ಎಲ್ಲ ಪೆಟ್ರೋಲ್‌ ಬಂಕ್‌ಗಳಲ್ಲಿ ಮೋದಿ ಕಿ ಗ್ಯಾರಂಟಿ ಹೋರ್ಡಿಂಗ್‌ ಅಳವಡಿಕೆಗೆ ಸೂಚನೆ

ಎಲ್ಲ ಪೆಟ್ರೋಲ್‌ ಬಂಕ್‌ಗಳಲ್ಲಿ ಮೋದಿ ಕಿ ಗ್ಯಾರಂಟಿ ಹೋರ್ಡಿಂಗ್‌ ಅಳವಡಿಕೆಗೆ ಸೂಚನೆ

ನವದೆಹಲಿ, ಮಾ. 7: ಸರ್ಕಾರಿ ಒಡೆತನದ ಇಂದನ ರಿಟೇಲರ್‌ಗಳು ಈಗ ಪೆಟ್ರೋಲ್‌ ಬಂಕ್‌‌ಗಳಲ್ಲಿರುವ ಸರ್ಕಾರಿ ಕಲ್ಯಾಣ ಯೋಜನೆಗಳ ಹೋರ್ಡಿಂಗ್‌ಗಳಲ್ಲಿ “ಮೋದಿ ಸರ್ಕಾರ್‌ ಕಿ ಗ್ಯಾರಂಟಿ ಮತ್ಲಬ್‌ ಆಸಾನ್‌ ಜೀವನ್‌ ಕಿ ಗ್ಯಾರಂಟಿ” (ಮೋದಿ ಸರ್ಕಾರದ ಗ್ಯಾರಂಟಿಯ ಅರ್ಥವೆಂದರೆ ಸುಲಭ ಜೀವನದ ಗ್ಯಾರಂಟಿ) ಎಂದು ಬರೆಯಲಾಗಿರುವ ಹೊಸ ಹೋರ್ಡಿಂಗ್‌ಗಳನ್ನು ಅಳವಡಿಸಲು ಸೂಚನೆ ನೀಡಲಾಗಿದೆ.
ಬುಧವಾರ ಸಂಜೆಯೊಳಗೆ ಈ ಹೊಸ ಫ್ಲೆಕ್ಸ್‌ ಹೋರ್ಡಿಂಗ್‌ಗಳನ್ನು ಅಳವಡಿಸಲು ಸಹಕರಿಸಬೇಕು ಎಂದು ಎಲ್ಲಾ ಪೆಟ್ರೋಲ್‌ ಬಂಕ್‌ ಮ್ಯಾನೇಜರ್‌ಗಳಿಗೆ ಹೇಳಲಾಗಿದೆ. ಈ ಹೋರ್ಡಿಂಗ್‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಉಜ್ವಲ ಯೋಜನೆಯ ಫಲಾನುಭವಿಯೊಬ್ಬರಿಗೆ ಎಲ್‌ಪಿಜಿ ಸಿಲಿಡರ್‌ ನೀಡುವ ಫೋಟೋ ಕೂಡ ಇದೆ. ತೈಲ ಕಂಪನಿಗಳು ನಿಯೋಜಿಸಲ್ಪಟ್ಟ ಹೋರ್ಡಿಂಗ್‌ ಅಳವಡಿಸುವವರು ಬಾರದೇ ಇದ್ದಲ್ಲಿ ಆಯಾ ಮೇಲಧಿಕಾರಿಗಳಿಗೆ ತಿಳಿಸುವಂತೆಯೂ ಮ್ಯಾನೇಜರ್‌ಗಳಿಗೆ ಸೂಚಿಸಲಾಗಿದೆ ಎಂದು ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಕೇಂದ್ರ ತೈಲ ಸಚಿವಾಲಯದ ಅನೌಪಚಾರಿಕ ಸೂಚನೆಯಂತೆ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದ್ದು, ಇದರಿಂದಾಗಿ ಇಂಡಿಯನ್‌ ಆಯಿಲ್‌, ಹಿಂದುಸ್ತಾನ್‌ ಪೆಟ್ರೋಲಿಯಂ ಮತ್ತು ಭಾರತ್‌ ಪೆಟ್ರೋಲಿಯಂ ಸಂಸ್ಥೆಗಳು ನೂರಾರು ಕೋಟಿ ರೂಪಾಯಿ ವೆಚ್ಚ ಭರಿಸಬೇಕಾಗುತ್ತದೆ, ದೇಶದಲ್ಲಿರುವ ಸುಮಾರು 88,000 ಪೆಟ್ರೋಲ್‌ ಬಂಕ್‌ಗಳಲ್ಲಿ ಶೇ 90ರಷ್ಟು ಬಂಕ್‌ಗಳು ಈ ಮೂರು ಕಂಪನಿಗಳ ಒಡೆತನದಲ್ಲಿದೆ. ಆದರೆ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿದಾಕ್ಷಣ ಇಂತಹ ಹೋರ್ಡಿಂಗ್‌ಗಳನ್ನು ತೆಗೆಯಬೇಕಾಗುತ್ತದೆ. ಇಷ್ಟು ಕಡಿಮೆ ಅವಧಿಗೆ ನೂರಾರು ಕೋಟಿ ರೂ.ಗಳನ್ನು ಖರ್ಚು ಮಾಡುವ ಅಗತ್ಯವಿದೆಯೇ ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ.

Previous Post
ಮಹಾರಾಷ್ಟ್ರ NDA ಕೂಟದಲ್ಲಿ ಬಗೆಹರಿಯದ ಸೀಟು ಹಂಚಿಕೆ
Next Post
ನ್ಯಾ. ಅಭಿಜಿತ್ ಗಂಗೋಪಾಧ್ಯಾಯ ಬಿಜೆಪಿ ಸೇರ್ಪಡೆ

Recent News