್ಟಿನಲಿ ಶಿಕ್ಷಣಕ್ಕಾಗಿ 16,396 ಕೋಟಿ

Recent News