ವಿಡಿಯೋ ಕಾನ್ಫರೇನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ಸಿದ್ಧ ಇಡಿ ಸಮನ್ಸ್‌ಗೆ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ

ವಿಡಿಯೋ ಕಾನ್ಫರೇನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ಸಿದ್ಧ ಇಡಿ ಸಮನ್ಸ್‌ಗೆ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ

ನವದೆಹಲಿ : ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸಮನ್ಸ್‌ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ ನೀಡಿದ್ದಾರೆ. ಇಡಿಯ 8ನೇ ಸಮನ್ಸ್‌ಗೆ ಉತ್ತರ ನೀಡಿರುವ ಕೇಜ್ರಿವಾಲ್, ಸಮನ್ಸ್ ಕಾನೂನು ಬಾಹಿರ. ಆದರೂ, ವಿಡಿಯೋ ಕಾನ್ಪರೆನ್ಸ್ ಮೂಲಕ ಮಾರ್ಚ್‌ 12ರಂದು ವಿಚಾರಣೆ ಎದುರಿಸಲು ಸಿದ್ದನಿದ್ದೇನೆ ಎಂದಿದ್ದಾರೆ. ಆದರೆ, ಕೇಜ್ರಿವಾಲ್‌ ಅವರನ್ನು ನೇರವಾಗಿ ವಿಚಾರಣೆ ನಡೆಸಲು ಇಡಿ ಪಟ್ಟು ಹಿಡಿದಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಅವಕಾಶವಿಲ್ಲ ಎಂದಿದೆ.

ಫೆಬ್ರವರಿ 27 ರಂದು 8ನೇ ಸಮನ್ಸ್ ನೀಡಿರುವ ಇಡಿ, ಮಾರ್ಚ್‌ 4ರಂದು ತನ್ನ ಪ್ರಧಾನ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ, ಇಂದು ವಿಚಾರಣೆಗೆ ಕೇಜ್ರಿವಾಲ್ ಗೈರಾಗಿದ್ದಾರೆ. ದೆಹಲಿ ಅಬಕಾರಿ ನೀತಿ (2021-22)ಯ ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮಗಳ ಆರೋಪಕ್ಕೆ ಸಂಬಂಧಪಟ್ಟ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯನ್ನು ಇಡಿ ನಡೆಸುತ್ತಿದೆ.

ಉದ್ಯಮಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಅಬಕಾರಿ ನೀತಿ ರೂಪಿಸಲು ಲಂಚ ಪಡೆದಿರುವ ಆರೋಪ ಎಎಪಿ ನಾಯಕರ ವಿರುದ್ದ ಕೇಳಿ ಬಂದಿದೆ. ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಇದುವರೆಗೆ ಅರವಿಂದ್ ಕೇಜ್ರಿವಾಲ್ ಇಡಿ ಏಳು ಸಮನ್ಸ್‌ಗಳನ್ನು ನೀಡಿದೆ. ಅವೆಲ್ಲವನ್ನೂ ಕಾನೂನು ಬಾಹಿರ ಎಂದಿರುವ ಕೇಜ್ರಿವಾಲ್ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದಾರೆ. ಈ ಸಂಬಂಧ ಕೇಜ್ರಿವಾಲ್ ವಿರುದ್ದ ಇಡಿ ಕೋರ್ಟ್‌ ಮೆಟ್ಟಿಲೇರಿದೆ. ಕೇಜ್ರಿವಾಲ್ ಅವರನ್ನು ವಿಚಾರಣೆ ನಡೆಸಿರುವ ಕೋರ್ಟ್ ಆದೇಶ ಕಾಯ್ದಿರಿಸಿದೆ. ಅಬಕಾರಿ ನೀತಿ ಹಗರಣ ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಪಟ್ಟಂತೆ ಎಎಪಿ ನಾಯಕಾರದ ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಈಗಾಗಲೇ ಜೈಲು ಸೇರಿದ್ದಾರೆ.

Previous Post
ದೆಹಲಿ ಸರ್ಕಾರದಿಂದ 2024-25ನೇ ಸಾಲಿನ‌ ವರ್ಷದ ಬಜೆಟ್‌ ಮಂಡನೆ ʻಮುಖ್ಯಮಂತ್ರಿ ಮಹಿಳಾ ಸಮ್ಮಾನ್ʼಯೋಜನೆ ಘೋಷಣೆ
Next Post
ಆಪ್ ಕಚೇರಿ ಖಾಲಿ ಮಾಡಲು ಜೂನ್‌ವರೆಗೆ ಸುಪ್ರೀಂಕೋರ್ಟ್ ಗಡವು

Recent News