ಬಿಜೆಪಿ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ, ತನಿಖೆ ನಡೆಸಿ: ಖರ್ಗೆ ಆಗ್ರಹ

ಬಿಜೆಪಿ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ, ತನಿಖೆ ನಡೆಸಿ: ಖರ್ಗೆ ಆಗ್ರಹ

ನವದೆಹಲಿ, ಮಾ. 15: ಕೇಂದ್ರದ ಆಡಳಿತರೂಢ ಬಿಜೆಪಿ ಕಳೆದ ಐದು ವರ್ಷಗಳಲ್ಲಿ ಚುನಾವಣಾ ಬಾಂಡ್‌ ಮೂಲಕ 6,060 ಕೋಟಿ ರೂಪಾಯಿ ಪಡೆದಿರುವ ಕುರಿತು ವಿಶೇಷ ತನಿಖೆ ನಡೆಸಬೇಕೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಒತ್ತಾಯಿಸಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೆ ಬಿಜೆಪಿಯ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಾರಿ ನಿರ್ದೇಶನಾಲಯ (ಇಡಿ) ಮತ್ತು ಆದಾಯ ತೆರಿಗೆ (ಐಟಿ) ಇಲಾಖೆಯಂತಹ ಕೇಂದ್ರೀಯ ಸಂಸ್ಥೆಗಳ ದಾಳಿ ಎದುರಿಸಿದ ಬೆನ್ನಲ್ಲೇ ಹಲವು ಕಂಪನಿಗಳು ಚುನಾವಣಾ ಬಾಂಡ್‌ಗಳನ್ನು ಖರೀದಿಸಿದಿರುವುದನ್ನು ಪ್ರಸ್ತಾಪಿಸಿದರು. ಬಿಜೆಪಿ ಕೋಟ್ಯಾಂತರ ರೂಪಾಯಿ ದೇಣಿಗೆ ಪಡೆದಿದ್ದರೂ, ಕಾಂಗ್ರೆಸ್‌ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕಿಡಿಕಾರಿದ್ದಾರೆ.

‘ನಾ ಖಾವೂಂಗ ನಾ ಖಾನೆ ದೂಂಗಾ’ (ತಿನ್ನುವುದಿಲ್ಲ, ಇತರರನ್ನು ತಿನ್ನಲು ಬಿಡುವುದಿಲ್ಲ)’ ಎಂದು ಪ್ರಧಾನಿ ಹೇಳುತ್ತಾರೆ. ಆದರೆ, ಇಂದು ಬಿಜೆಪಿ ಚುನಾವಣಾ ಬಾಂಡ್‌ಗಳಿಂದ ಹಣ ಗಳಿಸಿದೆ ಎಂಬುವುದನ್ನು ಸುಪ್ರೀಂ ಕೋರ್ಟ್ ಬಹಿರಂಗಪಡಿಸಿದೆ. ಎಸ್‌ಬಿಐ ಅಂಕಿ ಅಂಶಗಳು ಬಿಜೆಪಿಗೆ 50ರಷ್ಟು ಮತ್ತು ಕಾಂಗ್ರೆಸ್‌ಗೆ ಶೇ.11ರಷ್ಟು ದೇಣಿಗೆ ಬಂದಿರುವುದಾಗಿ” ತೋರಿಸಿದೆ ಎಂದಿದ್ದಾರೆ.

