ಇಡಿ ಬಂಧನ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಕೆ.ಕವಿತಾ

ಇಡಿ ಬಂಧನ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಕೆ.ಕವಿತಾ

ನವದೆಹಲಿ : ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಭಾರತ್ ರಾಷ್ಟ್ರ ಸಮಿತಿ ನಾಯಕಿ ಕೆ ಕವಿತಾ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಶುಕ್ರವಾರ ಹೈದರಬಾದ್ ನಿವಾಸದಲ್ಲಿ ತನಿಖೆ ನಡೆಸಿದ್ದ ಇಡಿ ಬಳಿಕ ಅವರನ್ನು ವಶಕ್ಕೆ ಪಡೆದಿತ್ತು‌.

ಕವಿತಾ ಬಂಧನದ ಬಳಿಕ ಅವರನ್ನು ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಮುಂದೆ ಹಾಜರುಪಡಿಸಿ ವಿಚಾರಣೆಗೆ ಹತ್ತು ದಿನಗಳ ಕಸ್ಟಡಿಗೆ ನೀಡುವಂತೆ ಮನವಿ ಮಾಡಿಲಾಯಿತು. ಇಡಿ ವಾದ ಪುರಷ್ಕರಿಸಿದ ನ್ಯಾಯಲಯ ಮಾರ್ಚ್ 23 ರವರೆಗೆ ಕವಿತಾಳನ್ನು ವಿಚಾರಣೆಗಾಗಿ ಕಸ್ಟಡಿಗೆ ನೀಡಿತು. ಅಲ್ಲದೇ ಸಹೋದರ ಕೆಟಿಆರ್ ಮತ್ತು ಪತಿ ಅನಿಲ್ ಡಿ ಅವರನ್ನು ರಿಮಾಂಡ್ ಅವಧಿಯಲ್ಲಿ ಪ್ರತಿದಿನ ಸಂಜೆ 6-7 ರ ನಡುವೆ ಅರ್ಧ ಗಂಟೆಗಳ ಕಾಲ ಭೇಟಿಯಾಗಲು ಅವಕಾಶ ನೀಡಿದೆ‌.

ಈ ಮಧ್ಯೆ ವಿಚಾರಣೆ ವೇಳೆ ಕೆ ಕವಿತಾ ಅವರು ನ್ಯಾಯಾಲಯದಲ್ಲಿ ತನ್ನ ಬಂಧನವನ್ನು “ಅಕ್ರಮ” ಎಂದು ಹೇಳಿದ್ದಾರೆ. ಇದು ಕಪೋಲಕಲ್ಪಿತ ಪ್ರಕರಣ, ನನ್ನ ಅಕ್ರಮವಾಗಿ ಬಂಧಿಸಲಾಗಿದೆ, ಇದರ ವಿರುದ್ಧ ಹೋರಾಡುತ್ತೇನೆ ಎಂದು ಕವಿತಾ ಹೇಳಿದ್ದಾರೆ. ಈ ಬೆನ್ನಲೆ ಅವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ಈ ಮಾಹಿತಿಯನ್ನು ಅವರ ವಕೀಲರ ತಂಡ ಖಚಿತಪಡಿಸಿದೆ.

ಕೆ. ಕವಿತಾ ಅವರು ‘ಸೌತ್ ಗ್ರೂಪ್’ ನ ಪ್ರಮುಖ ಸದಸ್ಯರಾಗಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಮದ್ಯದ ಪರವಾನಗಿಗಳ ನೀಡಲು ಅದಕ್ಕೆ ಬದಲಿಯಾಗಿ 100 ಕೋಟಿ ಹಣವನ್ನು ದೆಹಲಿಯ ಆಡಳಿತಾರೂಢ ಆಪ್ ಸರ್ಕಾರಕ್ಕೆ ನೀಡಿದ್ದಾರೆ ಎಂದು ಇಡಿ ಆರೋಪಿಸಿದೆ. ಇದೇ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿರಿಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.

Previous Post
ಮಾಜಿ ಸಚಿವ ಸತ್ಯಂದ್ರ ಜೈನ್ ಜಾಮೀನು ಅರ್ಜಿ ವಜಾ ಕೂಡಲೇ ಜೈಲಾಧಿಕಾರಿಗಳ ಮುಂದೆ ಹಾಜರಾಗುವಂತೆ ಸುಪ್ರೀಂ ಆದೇಶ
Next Post
ರಾಜಕೀಯ ಪಕ್ಷಕ್ಕಾಗಿ ನೀವೂ ನ್ಯಾಯಲಯದಲ್ಲಿಲ್ಲ ಎಸ್‌ಬಿಐ ವಿರುದ್ಧ ಸುಪ್ರೀಂ ಗರಂ ಗುರುವಾರ ಸಂಜೆಯೊಳಗೆ ಎಲ್ಲ ದಾಖಲೆ ಬಿಡುಗಡೆಗೆ ಸೂಚನೆ

Recent News