67,000ಕ್ಕೂ ಹೆಚ್ಚು ನೌಕರರನ್ನು ವಜಾಗೊಳಿಸಿದ ಪ್ರಮುಖ 4 ಕಂಪನಿಗಳು

67,000ಕ್ಕೂ ಹೆಚ್ಚು ನೌಕರರನ್ನು ವಜಾಗೊಳಿಸಿದ ಪ್ರಮುಖ 4 ಕಂಪನಿಗಳು

ಬೆಂಗಳೂರು, ಫೆಬ್ರವರಿ 24: ಜಾಗತಿಕವಾಗಿ ಅನೇಕ ಟೆಕ್ ಕಂಪನಿಗಳು ಕೊರೊನಾ ನಂತರವೂ 2023 ರಲ್ಲಿ ಬೃಹತ್ ಪ್ರಯಾಣದಲ್ಲಿ ನೌಕರರ ವಜಾಗೊಳಿಸುವ ಪ್ರಕ್ರಿಯೆ ಘೋಷಿಸಿದವು. ಸಾವಿವಾರು ಉದ್ಯೋಗಿಗಳು ಕೈಲಿದ್ದ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾದರು. ಅವರೆಲ್ಲ ಸಾಮಾಜಿಕ ಜಾಲತಾಣದಲ್ಲಿ ತಮ್ಮ ನೋವುಗಳನ್ನು ಹೇಳಿಕೊಂಡಿದ್ದಾರೆ. ಜಾಗತಿಕವಾಗಿ ಟೆಕ್ ಕಂಪನಿಗಳಾದ ಇನ್ಫೋಸಿಸ್, ಟಿಸಿಎಸ್, ವಿಪ್ರೋ ಮತ್ತು ಟೆಕ್ ಮಹೀಂದ್ರಾ ಒಂದು ವರ್ಷದಲ್ಲಿ 67,000 ಉದ್ಯೋಗಿಗಳನ್ನು ವಜಾಗೊಳಿಸಿವೆ. ಇದಷ್ಟೇ ಅಲ್ಲದೇ ನೇಮಕಾತಿ ನಿಧಾನಗೊಳಿಸಿವೆ. ಜತೆಗೆ ಈ ಮೊದಲಿನಂತೆ ಈಗೆಲ್ಲ ಕ್ಯಾಂಪಸ್ ಸೆಲೆಕ್ಷನ್ ಗಳನ್ನಂತು ಬಿಟ್ಟಿ ಬಿಟ್ಟಿವೆ.

ಐಟಿ ಉದ್ಯೋಗಿಗಳಿಗೆ 2023 ಕಠಿಣ ವರ್ಷ 2023ರ ವರ್ಷವು ಪ್ರಪಂಚದಾದ್ಯಂತದ ಐಟಿ ಉದ್ಯೋಗಿಗಳ ಪಾಲಿಗೆ ಅತ್ಯಂತ ಕಠೋರ ವರ್ಷ ಎಂದರೆ ತಪ್ಪಾಗಲಾರದು. ಏಕೆಂದರೆ ಅನೇಕ ಕಂಪನಿಗಳು ದೊಡ್ಡ ಪ್ರಮಾಣದದಲ್ಲಿ ತಮ್ಮ ನೌಕರರನ್ನು ಕಿತ್ತು ಹಾಕಿದವು.