“ನಮ್ಮ ಮತದಾರರ ಸಂಖ್ಯೆ ಶೇಕಡಾವಾರು ನೋಡಿದರೆ ಸುಮಾರು ಮೂರನೇ ಒಂದು ಭಾಗ ಇದೆ. ಉಳಿದ ಜನರು ಬಿಜೆಪಿ ಸೇರಿದಂತೆ ಮೂರನೇ ಎರಡರಷ್ಟು ಇದ್ದಾರೆ. ಆದರೆ, ಬಿಜೆಪಿಯವರು ದೇಣಿಗೆಯಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಪಡೆದಿದ್ದಾರೆ. ಅವರು ಇಷ್ಟೊಂದು ಹಣ ಪಡೆಯಲು ಹೇಗೆ ಸಾಧ್ಯ? ಬಂಡವಾಳಶಾಹಿಗಳು ಅಥವಾ ಇತರ ಕಂಪನಿಗಳು ಈ ರೀತಿ ದೇಣಿಗೆ ನೀಡಬಹುದೇ? ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಸಂಶಯಾಸ್ಪದವಾಗಿವೆ. ಅವರು ಯಾರು ಎಂದು ಗೊತ್ತಿಲ್ಲ. ಒಂದೋ ಅವರು ಇಡಿ, ಐಟಿ ಇಲಾಖೆಯ ಬೆದರಿಕೆಗೆ ಮಣಿದವರು ಆಗಿರಬಹುದು. ಮೋದಿ ಸರ್ಕಾರ ನಮ್ಮ ಪಕ್ಷಕ್ಕೆ ದೇಣಿಗೆ ನೀಡುವಂತೆ ಬೆದರಿಕೆ ಹಾಕಿರಬಹುದು. ಇಲ್ಲದಿದ್ದರೆ ಬಿಜೆಪಿ ಇಷ್ಟೊಂದು ಹಣ ಪಡೆಯಲು ಹೇಗೆ ಸಾಧ್ಯ? ಎಂದು ಖರ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ನೀವು (ಬಿಜೆಪಿ) ಚುನಾವಣಾ ಬಾಂಡ್‌ಗಳ ಮೂಲಕ ಕೋಟ್ಯಂತರ ರೂಪಾಯಿಗಳನ್ನು ಸಂಗ್ರಹಿಸುತ್ತಿದ್ದೀರಿ. ಆದರೆ ಕಾಂಗ್ರೆಸ್ ಕಾರ್ಯಕರ್ತರು, ಸಂಸದರು ಮತ್ತು ಇತರ ಸಣ್ಣ ದಾನಿಗಳಿಂದ ದೇಣಿಗೆ ಪಡೆದರೆ, ನಮ್ಮ ಖಾತೆಗಳನ್ನೇ ಸ್ಥಗಿತಗೊಳಿಸಿದ್ದೀರಿ. ನೀವು 6,000 ಕೋಟಿ ರೂ.ಪಡೆದಿದ್ದೀರಿ. ನಮ್ಮ ಖಾತೆಗಳು ಸ್ಥಗಿತಗೊಂಡಿವೆ. ನಾವು ಹೇಗೆ ಚುನಾವಣೆ ಎದುರಿಸುವುದು? ವಿರೋಧ ಪಕ್ಷದ ಖಾತೆಯನ್ನು ಸ್ಥಗಿತಗೊಳಿಸಿದರೆ, ಅವರು ಚುನಾವಣೆಗೆ ಸ್ಪರ್ಧಿಸುವುದು ಹೇಗೆ? ಎಂದು ಖರ್ಗೆ ಪ್ರಶ್ನಿಸಿದ್ದಾರೆ.

Previous Post
ಬಿಜೆಪಿ ಭ್ರಷ್ಟ ತಂತ್ರ ಬಹಿರಂಗಪಡಿಸಿದ ಚುನಾವಣಾ ಬಾಂಡ್: ಜೈರಾಮ್ ರಮೇಶ್
Next Post
ಮುಂಬರುವ ಚುನಾವಣೆಯಲ್ಲಿ ಪ್ರಧಾನಿ ಮೋದಿ ಸರ್ಕಾರ ಸೋಲಿಸಲು ನಿರ್ಧರಿಸಿದೆ ಸಾಮಾಜಿಕ ಹೋರಾಟಗಾರ ಎಸ್‌.ಆರ್ ಹೀರೆಮಠ ಹೇಳಿಕೆ

Recent News