ಟಿಕೆಟ್ ತಪ್ಪುವ ಭೀತಿ, ಕಣ್ಣಿರಿಟ್ಟ ವೀಣಾ ಕಾಶಪ್ಪನವರ್ ಜಯ ಮೃತ್ಯಂಜಯ ಸ್ವಾಮೀಜಿಯಿಂದಲೂ ಲಾಬಿ

ಟಿಕೆಟ್ ತಪ್ಪುವ ಭೀತಿ, ಕಣ್ಣಿರಿಟ್ಟ ವೀಣಾ ಕಾಶಪ್ಪನವರ್ ಜಯ ಮೃತ್ಯಂಜಯ ಸ್ವಾಮೀಜಿಯಿಂದಲೂ ಲಾಬಿ

ನವದೆಹಲಿ : ಬಾಗಲಕೋಟೆ ಲೋಕಸಭೆ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಟಿಕೆಟ್ ಕೈತಪ್ಪುವ ಆತಂಕದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನಿವಾಸದ ಮುಂದೆ ಕಣ್ಣೀರಿಟ್ಟು, ತಮ್ಮ ನಾಯಕರ ವಿರುದ್ಧವೇ ಅಸಮಧಾನ ಹೊರ ಹಾಕಿದ್ದಾರೆ.

ಬಾಗಲಕೋಟೆಯಿಂದ ಸಂಯುಕ್ತ ಶಿವಾನಂದ ಪಾಟೀಲ್ ಹೆಸರು ಕೇಳಿ ಬಂದ ಬೆನ್ನಲೆ ಪತಿ ವಿಜಯನಂದಾ ಕಾಶಪ್ಪನವರ್ ಮತ್ತು ಕೂಡಲಸಂಗಮದ ಸ್ವಾಮೀಜಿ ಜಯಮೃತ್ಯಂಜಯ ಸ್ವಾಮಿಜಿಯೊಂದಿಗೆ ದೆಹಲಿಗೆ ಆಗಮಿಸಿದ ಅವರು ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಜಿಲ್ಲೆಯಲ್ಲಿ ನಾನು ಪ್ರಬಲ ಆಕಾಂಕ್ಷಿ ಇರುವಾಗ ನೀವು ಪಕ್ಕದ ಜಿಲ್ಲೆಯಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡಿರುವುದು ಎಷ್ಟು ಸರಿ ಎಂದು ಅಸಮಧಾನ ಹೊರ ಹಾಕಿದ್ದಾರೆ.

