3ನೇ ಮಹಾಯುದ್ಧ: 200 ಡ್ರೋನ್, ಕ್ಷಿಪಣಿ ಉಡಾಯಿಸಿದ ಇರಾನ್? ಇಸ್ರೇಲ್ ವಿರುದ್ಧ ಯುದ್ಧ ಶುರು?

3ನೇ ಮಹಾಯುದ್ಧ: 200 ಡ್ರೋನ್, ಕ್ಷಿಪಣಿ ಉಡಾಯಿಸಿದ ಇರಾನ್? ಇಸ್ರೇಲ್ ವಿರುದ್ಧ ಯುದ್ಧ ಶುರು?

ಮನುಷ್ಯ ಮತ್ತೊಂದು ಮಹಾಯುದ್ಧಕ್ಕೆ ಈಗ ರಣಕಹಳೆ ಮೊಳಗಿಸಿದ್ದಾನೆ. ಇಸ್ರೇಲ್ ವಿರುದ್ಧ ಇದೀಗ ಇರಾನ್ ಯುದ್ಧ ಸಾರಿ, ಸುಮಾರು 200ಕ್ಕೂ ಹೆಚ್ಚು ಡ್ರೋನ್ & ಕ್ಷಿಪಣಿ ಉಡಾಯಿಸಿದೆ. ತನ್ನ ಸೇನಾಧಿಕಾರಿಗಳನ್ನು ಇಸ್ರೇಲ್ ಕೊಲೆ ಮಾಡಿದೆ ಎಂದು ಆರೋಪಿಸಿ ರೊಚ್ಚಿಗೆದ್ದಿರುವ ಇರಾನ್, ಇದೀಗ 3ನೇ ಮಹಾಯುದ್ಧಕ್ಕೆ ರಣಕಹಳೆ ಮೊಳಗಿಸಿದೆ. ನಿನ್ನೆಯಷ್ಟೆ ಇಸ್ರೇಲ್‌ಗೆ ಸೇರಿದ ಹಡಗು ವಶಕ್ಕೆ ಪಡೆದಿದ್ದ ಇರಾನ್ ಸೇನೆ ಕೆಲವೇ ಹೊತ್ತಲ್ಲಿ ಭೀಕರ ದಾಳಿ ಕೂಡ ಆರಂಭಿಸಿದೆ. ಇಸ್ರೇಲ್ ದೇಶದ ಪ್ರಮುಖ ನಗರಗಳನ್ನು ಗುರಿಯಾಗಿಸಿ, ಇರಾನ್ ಈಗ ಡ್ರೋನ್ & ಕ್ಷಿಪಣಿ ದಾಳಿ ಆರಂಭಿಸಿದೆ ಎಂದು ಗಂಭೀರ ಆರೋಪ ಮಾಡಿದೆ ಇಸ್ರೇಲ್. ಅಲ್ಲದೆ ಇರಾನ್ ಹಾರಿಸಿದ್ದ ಡ್ರೋನ್‌ಗಳನ್ನು ಆಕಾಶದಲ್ಲೇ ಪುಡಿ ಪುಡಿ ಮಾಡಿದೆ ಇಸ್ರೇಲ್. ಮತ್ತೊಂದು ಕಡೆ ಇಸ್ರೇಲ್‌ನ ಆಕಾಶದಲ್ಲಿ ಶತ್ರು ಪಡೆಗಳ ಅಸ್ತ್ರ ಓಡಾಟ ಆರಂಭ ಮಾಡಿದ್ದೇ ತಡ ಸೈರನ್ ಸದ್ದು ಮೊಳಗಿದೆ. ಕೆಲವು ದಿನಗಳ ಹಿಂದಷ್ಟೇ ಅಮೆರಿಕ ಈ ಬಗ್ಗೆ ಇಸ್ರೇಲ್‌ಗೆ ಎಚ್ಚರಿಕೆ ನೀಡಿತ್ತು.

