ಗಾಜಾ ನೆರವು ಕೇಂದ್ರದಲ್ಲಿ ಜನರ ಮೇಲೆ ಇಸ್ರೇಲ್‌ ಸೈನಿಕರ ಗುಂಡಿನ ದಾಳಿ, 104 ಮಂದಿ ಸಾವು

ಗಾಜಾ ನೆರವು ಕೇಂದ್ರದಲ್ಲಿ ಜನರ ಮೇಲೆ ಇಸ್ರೇಲ್‌ ಸೈನಿಕರ ಗುಂಡಿನ ದಾಳಿ, 104 ಮಂದಿ ಸಾವು

ಪ್ಯಾಲೆಸ್ತೀನ್: ಗಾಜಾದ ನೆರವು ಕೇಂದ್ರದಲ್ಲಿ ಪ್ಯಾಲೆಸ್ತೀನಿಯನ್ನರ ಗುಂಪಿನ ಮೇಲೆ ಇಸ್ರೇಲ್‌ ಪಡೆಗಳು ನಡೆಸಿದ ಗುಂಡಿನ ದಾಳಿಗೆ 104 ಮಂದಿ ಸಾವನ್ನಪ್ಪಿದ್ದು, 700 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನಗರದ ಪಶ್ಚಿಮ ನಬುಲ್ಸಿ ವೃತ್ತದಲ್ಲಿ ಆಹಾರಕ್ಕಾಗಿ ಸಾವಿರಾರು ಜನರು, ಸಹಾಯ ಟ್ರಕ್‌ಗಳ ಕಡೆಗೆ ಧಾವಿಸಿದ್ದರು. ಈ ವೇಳೆ ಇಸ್ರೇಲ್‌ ಪಡೆ ಹಿಂಸಾಚಾರ ನಡೆಸಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ನೆರವಿನ ಟ್ಯಾಂಕ್‌ಗಳು ಸೇನಾಪಡೆ ಇದ್ದ ಜಾಗಕ್ಕೆ ಹತ್ತಿರದಲ್ಲಿದ್ದವು. ಜನರು ಟ್ಯಾಂಕ್‌ಗಳ ಹತ್ತಿರ ನೆರವಿಗಾಗಿ ನುಗ್ಗುತ್ತಿದ್ದಂತೆ, ಗುಂಪಿನ ಮೇಲೆ ಸೈನಿಕರು ಗುಂಡಿನ ದಾಳಿ ನಡೆಸಿದ್ದಾರೆ. ಉತ್ತರ ಗಾಜಾ ಪಟ್ಟಿಗೆ ಮಾನವೀಯ ನೆರವು ಟ್ರಕ್‌ಗಳು ಬಂದಿದ್ದವು. ಗಜಾನ್ ನಿವಾಸಿಗಳು ಟ್ರಕ್‌ಗಳನ್ನು ಸುತ್ತುವರಿದು, ಸರಬರಾಜನ್ನು ಲೂಟಿ ಮಾಡಲು ಪ್ರಯತ್ನಿಸಿದರು. ಹೀಗಾಗಿ ಗುಂಡು ಹಾರಿಸಲಾಗಿದೆ. ಘಟನೆಯಲ್ಲಿ ತಳ್ಳಾಟ-ನೂಕಾಟದಿಂದ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್‌ ಸೇನೆ ತಿಳಿಸಿದೆ. ಗಾಜಾದ ಜನಸಮೂಹವು ಸೈನ್ಯಕ್ಕೆ ಬೆದರಿಕೆಯನ್ನುಂಟು ಮಾಡುವ ರೀತಿಯಲ್ಲಿ ಪಡೆಗಳನ್ನು ಸಮೀಪಿಸಿತ್ತು. ಹೀಗಾಗಿ ಸೇನೆ ದಾಳಿ ನಡೆಸಿದೆ ಎಂದು ಇಸ್ರೇಲ್‌ ಮೂಲಗಳು ತಿಳಿಸಿವೆ.

Previous Post
ನಿರೀಕ್ಷೆಗೂ ಮೀರಿ ಜಿಡಿಪಿ ಅಭಿವೃದ್ಧಿ, 3ನೇ ತ್ರೈಮಾಸಿಕದಲ್ಲಿ 8.4% ಪ್ರಗತಿ
Next Post
ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 25 ರೂ. ಹೆಚ್ಚಳ

Recent News