ರಾಜ್ಯಸಭಾ ಚುನಾವಣೆ: 7 ಅಭ್ಯರ್ಥಿಗಳಿಂದ 18 ನಾಮಪತ್ರಗಳು ಸಲ್ಲಿಕೆ

ರಾಜ್ಯಸಭಾ ಚುನಾವಣೆ: 7 ಅಭ್ಯರ್ಥಿಗಳಿಂದ 18 ನಾಮಪತ್ರಗಳು ಸಲ್ಲಿಕೆ

ಬೆಂಗಳೂರು, ಫೆಬ್ರವರಿ 15 (ಕರ್ನಾಟಕ ವಾರ್ತೆ):- ರಾಜ್ಯಸಭೆಯ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು 6 ಅಭ್ಯರ್ಥಿಗಳಿಂದ ಒಟ್ಟು 17 ನಾಮಪತ್ರಗಳು ಸಲ್ಲಿಕೆಯಾಗಿವೆ.

ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ನಾರಾಯಣಸಾ.ಕೆ ಭಾಂಡಗೆ ಅವರು ಎರಡು ನಾಮಪತ್ರ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಲಾಗಿ ಅಜಯ್ ಮಾಕೇನ್ ಅವರು ನಾಲ್ಕು ನಾಮಪತ್ರ, ಜಿ.ಸಿ. ಚಂದ್ರಶೇಖರ್ ಅವರು ನಾಲ್ಕು ನಾಮಪತ್ರ ಮತ್ತು ನಾಸೀರ್ ಹುಸೇನ್ ಅವರು ನಾಲ್ಕು ನಾಮಪತ್ರ, ಜನತಾದಳ (ಜಾತ್ಯಾತೀತ) ಪಕ್ಷದ ಅಭ್ಯರ್ಥಿಯಾಗಿ ಡಿ.ಕುಪೇಂದ್ರ ರೆಡ್ಡಿ ಅವರು ನಾಲ್ಕು ನಾಮಪತ್ರ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಕೆಂಗನೂರು ಅವರು ಒಂದು ನಾಮಪತ್ರವನ್ನು ಸಲ್ಲಿಸಿರುತ್ತಾರೆ.

ಪಕ್ಷೇತರ ಅಭ್ಯರ್ಥಿಯಾಗಿ ಡಾ. ಕೆ.ಪದ್ಮರಾಜನ್ ಅವರು ಫೆಬ್ರವರಿ 8 ರಂದು ಅವರು ಒಂದು ನಾಮಪತ್ರ ಸಲ್ಲಿಸಿರುತ್ತಾರೆ. ರಾಜ್ಯಸಭಾ ಚುನಾವಣೆಗೆ ಒಟ್ಟು 7 ಅಭ್ಯರ್ಥಿಗಳಿಂದ 18 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರಗಳ ಪರಿಶೀಲನಾ ಕಾರ್ಯ ಫೆಬ್ರವರಿ 16 ರಂದು ನಡೆಯಲಿದ್ದು, ಫೆಬ್ರವರಿ 20 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.

Previous Post
ರಾಜ್ಯಸಭೆ ಚುನಾವಣೆ: ಕುಪೇಂದ್ರರೆಡ್ಡಿ 5ನೇ ಅಭ್ಯರ್ಥಿ, ರಂಗೇರಿದ ಅಖಾಡ
Next Post
ಕಾಂಗ್ರೆಸ್‌ನ INDIA ಮೈತ್ರಿಕೂಟಕ್ಕೆ ಮತ್ತೊಂದು ಹಿನ್ನಡೆ!

Recent News