21 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಚರ್ಚೆ ಇಂದು ರಾಜ್ಯ ಕಾಂಗ್ರೇಸ್‌ನ ಎರಡನೇ ಪಟ್ಟಿ ಬಿಡುಗಡೆ?

21 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಚರ್ಚೆ ಇಂದು ರಾಜ್ಯ ಕಾಂಗ್ರೇಸ್‌ನ ಎರಡನೇ ಪಟ್ಟಿ ಬಿಡುಗಡೆ?

ನವದೆಹಲಿ : ಲೋಕಸಭೆ ಚುನಾವಣೆ ಬೆನ್ನಲೆ ಅಭ್ಯರ್ಥಿಗಳ ಆಯ್ಕೆ ಕಸರತ್ತಿಗೆ ವೇಗ ನೀಡಿರುವ ಕಾಂಗ್ರೇಸ್ ಹೈಕಮಾಂಡ್ ಮಂಗಳವಾರ ಇಡೀ ದಿನ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಸಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಿರಿಯ ನಾಯಕಿ ಸೋನಿಯಗಾಂಧಿ, ರಾಹುಲ್ ಗಾಂಧಿ, ಅಂಬಿಕಾಸೋನಿ ಸೇರಿದಂತೆ ಪ್ರಮುಖ ನಾಯಕರು ಭಾಗಿಯಾಗಿದ್ದರು.

ಮಂಗಳವಾರದ ಸಭೆಯಲ್ಲಿ ರಾಜ್ಯ ಕಾಂಗ್ರೇಸ್ ಅಭ್ಯರ್ಥಿಗಳ ಆಯ್ಕೆ ಬಗ್ಗೆಯೂ ಚರ್ಚೆ ನಡೆದಿದೆ. ಬಾಕಿ‌ ಉಳಿದ 21 ಕ್ಷೇತ್ರಗಳ ಬಗೆಗೆ ನಡೆದ ಚರ್ಚೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಉಸ್ತುವಾರಿ ರಣದೀಪ್ ಸುರ್ಜೆವಾಲ ಭಾಗಿಯಾಗಿದ್ದರು.

ರಾಜ್ಯದಲ್ಲಿ ಕೋರ್ ಕಮಿಟಿ ಸಭೆ ನಡೆಸಿ ಒಂದೊಂದೇ ಹೆಸರು ಸೂಚಿಸುವಂತೆ ಹೈಕಮಾಂಡ್ ನಾಯಕರು ಈ ಹಿಂದೆ ಸೂಚಿಸಿದ್ದರು. ಅದರಂತೆ ರಾಜ್ಯದಲ್ಲಿ ಸಭೆ ನಡೆಸಿದ್ದ ನಾಯಕರು 13 ಕ್ಷೇತ್ರಗಳಿಗೆ ಒಂದೊಂದೇ ಹೆಸರನ್ನು ಅಂತಿಮ ಮಾಡಿದೆ. ಬೀದರ್‌ನಿಂದ ರಾಜಶೇಖರ್ ಪಾಟೀಲ್ ಹುಮ್ನಾಬಾದ್, ಚಿತ್ರದುರ್ಗದಿಂದ ಚಂದ್ರಪ್ಪ, ದಾವಣಗೆರೆಗೆ ಪ್ರಭಾ ಮಲ್ಲಿಕಾರ್ಜುನ, ಕೊಪ್ಪಳದಿಂದ ರಾಜಶೇಖರ ಹಿಟ್ನಾಳ್, ಬೆಂಗಳೂರು ದಕ್ಷಿಣದಿಂದ ಸೌಮ್ಯ ರೆಡ್ಡಿ

ಉಡುಪಿ ಚಿಕ್ಕಮಗಳೂರಿನಿಂದ ಜಯಪ್ರಕಾಶ್ ಹೆಗ್ಡೆ, ಬೆಳಗಾವಿಯಿಂದ ಮೃಣಾಲ್ ಹೆಬ್ಬಾಳ್ಕರ್, ಕಲಬುರ್ಗಿಗೆ ರಾಧಾ ಕೃಷ್ಣ, ದಕ್ಷಿಣ ಕನ್ನಡಕ್ಕೆ ಪದ್ಮರಾಜ್, ಚಿಕ್ಕಬಳ್ಳಾಪುರದಿಂದ ರಕ್ಷಾ ರಾಮಯ್ಯ, ಬೆಂಗಳೂರು ಕೇಂದ್ರಕ್ಕೆ ಮನ್ಸೂರ್ ಖಾನ್, ಚಾಮರಾಜನಗರದಿಂದ ಸುನೀಲ್ ಬೋಸ್, ಮೈಸೂರಿಗೆ ಲಕ್ಷ್ಮಣ್ ಹೆಸರು ಅಂತಿಮಗೊಳಿಸಿದ್ದು ಈ ಹೆಸರುಗಳನ್ನು ಕೇಂದ್ರ ಚುನಾವಣಾ ಸಮಿತಿಯಲ್ಲಿ ಚರ್ಚಿಸಿದ್ದು ಬಹುತೇಕ ಈ ಹೆಸರುಗಳಿಗೆ ಹಸಿರು ನಿಶಾನೆ ಸಿಕ್ಕಿದೆ ಎನ್ನಲಾಗಿದೆ.

