8ನೇ ವೇತನ ಆಯೋಗದ ಜಾರಿಗೆ ಹೆಚ್ಚಾಯ್ತು ಒತ್ತಾಯ, ಅಪ್ಡೇಟ್ ಮಾಹಿತಿ

8ನೇ ವೇತನ ಆಯೋಗದ ಜಾರಿಗೆ ಹೆಚ್ಚಾಯ್ತು ಒತ್ತಾಯ, ಅಪ್ಡೇಟ್ ಮಾಹಿತಿ

ಬೆಂಗಳೂರು, ಏಪ್ರಿಲ್ 27: ಕೇಂದ್ರ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದಡಿ ಆರ್ಥಿಕ ಹೆಚ್ಚಳದ ಸೌಲಭ್ಯದ ಬೆನ್ನಲ್ಲೆ ಇದೀಗ 8ನೇ ವೇತನ ಆಯೋಗ (8th Pay Commission) ಅನ್ನು ತಕ್ಷಣದಿಂದಲೇ ಜಾರಿ ಮಾಡಬೇಕೆಂಬ ಆಗ್ರಹ ಹೆಚ್ಚಾಗಿದೆ. 8ನೇ ವೇತನ ಆಯೋಗದ ಜಾರಿಯ ಬಗ್ಗೆ ಕೇಂದ್ರ ಸರ್ಕಾರಿ ವ್ಯಾಪ್ತಿಯ ನೌಕರರು ಕುತೂಹಲದಿಂದ ಕಾಯುತ್ತಿದ್ದಾರೆ. ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಈ ಆಯೋಗ ಜಾರಿಯ ಪ್ರಸ್ತಾವ ಬಂದಿರುವುದು ತಿಳಿದು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯಕ್ಕೆ ಭಾರತೀಯ ರೈಲ್ವೇ ತಾಂತ್ರಿಕ ಮೇಲ್ವಿಚಾರಕರ ಸಂಘವು (IRTSA) ಸಿಬ್ಬಂದಿ ಹಾಗೂ ತರಬೇತಿ ಇಲಾಖೆ (DoPT) ಸಿಬ್ಬಂದಿಯು ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ 8ನೇ ವೇತನ ಆಯೋಗದ ಶೀಘ್ರ ಜಾರಿಗೆ ಅವರು ಮನವಿ ಮಾಡಿದ್ದಾರೆ. ಸಮಗ್ರ ಶಿಫಾರಸುಗಳನ್ನು ನೀಡಲು ಆಯೋಗಕ್ಕೆ ಸಾಕಷ್ಟು ಸಮಯವಿದೆ ಎಂದು ವಿವರಿಸಲಾಗಿದೆ. ಭವಿಷ್ಯದಲ್ಲಿ ನೌಕರರಿಗೆ, ಪಿಂಚಣಿದಾರರಿಗೆ ಅವಕಾಶ ನೀಡದೇ ಈಗಲೇ ಎಲ್ಲ ವಿಧದ ಕುಂದುಕೊರತೆ ಪರಿಹರಿಸಬೇಕಾದ ಅಗತ್ಯವಿದೆ ಎಂಬುದನ್ನು ಈ ಪತ್ರ ತಿಳಿಸಿದೆ. 8 ನೇ ವೇತನ ಆಯೋಗ: IRTSA ಇಟ್ಟ ಬೇಡಿಕೆಗಳೇನು? ಭಾರತೀಯ ರೈಲ್ವೇ ತಾಂತ್ರಿಕ ಮೇಲ್ವಿಚಾರಕರ ಸಂಘವು (IRTSA) ನೌಕರರು ತಮ್ಮ ಪತ್ರದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿದ್ದಾರೆ. ಹೊಸ ವೇತನ ಆಯೋಗದ ಶೀಘ್ರ ಜಾರಿಗೆ ಪ್ರಥಮ ಆದ್ಯತೆ ನೀಡಲಾಗಿದೆ. ಜೊತೆಗೆ ವಿವಿಧ ಗುಂಪುಗಳ ನೌಕರರ ವೇತನದಲ್ಲಿ ಸಮಾನತೆ ಕಾಪಾಡಿಕೊಂಡು ಅಸಮಾನತೆ, ಸಮಸ್ಯೆ ಪರಿಹರಿಸುವಂತೆ ಕೋರಲಾಗಿದೆ.

ಹೆಚ್ಚುವರಿ ವೇತನ, ಭತ್ಯೆಗಳು, ಸದ್ಯದ ಕೆಲಸದ ಪರಿಸ್ಥಿತಿ, ವರ್ಗೀಕರಣದಂತಹ ಅಸ್ತಿತ್ವದಲ್ಲಿರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಖು. ವೇತನ ಆಯೋಗ ಅನುಷ್ಠಾನ, ಶಿಫಾರಸು ಪರಿಗಣನೆಗೆ ಸಾಕಷ್ಟು ಸಮಯ ನೀಡುವಂತೆ ಸಂಘವು ಆಗ್ರಹಿಸಿದೆ. ಕೇಂದ್ರದ ನೌಕರರ ವೇತನ, ತುಟ್ಟಿಭತ್ಯೆ ಸೇರಿದಂತೆ ಇನ್ನಿತರ ಭತ್ಯೆಗಳು ಹಾಗೂ ಸೇವಾ ಷರತ್ತುಗಳನ್ನು ನಿಯತಕಾಲಿಕವಾಗಿ ಪರಿಶೀಲಿಸಲು ಶಾಶ್ವತ ವ್ಯವಸ್ಥೆ ಸ್ಥಾಪಿಸಲು 3 ನೇ, 4 ನೇ ಮತ್ತು 5 ನೇ CPC ಗಳನ್ನು ಪತ್ರದಲ್ಲಿ ತಿಳಿಸಲಾಗಿದೆ.6ನೇ CPC ತನ್ನ ಶಿಫಾರಸುಗಳನ್ನು ಕಾರ್ಯರೂಪಕ್ಕೆ ತರಲು ಸಂಘವು ಶಿಫಾರಸು ಮಾಡಿದೆ.

