5 ಲಕ್ಷಕ್ಕೆ ಅಪ್ರಾಪ್ತ ಮಗಳನ್ನು ಮಾರಿ 72 ವರ್ಷದ ವೃದ್ಧನೊಂದಿಗೆ ಮದುವೆ ಮಾಡಿಸಲು ಮುಂದಾದ ಪಾಪಿ ತಂದೆ!

5 ಲಕ್ಷಕ್ಕೆ ಅಪ್ರಾಪ್ತ ಮಗಳನ್ನು ಮಾರಿ 72 ವರ್ಷದ ವೃದ್ಧನೊಂದಿಗೆ ಮದುವೆ ಮಾಡಿಸಲು ಮುಂದಾದ ಪಾಪಿ ತಂದೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದಲ್ಲಿಪಾಪಿ ತಂದೆಯೊಬ್ಬ ತನ್ನ 12 ವರ್ಷದ ಮಗಳನ್ನು 72 ವರ್ಷದ ಮುದುಕನೊಬ್ಬನಿಗೆ ಮಾರಾಟ ಮಾಡಿ ಆತನ ಜತೆಗೆ ಮದುವೆ ಮಾಡಿಸಲು ಯತ್ನಿಸಿದ್ದಾನೆ. ಸದ್ಯ 72 ವರ್ಷದ ವರನನ್ನು ಪೊಲೀಸರು ಬಂಧಿಸಿದ್ದು, ಬಾಲಕಿಯ ತಂದೆ ತಲೆ ಮರೆಸಿಕೊಂಡಿದ್ದಾನೆ.

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಈ ವಿಲಕ್ಷಣ ಪ್ರಕರಣ ನಡೆದಿದೆ. ಬಾಲಕಿಯ ಪಾಪಿ ತಂದೆಯ ಹೆಸರು ಆಲಂ ಸೈಯದ್. ಬಾಲಕಿಯ ಮದುವೆಯಾಗಲು ತಯಾರಾಗಿ ಸದ್ಯ ಜೈಲು ಕಂಬಿ ಎಣಿಸುತ್ತಿರುವ ಮುದುಕನ ಹೆಸರು ಹಬೀಬ್‌ ಖಾನ್‌ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ತಂದೆ ಆಲಂ ಸೈಯದ್ ತನ್ನ ಮಗಳನ್ನು 5 ಲಕ್ಷಕ್ಕೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದ್ದನು. ಅಲ್ಲದೇ ಇಷ್ಟು ಹಣ ಸಿಗದಿದ್ದರೆ ಮದುವೆ ಮಾಡಿಕೊಡಲ್ಲ ಎಂದು ಬಾಲಕಿಯ ತಂದೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ನಡುವೆ ಪೊಲೀಸರು ಮಧ್ಯಪ್ರವೇಶಿಸಿ 72 ವರ್ಷದ ವರ ಹಬೀಬ್ ಖಾನ್ ಮತ್ತು ಮದುವೆಯನ್ನು ನಡೆಸಿದ ʼನಿಕಾಹ್ ಖ್ವಾನ್’ ಅನ್ನು ಬಂಧಿಸಿದ್ದಾರೆ.

ವಿಚಾರ ತಿಳಿಯುತ್ತಿದಂತೆಯೇ ಬಾಲಕಿಯ ತಂದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಬಾಲಕಿಯ ತಂದೆ, 72 ವರ್ಷದ ವೃದ್ಧ ಹಾಗೂ ಮದುವೆ ಮಾಡಿದಾತನ ವಿರುದ್ಧ ಬಾಲ್ಯ ವಿವಾಹ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Previous Post
ಪೆಟ್ರೋಲ್, ಡೀಸೆಲ್ ದರ ಏರಿಕೆಗೂ ಚುನಾವಣಾ ಫಲಿತಾಂಶಕ್ಕೂ ಸಂಬಂಧವಿಲ್ಲ ಎಂದ ಸಿಎಂ
Next Post
ಈ ಕಾಯಿಲೆ ಬಂದ್ರೆ 48 ಗಂಟೆಗಳಲ್ಲಿಯೇ ಸಾವು..! ಆತಂಕ ಸೃಷ್ಟಿಸುತ್ತಿದೆ ಮಾಂಸ ತಿನ್ನುವ ಬ್ಯಾಕ್ಟೀರಿಯಾ

Recent News