ಸಿಇಸಿ ಸಭೆಗೆ ಎಂಟು ಕ್ಷೇತ್ರಗಳಿಗೆ ಎರಡು ಅಥಾವ ಅದಕ್ಕಿಂತ ಹೆಚ್ಚು ಅಭ್ಯರ್ಥಿಗಳ ಹೆಸರನ್ನು ರಾಜ್ಯ ನಾಯಕರು ಕೊಂಡ್ಯೊದಿದ್ದು, ಚಿಕ್ಕೋಡಿ – ಗಣೇಶ್ ಹುಕ್ಕೇರಿ, ಲಕ್ಷ್ಮಣ್ ರಾವ್ ಚಿಂಗಲೆ, ಪ್ರಿಯಾಂಕಾ ಜಾರಕಿಹೋಳಿ ಹೆಸರು ಪ್ರಸ್ತಾಪಿಸಿದೆ. ಬಾಗಲಕೋಟೆಗೆ ಅಜಯ್ ಕುಮಾರ್ ಸರ್ ನಾಯಕ್, ವೀಣಾ ಕಾಶಪ್ಪನವರ್, ಬಳ್ಳಾರಿಗೆ ವೆಂಕಟೇಶ್ ಪ್ರಸಾದ್, ಉಗ್ರಪ್ಪ ,
ಸೌಪರ್ಣಿಕ ಧಾರವಾಡದಿಂದ ವಿಜಯ್ ಕುಲಕರ್ಣಿ, ಶಿವಲೀಲ ಕುಲಕರ್ಣಿ, ರಜತ್ ಉಳ್ಳಾಗಡ್ಡಿ ಮಠ್, ರಾಯಚೂರಿಗೆ ರಾಜರಾಯಪ್ಪ ನಾಯಕ, ರವಿ ಪಾಟೀಲ್, ದೇವಣ್ಣ ನಾಯಕ, ಗಂಗಾಧರ ನಾಯಕ

ಉತ್ತರ ಕನ್ನಡ-ಅಂಜಲಿ ನಿಂಬಾಳ್ಕರ್, ಆರ್.ವಿ.ದೇಶಪಾಂಡೆ, ಬೆಂಗಳೂರು ಉತ್ತರದಿಂದ ಫ್ರೊ.ರಾಜೀವ್ ಗೌಡ, ಪ್ರಿಯಾ ಕೃಷ್ಣ, ಕೋಲಾರಕ್ಕೆ ಮುನಿಯಪ್ಪ, ರೂಪಕಲಾ, ಕಮಲಾಕ್ಷಿ ರಾಜಣ್ಣ ಹೆಸರನ್ನು ಪ್ರಸ್ತಾಪಿದೆ. ಈ ಎಂಟು ಕ್ಷೇತ್ರಗಳ ಬಗ್ಗೆ ಸಭೆಯಲ್ಲಿ ಗಂಭೀರ ಸಮಾಲೋಚನೆ ನಡೆದಿದ್ದು ಹೈಕಮಾಂಡ್ ಈ ಹೆಸರುಗಳಲ್ಲಿ ಒಂದೊಂದು ಹೆಸರು ಅಂತಿಮಗೊಳಿಸಲಿದೆ, ಇಂದು ಸಂಜೆ ವೇಳೆಗೆ ಎರಡನೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿದೆ.

Previous Post
JMM ತೊರೆದು ಬಿಜೆಪಿ ಸೇರಿದ ಹೇಮಂತ್ ಸೊರೇನ್‌ ಸೊಸೆ ಸೀತಾ ಸೊರೇನ್‌
Next Post
ದಳಪತಿಗಳು ಏನೇ ಅಂದ್ರೂ ಮಂಡ್ಯ ನಂದೇ; ಯಾವುದೇ ಕಾರಣಕ್ಕೂ ಮಂಡ್ಯ ಬಿಡಲ್ಲ ಎಂದ ಸುಮಲತಾ

Recent News