ಕಾಶಿ ಕಾರಿಡಾರ್ ಉದ್ಘಾಟನೆ ಬಳಿಕ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ

ಕಾಶಿ ಕಾರಿಡಾರ್ ಉದ್ಘಾಟನೆ ಬಳಿಕ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ

ಲಕ್ನೋ : ವಾರಣಾಸಿಯಲ್ಲಿ ಕಾಶಿ ಕಾರಿಡಾರ್ ಉದ್ಘಾಟಿಸಿದ ಬಳಿಕ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು ಕಳೆದ 26 ತಿಂಗಳಲ್ಲಿ 14 ಕೋಟಿಗೂ ಅಧಿಕ ಜನರು ಪುಣ್ಯ ಕ್ಷೇತ್ರದ ದರ್ಶನ ಪಡೆದಿದ್ದಾರೆ, ಈ‌ ಮೊದಲಿಗೆ ಹೋಲಿಸಿದರೆ ಕಾಶಿಗೆ ಬರುವ ಭಕ್ತರ ಸಂಖ್ಯೆ ಐದು ಪಟ್ಟು ಹೆಚ್ಚಳವಾಗಿದೆ ಎಂದು ಕಾಶಿ ವಿಶ್ವನಾಥ ದೇವಸ್ಥಾನದ ಸಿಇಒ ವಿಷ್ಣು ಭೂಷಣ್ ಸಿಂಗ್ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, ಕಾರಿಡಾರ್ ಪ್ರಾರಂಭವಾದಾಗಿನಿಂದ ಯಾತ್ರಿಕರ ಸಂಖ್ಯೆ. ಹಿಂದೆ ಪ್ರತಿದಿನ ಸುಮಾರು 20,000 ರಿಂದ 25,000 ಯಾತ್ರಿಕರು ಮಾತ್ರ ದೇವಾಲಯಕ್ಕೆ ಭೇಟಿ ನೀಡುತ್ತಿದ್ದರು. ಆದರೆ ಕಾರಿಡಾರ್ ಪ್ರಾರಂಭವಾದಾಗಿನಿಂದ, ನಿತ್ಯ ಸುಮಾರು 1.5 ಲಕ್ಷ ಯಾತ್ರಾರ್ಥಿಗಳು ಆಗಮಿಸುತ್ತಿದ್ದಾರೆ. ಸಾವನ್ ದಿನಗಳಲ್ಲಿ ಭಕ್ತರ ಸಂಖ್ಯೆ ಇನ್ನು ಹೆಚ್ಚಿರುತ್ತದೆ ಎಂದು ತಿಳಿಸಿದರು.

ಮುಂದುವರಿದು ಲಲಿತಾ ಘಾಟ್‌ನಿಂದ ದೇವಸ್ಥಾನದವರೆಗಿನ ಕಾರಿಡಾರ್ ಅನ್ನು ಡಿಸೆಂಬರ್ 2021 ರಲ್ಲಿ ಪ್ರಧಾನ ಮಂತ್ರಿಯವರು ಉದ್ಘಾಟಿಸಿದರು. ಅಂದಿನಿಂದ ಫೆಬ್ರವರಿ 23 ರವರೆಗೆ 14.12 ಕೋಟಿ ಯಾತ್ರಾರ್ಥಿಗಳು ದೇವಾಲಯಕ್ಕೆ ಭೇಟಿ ನೀಡಿದ್ದಾರೆ, ಕಳೆದ ಡಿಸೆಂಬರ್‌ನಲ್ಲಿ ಸುಮಾರು 50 ಲಕ್ಷ ಯಾತ್ರಾರ್ಥಿಗಳು ಮತ್ತು ಈ ಜನವರಿಯಲ್ಲಿ 46.5 ಲಕ್ಷ ಯಾತ್ರಿಕರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಜ್ಞಾನವ್ಯಾಪಿ ಮಸೀದಿ ಬಗ್ಗೆ ಮಾತನಾಡಿ, ಈ ಬಗ್ಗೆ ಶೀಘ್ರದಲ್ಲೇ ನ್ಯಾಯಾಲಯದ ತೀರ್ಪು ಬರಬೇಕು, ನೀವು ಎಂದಾದರೂ ನಂದಿ ಮಸೀದಿಯತ್ತ ಮುಖ ಮಾಡಿರುವುದನ್ನು ನೋಡಿದ್ದೀರಾ? ಮಸೀದಿಯ ಆವರಣದಲ್ಲಿ ಮೂಲ ಶಿವಲಿಂಗವಿರುವುದರಿಂದ ನಂದಿಯು ವಝುಖಾನ ಎಂದು ಕರೆಯಲ್ಪಡುವ ಕಡೆಗೆ ಮುಖಮಾಡಿದೆ ಎಂದು ಇಲ್ಲಿನ ಅರ್ಚಕರು ಹೇಳುತ್ತಾರೆ. ಜ್ಞಾನವಾಪಿ ಸ್ಥಳದಲ್ಲಿ ಹಿಂದೂ ದೇವಾಲಯವಿತ್ತು ಎಂಬುದಕ್ಕೆ ಅಗಾಧವಾದ ಪುರಾವೆಗಳ ಹಿನ್ನೆಲೆಯಲ್ಲಿ ಇದು ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಸಂಬಂಧಿಸಿದೆ ಎಂದರು.

Previous Post
ಚುನಾವಣಾ ದಿನಾಂಕ ಬಿಡುಗಡೆಗೂ ಮುನ್ನ ಯುಪಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಘೋಷಣೆ?
Next Post
ದೇಶದ ಅತೀ ಉದ್ದದ ಕೇಬಲ್‌ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ

Recent News