7ನೇ ವೇತನ ಆಯೋಗದಿಂದ ಆದ ಬದಲಾವಣೆಗಳು ಹಳೆಯ 7 ನೇ ಕೇಂದ್ರ ವೇತನ ಆಯೋಗದಿಂದ ಕೆಲವು ಬದಲಾವಣೆಗಳು ಆದವು. ಅವು ಈವರ್ಷದವರೆಗೂ ಮುಂದುವರೆಇದೆ. ಹಿಂದಿನ ಹತ್ತು ವರ್ಷಗಳವರೆಗೆ ಕಾಲ ಕಾಲಕ್ಕೆ ತಕ್ಕಂತೆ ವೇತನ ಆಯೋಗದಡಿ ಸೌಲಭ್ಯ ಕಲ್ಪಿಸುವ ಜೊತೆಗೆ ಸಮಸ್ಯೆ ನಿವಾರಿಸುವಂತೆ ಸಂಘ ಮನವಿ ಮಾಡಿದೆ. IRTSA ಪ್ರಕಾರ, 2016 ರಲ್ಲಿ 7ನೇ CPC ಶಿಫಾರಸುಗಳ ಅನುಷ್ಠಾನದಿಂದ, ಸರ್ಕಾರಿ ಕಾರ್ಯಾಚರಣೆಗಳು, ಆರ್ಥಿಕತೆ, ತೆರಿಗೆ ಸಂಗ್ರಹಣೆಗಳು, ಸೇವೆ ಮತ್ತು ಬೇಡಿಕೆಗಳು ಮತ್ತು ಬಡತನದ ಮಟ್ಟಗಳಲ್ಲಿ ಗಮನಾರ್ಹ ಬದಲಾವಣೆಗಳು ಕಂಡು ಬಂದಿವೆ. ನ್ಯಾಯಾಲಯದಲ್ಲಿ ಸಿಲುಕುವಂತೆ ಮಾಡಬಾರದು ವೇತನ ಮಟ್ಟ, ಹೆಚ್ಚಳ, ವೇತನ ನಿಗದಿ, ಬಡ್ತಿಗಳು, ಎಂಎಸಿಪಿಎಸ್, ನಿವೃತ್ತಿ ಪ್ರಯೋಜನಗಳು ಇತ್ಯಾದಿಗಳಲ್ಲಿನ ಕುಂದು ಕೊರತೆಗಳಲ್ಲಿನ ಸಂಬಂಧಿಸಿದಂತೆ ದೇಶದಾದ್ಯಂತ ವಿವಿಧ ನ್ಯಾಯಾಲಯಗಳಲ್ಲಿ ಹಲವಾರು ಕಾನೂನು ಪ್ರಕರಣಗಳು ಬಾಕಿ ಉಳಿದಿವೆ. ವೇತನ ಆಯೋಗದ ವಿಚಾರ ಕುರಿತು ನ್ಯಾಯಾಲಯಗಳ ಅಮೂಲ್ಯ ಸಮಯ ಹಾಗೂ ಸರ್ಕಾರದ ಕಾರ್ಯ ನಿರ್ವಹಣೆಯ ದಕ್ಷತೆಯ ಮೇಲೆ ಪರಿಣಾಮ ಬೀರುತ್ತವೆ. ಸಾರ್ವಜನಿಕ ಸೇವೆಗಳಲ್ಲಿನ ದಕ್ಷತೆಗೆ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದು. ಸಾರ್ವಜನಿಕ ಸೇವೆಯ ಗುಣಮಟ್ಟದಲ್ಲಿ ನಿರಂತರ ಸುಧಾರಣೆ ಮತ್ತು ಆಡಳಿತಾತ್ಮಕ ಸುಧಾರಣೆಗಳಿಗೆ ಅವಕಾಶ ನೀಡಬೇಕು. ಇದೆಲ್ಲ ಕುಂದುಕೊರತೆ ತೊಡೆದು ಹಾಕಲು ಹೊಸ ವೇತನ ಆಯೋಗ (8 ನೇ)ಜಾರಿಗೊಳಿಸಬೇಕು ಎಂದು ಸಂಘ ಕೇಳಿಕೊಂಡಿದೆ.

Previous Post
10 ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದ ಜಲಾಶಯಗಳ ಮಟ್ಟ!
Next Post
ಮತದಾನದ ದಿನವೇ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಮೇಲೆ ಪ್ರಕರಣ!

Recent News