ಬಳಿಕ ಅಂದು ಇದ್ದ ಸಾಮಾಜಿಕ ಜಾಲತಾಣ ಟ್ವಿಟ್ಟರ್ (ಎಕ್ಸ್) ನಲ್ಲಿ ಹಾಗೂ ಲಿಂಕ್‌ಡಿನ್ ನಲ್ಲಿ ತಮ್ಮ ಕರಾಳ ಕತೆಗಳನ್ಉ ಹಂಚಿಕೊಂಡಿದ್ದಾರೆ. ಮೆಟಾದಿಂದ ಗೂಗಲ್, ಅಮೆಜಾನ್ ಮತ್ತು ಮೈಕ್ರೋಸಾಫ್ಟ್ ವರೆಗೆ, ಅನೇಕ ಕಂಪನಿಗಳ ಮಾಜಿ ಉದ್ಯೋಗಿಗಳು ಮುಂದೆ ಗೋಳು ಹೇಳಿಕೊಳ್ಳುತ್ತಿದ್ದಾರೆ. ಭಾರತದಲ್ಲಿಯೂ ಸಹ ಅನೇಕ ಉದ್ಯೋಗಿಗಳು ವಜಾಗೊಳಿಸಲಾಗಿದೆ. ಇದರಿಂದ ಪ್ರಭಾವಿತರಾದ ಹಲವು ಹೊಸ ಉದ್ಯೋಗ ಹುಡುಕಲು ಅಥವಾ ತಮ್ಮ ಭಾವನೆಗಳನ್ನು ಸೂಕ್ತ ವೇದಿಕೆಗೆ ಹೊರ ಹಾಕುವ ಸಲುವಾಗಿ ಸಾಮಾಜಿಕ ಜಾಲತಾಣಗಳನ್ನು ಅವಲಂಬಿಸಿದರು.

67,000ಕ್ಕೂ ಹೆಚ್ಚು ನೌಕರರ ವಜಾ ವಿವರ ಹಾಗಾದರೆ ಯಾವ ಕಂಪನಿಗಳು ಎಷ್ಟೆಷ್ಟು ಉದ್ಯೋಗಿಗಳನ್ನು ತೆಗೆದುಹಾಕಿದ್ದಾರೆ ಎಂದು ಮಿಂಟ್ ವರದಿ ಅದರ ಪ್ರಕಾರ, ಕೇವಲ ಒಂದು ವರ್ಷದಲ್ಲಿ ಐಟಿ ಕ್ಷೇತ್ರಗಳ್ಲಲಿ ದೈತ್ಯ ಕಂಪನಿ ಎನ್ನಲಾಗುವ ನಾಲ್ಕು ಕಂಪನಿಗಳಾದ ‘ಇನ್ಫೋಸಿಸ್, ಟಿಸಿಎಸ್, ವಿಪ್ರೋ ಮತ್ತು ಟೆಕ್ ಮಹೀಂದ್ರಾ’ 67,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದವು. ಇದರಲ್ಲಿ ಇನ್ಫೋಸಿಸ್ 24,182 ಉದ್ಯೋಗಿಗಳನ್ನು ವಜಾಗೊಳಿಸಿದ್ದರೆ, ವಿಪ್ರೋ 21,875 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿತು. ಮತ್ತೊಂದೆಡೆ, ಟಾಟಾ ಕನ್ಸಲ್ಟೆಂಟ್ ಸವೀರ್ಸ (TCS) 10,818 ಜನರಿಗೆ ವಿದಾಯ ಹೇಳಿದರೆ, ಟೆಕ್ ಮಹೀಂದ್ರಾ 10,669 ನೌಕರರಿಗೆ ಗೇಟ್ ಪಾಸ್ ನೀಡಿತು.

Previous Post
ಕಾಂಗ್ರೆಸ್‌ಗೆ ಹಿನ್ನಡೆ; ಪಶ್ಚಿಮ ಬಂಗಾಳದ ಎಲ್ಲಾ 42 ಸ್ಥಾನಗಳಲ್ಲಿ ಸ್ಪರ್ಧೆಗೆ ಟಿಎಂಸಿ ನಿರ್ಧಾರ
Next Post
ಸುಳ್ಳಿನ ಕಾರ್ಖಾನೆ ಬಿಜೆಪಿಯವರಿಗೆ ಪ್ರತಿ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳ ಮೂಲಕವೇ ಉತ್ತರಿಸುತ್ತಿದ್ದೇವೆ: ಸಿ.ಎಂ.ಸಿದ್ದರಾಮಯ್ಯ

Recent News