ಸೇನಾಧಿಕಾರಿ ಕೊಲೆಗೆ ರಿವೇಂಜ್ ಶುರು? ಡಮಾಸ್ಕಸ್‌ನ ಇರಾನ್ ರಾಯಭಾರ ಕಚೇರಿಯ ಮೇಲೆ ಏಪ್ರಿಲ್ 1ಕ್ಕೆ ವೈಮಾನಿಕ ದಾಳಿ ನಡೆಸಿದ ಇಸ್ರೇಲ್ ಅಟ್ಟಹಾಸ ಮೆರೆದಿದೆ ಎಂದು ಇರಾನ್ ಆರೋಪಿಸಿತ್ತು. ಡಮಾಸ್ಕಸ್ ಮೇಲೆ ಇಸ್ರೇಲ್‌ನ ದಾಳಿಯ ವೇಳೆ ಸೇನಾಧಿಕಾರಿಗಳು ಸೇರಿ ಹಲವು ಇರಾನ್ ಅಧಿಕಾರಿಗಳು ಜೀವ ಬಿಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಡಮಾಸ್ಕಸ್ ದಾಳಿಗೆ ನೇರವಾಗಿ ಪ್ರತಿಕ್ರಿಯೆ ನೀಡಲು ಇರಾನ್ ಸಿದ್ಧತೆ ಆರಂಭಿಸಿದೆ ಎಂಬ ಮಾಹಿತಿ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ದಾಳಿ ಆರಂಭವಾಗಿದೆ. ಈಗ ಹಮಾಸ್ ಉಗ್ರರ ವಿರುದ್ಧ ಹೋರಾಟ ನಡೆಸುತ್ತಿರುವ ಇಸ್ರೇಲ್ ಸೇನೆಗೆ ಇರಾನ್ ಕೂಡ ತಿರುಗಿ ಬಿದ್ದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಮೆರಿಕ ವಾರ್ನಿಂಗ್ ಹೇಗಿತ್ತು? ನಿನ್ನೆ ಖುದ್ದು ಅಮೆರಿಕದ ಅಧ್ಯಕ್ಷರೇ ಈ ಬಗ್ಗೆ ಮಾಹಿತಿ ನೀಡಿದ್ದರು. ಇದು ಸೂಕ್ಷ್ಮ ವಾತಾವರಣ ಸೃಷ್ಟಿ ಮಾಡಿದ್ದು ಇಸ್ರೇಲ್ ಮೇಲೆ ಇರಾನ್ ಬೇಗನೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದಿದ್ದರು. ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ದಾಳಿ ಆರಂಭವಾಗಿ, ಇಡೀ ಇಸ್ರೇಲ್ ನಲುಗಿ ಹೋಗಿದೆ. ಇರಾನ್‌ಗೆ ಯುದ್ಧಕ್ಕೆ ಮುಂದಾಗಬೇಡಿ ಎಂಬ ಎಚ್ಚರಿಕೆಯ ಸಂದೇಶ ನೀಡಿದ್ದರೂ ಈಗ ಇರಾನ್ ದಾಳಿ ಆರಂಭಿಸಿದ್ದು, 3ನೇ ಮಹಾಯುದ್ಧದ ಭೀತಿಯನ್ನ ಹುಟ್ಟುಹಾಕಿದೆ.

Previous Post
ತುಕ್ಡೆ-ತುಕ್ಡೆ ಗ್ಯಾಂಗಿನ ಸುಲ್ತಾನನಂತೆ ವರ್ತಿಸುತ್ತಿದೆ ಕಾಂಗ್ರೆಸ್‌: ಮೈಸೂರಿನಲ್ಲಿ ಮೋದಿ ಹೇಳಿದ್ದೇನು?
Next Post
ಸಂವಿಧಾನ ಬದಲಾವಣೆ ಕುರಿತು ಪ್ರಸ್ತಾಪಿಸಿದ ಮತ್ತೋರ್ವ ಬಿಜೆಪಿ ಸಂಸದ

Recent News