ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂದಲ್ಲಿ ಮತ ಎಣಿಕೆ ದಿನಾಂಕ‌ ಬದಲು

ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂದಲ್ಲಿ ಮತ ಎಣಿಕೆ ದಿನಾಂಕ‌ ಬದಲು

ನವದೆಹಲಿ : ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳಿಗೆ ಶನಿವಾರ ವಿಧಾನಸಭೆ ದಿನಾಂಕ ಘೋಷಿಸಿದ್ದ ಕೇಂದ್ರ ಚುನಾವಣಾ ಆಯೋಗ ಭಾನುವಾರ ಮತದಾನ ಎಣಿಕ ದಿನಾಂಕವನ್ನು ಬದಲಿಸಿದೆ. ಜೂನ್ 4 ರ ಬದಲು ಜೂನ್ 2 ರಂದು ಎಣಿಕೆ ನಡೆಸಲಾಗುವುದು ಎಂದು ಪರಿಷ್ಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಎರಡೂ ಶಾಸಕಾಂಗ ಸಭೆಗಳ ಅವಧಿಯು ಜೂನ್ 2 ರಂದು ಕೊನೆಗೊಳ್ಳಲಿದೆ, ಆರ್ಟಿಕಲ್ 324, ಭಾರತೀಯ ಸಂವಿಧಾನದ 172 (1) ಮತ್ತು ಪ್ರಜಾಪ್ರತಿನಿಧಿ ಕಾಯಿದೆ, 1951 ರ ಸೆಕ್ಷನ್ 15 ರ ಪ್ರಕಾರ ಅಧಿಕಾರವಾಧಿ ಮುಕ್ತಾಯದೊಳಗೆ ಹೊಸ ಚುನಾವಣೆಯ ಫಲಿತಾಂಶ ನೀಡಬೇಕು ಈ ಹಿನ್ನಲೆ ಜೂನ್ 4 ಬದಲು ಜೂನ್ 2 ರಂದೇ ಈ ಎರಡು ರಾಜ್ಯಗಳಲ್ಲಿ ಮಾತ್ರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಮಾಡಲು ನಿರ್ಧರಿಸಿದೆ.

ಇದನ್ನು ಹೊರತುಪಡಿಸಿದ ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನ ಲೋಕಸಭಾ ಕ್ಷೇತ್ರಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಆಯೋಗ ತಿಳಿಸಿದೆ. 2024 ರ ಲೋಕಸಭಾ ಚುನಾವಣೆಯು ಏಪ್ರಿಲ್ 19 ರಿಂದ ಜೂನ್ 1 ರವರೆಗೆ ಏಳು ಹಂತಗಳಲ್ಲಿ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ ಶನಿವಾರ ಪ್ರಕಟಿಸಿದೆ. ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.

Previous Post
ಯಾರ ಆಪೋಶನಕ್ಕಾಗಿ ಚುನಾವಣಾ ಬಾಂಡ್ ಸಂಚಲನ
Next Post
ಸಿಎಂ ಅರವಿಂದ್ ಕೇಜ್ರಿವಾಲ್ ಒಂಭತ್ತನೇ ಬಾರಿ ಇಡಿ ಸಮನ್ಸ್

Recent News