ಜನರು ರಾಮನ ಆದರ್ಶ ಪಾಲಿಸಿದರೆ ಭಾರತ ರಾಮರಾಜ್ಯವಾಗಲಿದೆ – ಪೇಜಾವರ್ ಶ್ರೀ

ಜನರು ರಾಮನ ಆದರ್ಶ ಪಾಲಿಸಿದರೆ ಭಾರತ ರಾಮರಾಜ್ಯವಾಗಲಿದೆ – ಪೇಜಾವರ್ ಶ್ರೀ

ನವದೆಹಲಿ : ಅಯೋಧ್ಯೆಯಲ್ಲಿ ರಾಮ‌ಮಂದಿರಾ ಉದ್ಘಾಟನೆ ಬಳಿಕ 48 ದಿನಗಳ ಕಾಲ ನಿರಂತರ ಮಂಡಲ ಪೂಜೆ ನಡೆಸಿಕೊಟ್ಟ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಗೆ ದೆಹಲಿಯಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ವಂಸತ್ ಕುಂಜ್ ನಲ್ಲಿರುವ ಮಠಕ್ಕೆ ಭೇಟಿ ನೀಡಿದ ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾದರು.

ಬಳಿಕ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾನ ಬಳಿಕ ಮಂಡಲ ಪೂಜೆ ನಡೆಯಿತು, ನಿನ್ನೆಗೆ ಅದು ಮುಕ್ತಾಯವಾಯ್ತು, ಯಜ್ಞ ಶಾಲೆಯಲ್ಲಿ ಅನೇಕ ಯಜ್ಞಗಳು ನಡೆದಿವೆ, ಭಾರತ ಒಳಗೊಂಡಂತೆ ವಿದೇಶಗಳಲ್ಲೂ ರಾಮತಾರಕ ಮಂತ್ರಿ ಜಪಿಸಿದ್ದಾರೆ. ತತ್ವ ಹೋಮ, ತತ್ವ ಕಳಸ ಪ್ರತಿಷ್ಠಾಪನೆ ಶ್ರೀರಾಮ ದೇವರ ಪ್ರಾಂಗಣದಲ್ಲಿ ನಡೆದಿವೆ, ದೇಶದ ಎಲ್ಲಾ ಕಡೆಯಿಂದ ಭಕ್ತರು ಬಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದ್ದಾರೆ.

48 ದಿನಗಳ ಮಂಡಲ ಉತ್ಸವ ಸಂಭ್ರಮ ದಿಂದ ಮುಕ್ತವಾಗಿದೆ, ನಿತ್ಯ 3 ಲಕ್ಷ ಮಂದಿ ಶ್ರೀರಾಮನ ದರ್ಶನ ಪಡೆಯುತ್ತಿದ್ದಾರೆ, ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯಾಗಿ ಕನಸು ಈಡೇರಿದೆ. ಈಗ ರಾಮ ರಾಜ್ಯದ ಕನಸು ಈಡೇರಬೇಕಿದೆ, ರಾಮ ರಾಜ್ಯ ಎಂದರೆ ಸರ್ವ ಸಮೃದ್ದಿ ಅಂಥ ಅರ್ಥ, ಇವತ್ತು ಪ್ರಜಾ ರಾಜ್ಯ ಇದೆ. ಹಾಗಾಗಿ ಪ್ರಜೆಗಳು ಎಲ್ಲರೂ ಈಗ ರಾಮನಾದರೆ ಸಾಕು

ಮದುವೆ, ಮಹೋತ್ಸವ ಅಂಥ ಕೋಟಿಗಳು ಖರ್ಚು ಮಾಡ್ತೆವೆ ರಾಮನಿಗೆ ಈಗ ಮನೆ ಸಿಕ್ಕಿದೆ, ಇದನ್ನು ಗಮನದಲ್ಲಿಕೊಂಡು ನಾವು ದುಂದುವೆಚ್ಚ ಮಾಡದೇ ಆ ಹಣದಲ್ಲಿ ನಮ್ಮೂರಿನ ಬಡವನಿಗೆ ಮನೆ ಕಟ್ಟಿಕೊಡುವ ಕೆಲಸ ಆಗಬೇಕು, ಇದೇ ದೆಸೆಯಲ್ಲಿ ಬಡವರಿಗೆ ಸಹಾಯ ಮಾಡೋಣ, ಅಯೋಧ್ಯೆಯಲ್ಲಿ ಕಾಮಗಾರಿ ಪೂರ್ಣಗೊಳ್ಳಲು ಎರಡು ವರ್ಷ ಬೇಕಾಗುತ್ತದೆ ರಾಮ ದೇವರ ಸೇವೆಯಲ್ಲಿ ಭಾಗಿಯಾಗಲು ನನಗೆ ತುಂಬಾ ಖುಷಿಯಾಗಿದೆ ಎಂದರು.

Previous Post
ನೂತನ ಚುನಾವಣಾ ಆಯುಕ್ತರನ್ನು ನೇಮಿಸದಂತೆ ಕೇಂದ್ರ ಸರ್ಕಾರವನ್ನು ನಿರ್ಬಂಧಿಸಿ: ಸುಪ್ರೀಂಗೆ ಕಾಂಗ್ರೆಸ್‌ ಅರ್ಜಿ
Next Post
ಚುನಾವಣೆಗೂ ಮುನ್ನ ಸಿಎಎ ಅಸ್ತ್ರ ಪ್ರಯೋಗಿಸಿದ ಮೋದಿ ಸರ್ಕಾರ

Recent News