ಟೈಂ ಪಾಸ್ ಮಾಡುವುದು ಕಷ್ಟ ಅಂತಾ ಲೋಕಸಭೆಗೆ ಸ್ಪರ್ಧೆ ಡಾ.ಕೆ ಸುಧಾಕರ್ ವಿರುದ್ಧ ಎಸ್‌.ಅರ್ ವಿಶ್ವನಾಥ್ ಆರೋಪ

ಟೈಂ ಪಾಸ್ ಮಾಡುವುದು ಕಷ್ಟ ಅಂತಾ ಲೋಕಸಭೆಗೆ ಸ್ಪರ್ಧೆ ಡಾ.ಕೆ ಸುಧಾಕರ್ ವಿರುದ್ಧ ಎಸ್‌.ಅರ್ ವಿಶ್ವನಾಥ್ ಆರೋಪ

ನವದೆಹಲಿ : ವಿಧಾನಸಭೆಯಲ್ಲಿ ಸೋಲು‌ ಕಂಡಿರುವ ಮಾಜಿ ಸಚಿವ ಡಾ.ಕೆ ಸುಧಾಕರ್ ನಾಲ್ಕು ವರ್ಷ ಸುಮ್ಮನೇ ಟೈಂ ಪಾಸ್ ಮಾಡಲು ಸಾಧ್ಯವಾಗುದಿಲ್ಲ ಹೀಗಾಗೀ ಲೋಕಸಭೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ನನ್ನ ಮುಂದೆ ಹೇಳಿದ್ದಾರೆ ಎಂದು ದೆಹಲಿಯಲ್ಲಿ ಶಾಸಕ ಎಸ್‌. ಆರ್ ವಿಶ್ವನಾಥ್ ಹೇಳಿದ್ದಾರೆ. ದೆಹಲಿಯಲ್ಲಿ ಬಿ.ಎಸ್‌ ಯಡಿಯೂರಪ್ಪ ಭೇಟಿ ಬಳಿಕ ಮಾತನಾಡಿದ ಅವರು ವಾಗ್ದಾಳಿ ನಡೆಸಿದರು.

ಚಿಕ್ಕಬಳ್ಳಾಪುರದಲ್ಲಿ ಬಚ್ಚೆಗೌಡರು ರಾಜಕೀಯ ನಿವೃತ್ತಿ ಘೋಷಿಸಿದಾಗ ಯಾರು ಅಭ್ಯರ್ಥಿ ಇರಲಿಲ್ಲ, ಎಲ್ಲ ನಾಯಕರು ನನ್ನ ಪುತ್ರ ಅಲೋಕ್ ವಿಶ್ವಾನಾಥ್‌ನ ಕಣಕ್ಕಿಳಿಸಲು ಸೂಚಿಸಿದರು ಈ ಹಿನ್ನಲೆ ನಾವು ಎಲ್ಲ ತಯಾರಿ ಮಾಡಿಕೊಂಡಿದ್ದೇವೆ, ಆದರೆ ಈ ನಡುವೆ ಬಂದ ಸುಧಾಕರ್ ನಾಲ್ಕು ವರ್ಷ ಇಲ್ಲಿ ಏನು ಮಾಡುವುದು? ಟೈಂ ಪಾಸ್ ಮಾಡಲು ಕಷ್ಟ ಅದಕ್ಕೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ನನ್ನ ಮುಂದೆ ಹೇಳಿದ್ದಾರೆ ಅದರೆ ಇದು ಟೈಂ ಪಾಸ್ ಮಾಡುವ ವಿಷಯವಲ್ಲ ಎಂದು ಹೇಳಿದರು.

ದೆಹಲಿಯಲ್ಲಿ ನಾನು ಯಾವ ನಾಯಕರನ್ನು ಭೇಟಿ ಮಾಡಿಲ್ಲ, ಬಿ.ಎಸ್ ಯಡಿಯೂರಪ್ಪ ಜೊತೆಗೆ ಬಂದಿದ್ದೇನೆ
ಅಲೋಕ್ ಮಗ ಎನ್ನುವುದಕ್ಕಿಂತ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾನೆ, ನ್ಯೂಯಾರ್ಕ್ ನಿಂದ ಪದವಿ ಪಡೆದಿದ್ದಾನೆ ಲಂಡನ್ ನಲ್ಲಿ ಐವತ್ತು ದೇಶಗಳ ಆಡಳಿತ, ಪಾಲಿಸಿಗಳ ಅಧ್ಯಯನ ಮಾಡಿದ್ದಾನೆ, ಅವನು ರಾಜಕೀಯ ಬಂದ್ರೆ ಪಕ್ಷಕ್ಕೆ, ಸಮಾಜಕ್ಕೆ ಅನುಕೂಲವಾಗಲಿದೆ

ಸರ್ವೆಯಲ್ಲೂ ಅಲೋಕ್ ಹೆಸರು ಇದೆ, ಸುಧಾಕರ್ ಅವರು ಈ‌ ಮೊದಲು ಲೋಕಸಭೆ ಗೆ ಕೇಳಿರಲಿಲ್ಲ, ಅವರು ನಿಲ್ಲಲ್ಲ ಅಂದಿದಕ್ಕೆ ನಾವು ಮಗನ ಸ್ಪರ್ಧೆಗೆ ಚಿಂತಿಸಿದ್ದೇವು ಅಲೋಕ್ ಗೆ ಟಿಕೆಟ್ ನೀಡಿದರೆ 25 ವರ್ಷ ಕ್ಷೇತ್ರ ಪಕ್ಷಕ್ಕೆ ಇರಲಿದೆ, ನಾವು ಈಗಾಗಲೇ ಪ್ರಚಾರ ಆರಂಭಿಸಿದ್ದೇವೆ, ಯಲಹಂಕ ಕ್ಷೇತ್ರ ದೊಡ್ಡ ಲೀಡ್ ಕೊಡಲಿದೆ ಹೀಗಾಗಿ ಅಲೋಕ್ ಆದರೆ ಹೆಚ್ಚು ಲೀಡ್ ಸಿಗಲಿದೆ. ಮೋದಿ ಮುಖದ ಜೊತೆಗೆ ಜನ ಒಪ್ಪುವ ಅಭ್ಯರ್ಥಿ ಬೇಕು ಎಂದರು.

Previous Post
ಮಾರ್ಚ್ 22ರ ಬಳಿಕ ಬಿಜೆಪಿ ಅಂತಿಮ ಪಟ್ಟಿ ಐದು ಕ್ಷೇತ್ರದಲ್ಲಿ ಎರಡು ಕಗ್ಗಂಟು, ಅನಂತ್ ಕುಮಾರ್ ಹೆಗೆಡೆಗೆ ಟಿಕೆಟ್ ಡೌಟು
Next Post
ಕೆ.ಎಸ್ ಈಶ್ವರಪ್ಪ‌ ವಿರುದ್ಧ ಬಿ‌ಎಸ್ ಯಡಿಯೂರಪ್ಪ ಅಸಮಧಾನ

Recent News