BBMP: ಶೇ.60ರಷ್ಟು ಕನ್ನಡ ಕಡ್ಡಾಯ ಗಡುವು 2 ವಾರ ವಿಸ್ತರಣೆ

BBMP: ಶೇ.60ರಷ್ಟು ಕನ್ನಡ ಕಡ್ಡಾಯ ಗಡುವು 2 ವಾರ ವಿಸ್ತರಣೆ

ಬೆಂಗಳೂರು, ಫೆಬ್ರವರಿ 29: ಬೆಂಗಳೂರಿನಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳು ಹಾಗೂ ವಾಣಿಜ್ಯ ಮಳಿಗೆಗಳಲ್ಲಿ ಶೇಕಡಾ 60ರಷ್ಟು ಕನ್ನಡ ಗಡುವು ನೆನ್ನೆ ಬುಧವಾರ (ಫೆಬ್ರವರಿ 28) ಪೂರ್ಣಗೊಂಡಿದೆ. ಇದೀಗ ಈ ಗಡುವನ್ನು ವಿಸ್ತರಣೆ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧಿಕೃತ ಮಾಹಿತಿ ನೀಡಿದ್ದಾರೆ. ಈ ಕುರಿತು ಗುರುವಾರ ಬೆಳಗ್ಗೆ ಟ್ವೀಟ್ ಮಾಡಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು, ಬೆಂಗಳೂರಿನ ಎಲ್ಲಾ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು ಮೊದಲಾದಕಡೆ ಶೇಕಡಾ 60ರಷ್ಟು ಕನ್ನಡ ನಾಮಫಲಕಗಳನ್ನು ಅಳವಡಿಸಲು ಹೆಚ್ಚಿನ ಸಮಯ ಬೇಕೆಂಬುದನ್ನು ಪರಿಗಣಿಸಲಾಗಿದೆ.

ಈಗಾಗಲೇ ನೀಡಲಾಗಿದ್ದ ಗಡುವನ್ನು ಮುಂದಿನ 2 ವಾರಗಳ‌ ಕಾಲ ವಿಸ್ತರಿಸಲಾಗಿದೆ. ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ, ಹಾಗಾಗಿ ನಮ್ಮ ಹೃದಯದ ಭಾಷೆಯನ್ನು ಎತ್ತಿ‌ಹಿಡಿಯುವುದು ಅತಿ ಮುಖ್ಯ. 2 ವಾರಗಳ‌ ನಂತರ ಎಲ್ಲರೂ ಕಾನೂನು ಪಾಲನೆ ಮಾಡುತ್ತಾರೆ‌ ಎಂದು ನಿರೀಕ್ಷಿಸಿದ್ದೇನೆ ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಗುಡುವು ಮಾರ್ಚ್ 5ರವರೆಗೆ ವಿಸ್ತರಣೆ: ಡಿಕೆಶಿ ಫೆ. 28ರ ವರೆಗೆ ಇದ್ದ ಗುಡುವು ಮಾರ್ಚ್ 5ರವರೆಗೆ ವಿಸ್ತರಣೆ ಆಗಿದೆ. ಸದ್ಯ ನಾಮಫಲಕಗಳಲ್ಲಿ ಕನ್ನಡ ಬಳಕೆ ಮಾಡದವರಿಗೆ ಮತ್ತೊಂದು ಅಳವಡಿಕೆಗೆ ಮತ್ತೊಮ್ಮೆ ಗಡುವು ಸಿಕ್ಕಿದೆ.

ಶೇಕಡಾ 60ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸಿಕೊಳ್ಳದ ಉದ್ದಿಮೆಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸರ್ಕಾರ ತಿಳಿಸಿಸಿತ್ತು. ಅದರ ಬೆನ್ನಲ್ಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಬುಧವಾರಷ್ಟೇ ಸುತ್ತೋಲೆ ಹೊರಡಿಸಿ, ಕನ್ನಡ ನಿಯಮ ಪಾಲಿಸದವರ ವಾಣಿಜ್ಯೋದ್ಯಮಿಗಳ, ಅಂಗಡಿ ಮುಂಗಟ್ಟುಗಳು ಪರವಾನಿಗೆಯನ್ನು ಆಯಾ ಇಲಾಖೆಗಳು ಅಮಾನತು ಮಾಡುವಂತೆ ತಿಳಿಸಿತ್ತು.

ಇದರ ಬೆನ್ನಲ್ಲೆ ಎಂಟು ವಲಯಗಳಲ್ಲಿ ಎಷ್ಟು ಉದ್ದಿಮೆದಾರರು ನಾಮಫಲಕಗಳಲ್ಲಿ ಕನ್ನಡ ಅನುಷ್ಠಾನಕ್ಕೆ ತಂದಿದ್ದಾರೆ ಎಂಬ ಮಾಹಿತಿ ನೀಡಿತ್ತು. ಇದೀಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕಡ್ಡಾಯ ಕನ್ನಡ ಬಳಕೆಗೆ ಅಳವಡಿಕೆಗೆ ಗಡುವು ವಿಸ್ತರಣೆ ಮಾಡಿ ತಿಳಿಸಿದ್ದಾರೆ.

Previous Post
ಇಂದು ಬಿಜೆಪಿ ಮೊದಲ ಪಟ್ಟಿ ಬಿಡುಗಡೆ- ಇಲ್ಲಿದೆ 41 ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ
Next Post
ಆಪರೇಷನ್ ಕಮಲ ಮಾಡಿದ್ದೇ ಮಿಸ್ಟರ್ ಯಡಿಯೂರಪ್ಪ: ಸದನದಲ್ಲಿ ಸತ್ಯ ಬಿಚ್ಚಿಟ್ಟ ಸಿದ್ದರಾಮಯ್ಯ

Recent News