ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ 5 ಗ್ಯಾರಂಟಿ

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ 5 ಗ್ಯಾರಂಟಿ

ನವದೆಹಲಿ, ಮಾ. 7: ಕರ್ನಾಟಕದ ಕಾಂಗ್ರೆಸ್ ನಿಂದ ಶುರುವಾದ ಗ್ಯಾರಂಟಿ ಭರವಸೆ ಈಗ ಲೋಕ ಸಮರದಲ್ಲಿ ಜೋರಾಗಿ ನಡೆಯುತ್ತಿದೆ. ನರೇಂದ್ರ ಮೋದಿ ನೀಡುತ್ತಿರುವ ಗ್ಯಾರಂಟಿಗಳಿಗೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳ ಅಸ್ತ್ರ ಬಿಟ್ಟಿದೆ. ರೈತರು, ಯುವಕರು, ಅಸಂಘಟಿತ ವಲಯದವರು, ಯುವೋದ್ಯಮಿಗಳು ಹೀಗೆ ವಿವಿಧ ವಲಯದ ಜನರನ್ನು ಆಕರ್ಷಿಸುವಂತಹ ಖಾತ್ರಿ ಭರವಸೆಗಳನ್ನು ಕಾಂಗ್ರೆಸ್ ನೀಡಿದೆ.

ದೇಶದ ಯುವಕರಿಗೆ ಉದ್ಯೋಗ ಕೊಡುವ ಉದ್ದೇಶ ಪ್ರಧಾನಿ ಮೋದಿಗೆ ಇಲ್ಲ ಎಂದು ಹಂಗಿಸಿರುವ ರಾಹುಲ್ ಗಾಂಧಿ, ಖಾಲಿ ಉಳಿದಿರುವ 30 ಲಕ್ಷ ಸರ್ಕಾರಿ ನೌಕರಿಗಳನ್ನು ಭರ್ತಿ ಮಾಡುವುದಾಗಿ ದೊಡ್ಡ ಭರವಸೆ ಕೂಡ ನೀಡಿದ್ದಾರೆ. ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ನೀಡಿರುವ ಐದು ಗ್ಯಾರಂಟಿಗಳು ಈ ಕೆಳಕಂಡಂತಿವೆ.

ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತ್ರಿ
ಗುತ್ತಿಗೆ ಕೆಲಸಗಾರರಿಗೆ (ಗಿಗ್ ವರ್ಕರ್ಸ್) ಸಾಮಾಜಿಕ ಭದ್ರತೆ
ಖಾಲಿ ಇರುವ 30 ಲಕ್ಷ ಸರ್ಕಾರಿ ನೌಕರಿಗಳ ನೇಮಕಾತಿ
ಸರ್ಕಾರಿ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಯ ಸೋರಿಕೆ ತಡೆಯಲು ಕಠಿಣ ಕಾನೂನು
ಸ್ಟಾರ್ಟಪ್ಗಳಿಗೆ 5,000 ಕೋಟಿ ರೂ ಫಂಡ್ ನಿಯೋಜನೆ
ಯುವಕರತ್ತ ಕಾಂಗ್ರೆಸ್ ಚಿತ್ತ… ಯುವಕರಿಗೆ ಅಪ್ರೆಂಟಿಸ್ ಅಥವಾ ತರಬೇತಿ ಹಕ್ಕು ಒದಗಿಸುವ ಭರವಸೆಯನ್ನು ಕಾಂಗ್ರೆಸ್ ಪರಿಶೀಲಿಸುತ್ತಿದೆ. ಅದರ ಅಡಿಯಲ್ಲಿ ಯುವಸಮುದಾಯಕ್ಕೆ ಅಗತ್ಯ ವೃತ್ತಿಪರ ಶಿಕ್ಷಣದ ವ್ಯವಸ್ಥೆ ಮಾಡುವುದರ ಜೊತೆಗೆ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಅವರಿಗೆ ಇಂಟರ್ನ್ಶಿಪ್ ಅಥವಾ ತರಬೇತಿ ಕೊಡಿಸುವುದು ಈ ಯೋಜನೆಯಲ್ಲಿದೆ. ಯುವಕರನ್ನು ವೃತ್ತಿಪರ ತರಬೇತಿ ಮೂಲಕ ಕೆಲಸಕ್ಕೆ ಅಣಿಗೊಳಿಸುವುದು ಈ ಯೋಜನೆಯ ಉದ್ದೇಶ.

Previous Post
ಚುನಾವಣಾ ಬಾಂಡ್: SBI ವಿರುದ್ಧ ನ್ಯಾಯಾಂಗ ನಿಂದನೆ ಕೇಸ್
Next Post
ನಿಮ್ಮ ಹೃದಯ ಗೆಲ್ಲಲು ನಾನು ಇಲ್ಲಿಗೆ ಬಂದಿದ್ದೇನೆ ಜಮ್ಮು ಕಾಶ್ಮೀರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ

Recent News