ಅದಾನಿ ಹಗರಣವು ಸಾಮಾನ್ಯ ಜನರನ್ನು ತಲುಪಿದರೆ ಬಿಜೆಪಿ ಕೆಟ್ಟದಾಗಿ ಸೋಲಲಿದೆ: ಸತ್ಯಪಾಲ್ ಮಲಿಕ್

ಅದಾನಿ ಹಗರಣವು ಸಾಮಾನ್ಯ ಜನರನ್ನು ತಲುಪಿದರೆ ಬಿಜೆಪಿ ಕೆಟ್ಟದಾಗಿ ಸೋಲಲಿದೆ: ಸತ್ಯಪಾಲ್ ಮಲಿಕ್

ನವದೆಹಲಿ, ಮಾ. 13: ಅದಾನಿ ಹಗರಣವು ಸಾಮಾನ್ಯ ಜನರನ್ನು ತಲುಪಿದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೆಟ್ಟದಾಗಿ ಸೋಲಲಿದೆ ಎಂದು ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅಭಿಪ್ರಾಯಪಟ್ಟಿದ್ದಾರೆ. ‘ದಿ ವೈರ್’ ಪತ್ರಿಕೆಯ ಕರಣ್ ಥಾಪರ್‌ರವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನಾನು ಮೋದಿ ಸ್ಥಾನದಲ್ಲಿದ್ದಲ್ಲಿದ್ದರೆ ಹಗರಣ ಹೊರಬಂದ ಮೊದಲ ದಿನವೇ ಅದಾನಿ ಕೈಬಿಡುತ್ತಿದ್ದೆ. ಏಕೆಂದರೆ ಅದರಿಂದ ಬಹುದೊಡ್ಡ ಹಾನಿಯುಂಟಾಗಿದೆ. ಮುಂದಿನ ದಿನಗಳಲ್ಲಿ ಅದು ಮತ್ತಷ್ಟು ಕೆಳಕ್ಕೆ ಇಳಿಯಲಿದೆ ಎಂದಿದ್ದಾರೆ.
ಅದಾನಿ ಹಗರಣವು ಇತ್ತೀಚಿನ ದಿನಗಳಲ್ಲಿ ಭಾರತದ ಮೇಲೆ ಪರಿಣಾಮ ಬೀರಿದ ಅತ್ಯಂತ ಗಂಭೀರವಾಗಿದೆ. ಪ್ರಧಾನಿ ಸಂಪೂರ್ಣವಾಗಿ ಮೌನವಾಗಿದ್ದಾರೆ ಮತ್ತು ಅವರು ಅದಾನಿಯನ್ನು ಸಮರ್ಥಿಸುತ್ತಿರುವುದೇ ಇದಕ್ಕೆ ಕಾರಣ ಎಂದು ಹಲವರು ಭಾವಿಸಿದ್ದಾರೆ. ಪ್ರಧಾನಿಯವರು ಇದನ್ನು ಸರಿಯಾಗಿ ನಿಭಾಯಿಸಿದ್ದಾರೆಯೇ? ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು.
ನಾನು ಯೂಟ್ಯೂಬ್‌ನಲ್ಲಿ ಒಂದು ಹಾಡು ಕೇಳುತ್ತಿದ್ದೆ. ಪ್ರಭಾ ಮೌರ್ಯ ಎಂಬ ದಲಿತ ಹುಡುಗಿ ಹಾಡಿರುವುದು. ಹೇ ಚಾಯ್‌ವಾಲಾಹೇ ನಾ ಗಾಯ್‌ವಾಲಾ ಹೇ (ಅವನು ಚಹ ಮಾರುವವನು, ನಾನು ಹಾಡು ಹಾಡುವವಳು. ಅಂಬಾನಿ ಅದಾನಿಗೆ ದೇಶವನ್ನೇ ಮಾರಿಬಿಡಬಹುದು) ಎಂಬ ಹಾಡು ಈ ಭಾಷೆಯಲ್ಲಿ ಲೋಕಲ್ ಯಾಸೆಯಲ್ಲಿ ಜನರನ್ನು ತಲುಪಿದರೆ ಹಾನಿಯಾಗುತ್ತದೆಯೇ ಇಲ್ಲವೇ ನೀವೇ ಅರ್ಥ ಮಾಡಿಕೊಳ್ಳಿ.
1989ರಲ್ಲಿ ವಿ.ಪಿ ಸಿಂಗ್ ಬೋಫೋರ್ಸ್ ಹಗರಣವನ್ನು ಚುನಾವಣಾ ವಿಷಯವನ್ನಾಗಿ ಮಾಡಿ ರಾಜೀವ್ ಗಾಂಧಿಯನ್ನು ಸೋಲಿಸಿದ್ದರು. 2024 ರಲ್ಲಿ ಅದಾನಿ ಹಗರಣ ಚುನಾವಣಾ ವಿಷಯವಾಗಬಹುದೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಖಂಡಿತವಾಗಿಯೂ ಚುನಾವಣಾ ವಿಷಯವಾಗಲಿದೆ. ಇದು ಬಗೆಹರಿಯದೆ ಮುಂದುವರೆದಲ್ಲಿ ಅದಾನಿ ಮೋದಿಯವರನ್ನು ಮುಗಿಸಬಹುದು ಎಂದರು.
ಅದಾನಿ ಸರ್ಕಾರದ ನಡುವಿನ ಒನ್ ಟು ಒನ್ ಫೈಟ್ ನಡೆದರೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಯಾವ ಮಟ್ಟಕ್ಕೆ ಎಂದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಅತಿ ಕಡಿಮೆ ಸೀಟುಗಳು ಬರಬಹುದು. ಸಂಸತ್ತಿನಲ್ಲಿ ಮೋದಿ ಅದಾನಿ ಹಗರಣದ ಕುರಿತು ಒಂದೂ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ. ಏಕೆಂದರೆ ಅದಾನಿಯಿಂದ ಮೋದಿಯವರಿಗೆ ಪ್ರಯೋಜನವಿದೆ. ಹಾಗಾಗಿ ಅದಾನಿಯನ್ನು ರಕ್ಷಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿಯವರು 20,000 ಕೋಟಿ ರೂ ಎಲ್ಲಿಂದ ಬಂತು ಎಂಬ ಪ್ರಶ್ನೆ ಕೇಳಿದ್ದರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಮಲಿಕ್, “ಅದಕ್ಕೆ ಮೋದಿಯವರು ಉತ್ತರ ನೀಡಿಲ್ಲ. ಬದಲಿಗೆ ರಾಹುಲ್ ಗಾಂಧಿಯನ್ನು ಸಂಸತ್ತಿನಿಂದ ಅಮಾನತ್ತು ಮಾಡಲಾಗಿದೆ. ಇದು ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ನಡೆಯಾಗಿದೆ. ಸ್ಪೀಕರ್ ಅತಿ ದೊಡ್ಡ ತಪ್ಪು ಮಾಡಿದ್ದಾರೆ. ರಾಹುಲ್ ಗಾಂಧಿಯ ಹಕ್ಕು ಕಸಿಯಲಾಗಿದೆ” ಎಂದಿದ್ದಾರೆ.

Previous Post
ಸಿಎಎ ಬಿಜೆಪಿಯ ಮತಬ್ಯಾಂಕ್ ರಾಜಕಾರಣ: ಕೇಜ್ರಿವಾಲ್
Next Post
ಚುನಾವಣಾ ಬಾಂಡ್‌: ಸುಪ್ರೀಂಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ ಎಸ್‌ಬಿಐ

Recent News