ಕಳೆದ ಬಾರಿ ವೀಣಾ ಕಾಶಪ್ಪನವರ್ ಪ್ರಬಲ ಸ್ಪರ್ಧೆ ನೀಡಿದ್ದಾರೆ, ಈಬಾರಿ ಕಾಂಗ್ರೇಸ್ ಶಾಸಕರ ಬಲ ಇರುವ ಹಿನ್ನಲೆ ಗೆಲ್ಲುವ ಅವಕಾಶಗಳು ಹೆಚ್ಚಿದೆ. ಈ ಹಿನ್ನಲೆ ಸಮುದಾಯಕ್ಕೆ ಅವಕಾಶ ನೀಡಬೇಕು ಎಂದು ಜಯಮೃತ್ಯಂಜಯ ಸ್ವಾಮೀಜಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಖರ್ಗೆ, ನಿಮ್ಮ ಹೆಸರು ರಾಜ್ಯದಿಂದ ಶಿಫಾರಸ್ಸುಗೊಂಡಿಲ್ಲ ಹೀಗಾಗೀ ನೀವೂ ರಾಜ್ಯ ನಾಯಕರೊಂದಿಗೆ ಚರ್ಚಿಸಿ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಖರ್ಗೆ ನಿವಾಸದಿಂದ ಹೊರ ಬಂದ ವೀಣಾ, ಕಣ್ಣಿರಿಟ್ಟು ದುಖಃ ವ್ಯಕ್ತಪಡಿಸಿದರು. ಕಳೆದ ಬಾರಿ ಸ್ಪರ್ಧೆಗೆ ಯಾರು ಮುಂದೆ ಬರಲಿಲ್ಲ, ಕಷ್ಟದ ಸಮಯದಲ್ಲಿ, ಸೋಲುವ ಸಮಯದಲ್ಲಿ ನಾನು ಸ್ಪರ್ಧಿಸಿದೆ, ಸೋಲು ಗೆಲುವು ಲೆಕ್ಕಿಸದೇ ಸ್ಪರ್ಧಿಸಿದೆ ಆದರೆ ಈ ಬಾರಿ ಐದು ಮಂದಿ ನಮ್ಮ ಶಾಸಕರಿದ್ದಾರೆ ಈಗ ನನಗೆ ಅವಕಾಶ ನೀಡಲು ನಿರಾಕರಿಸುತ್ತಿದ್ದಾರೆ, ಸಂಯುಕ್ತ ಪಾಟೀಲ್ ಯಾರು ಅಂತಾ ಕ್ಷೇತ್ರದವರಿಗೆ ಗೊತ್ತಿಲ್ಲ ಅವರಿಗೆ ಟಿಕೆಗಲಟ್ ನೀಡಿದೆ ಪಕ್ಷಕ್ಕೆ ಕೆಲಸ ಮಾಡಿದವರನ್ನು ಪರಿಗಣಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಶಾಸಕ ವಿಜಯಾನಂದ ಕಾಶಪ್ಪನವರ್, ವೀಣಾ ಕಾಶಪ್ಪನವರ ಹೆಸರನ್ನ ಸ್ಕ್ರೀನಿಂಗ್ ಕಮಿಟಿಗೆ ಕಳಿಸಿಲ್ಲ, ಯಾಕೆ ಕಳಿಸಿಲ್ಲ ಎಂದು ನಮಗೆ ಆ ಬಗ್ಗೆ ಗೊತ್ತಿಲ್ಲ, ಶಾಸಕರೆಲ್ಲರೂ ವಿರೋಧ ಮಾಡಿದ್ದಾರೆ ಎಂದು ನಾಯಕರು ಹೇಳುತ್ತಿದ್ದಾರೆ ಸದ್ಯ ಖರ್ಗೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇವೆ ಆದರೆ ಖರ್ಗೆ ಅವರು ನಿಮ್ಮ ಹೆಸರೇ ಬಂದಿಲ್ಲ ಎಂದು ಹೇಳಿದ್ದಾರೆ ಕಳೆದ ವಿಧಾನಸಭೆ ಚುನಾವಣೆ, ಲೋಕಸಭೆ ಚುನಾವಣೆ ಎಲ್ಲಾ ಸಂದರ್ಭದಲ್ಲಿ ವೀಣಾ ಕೆಲಸ ಮಾಡಿದ್ದಾರೆ

ಈಗ ಪಕ್ಕದ ಜಿಲ್ಲೆಯವರನ್ನು ಅಭ್ಯರ್ಥಿಯಾಗಿ ಘೋಷಿಸುತ್ತಿರುವುದು ಯಾಕೆ ಎಂಬ ಪ್ರಶ್ನೆ ಮೂಡುತ್ತಿದೆ, ಸಂಯುಕ್ತ ಪಾಟೀಲ್ ಯಾರು, ಜಿಲ್ಲೆಯ ಶಾಸಕರ ಅಭಿಪ್ರಾಯ ಸಂಗ್ರಹ ಮಾಡಲಾಗಿದೆಯಂತೆ ಆದರೆ ನನಗೆ ಯಾರೂ ಬಂದು ನನ್ನ ಅಭಿಪ್ರಾಯವನ್ನು ಕೇಳೇ ಇಲ್ಲ ಟಿಕೆಟ್ ಅಧಿಕೃತವಾಗಿ ಘೋಷಣೆಯಾದ ನಂತರ ನಾವು ಮಾತನಾಡುತ್ತೇವೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Previous Post
ಕೆ.ಎಸ್ ಈಶ್ವರಪ್ಪ‌ ವಿರುದ್ಧ ಬಿ‌ಎಸ್ ಯಡಿಯೂರಪ್ಪ ಅಸಮಧಾನ
Next Post
ಬೆಂಗಳೂರು ಸೆಂಟ್ರಲ್ ಟಿಕೆಟ್ ಗೆ ಭರ್ತೋಲಮ್ ಲಾಬಿ

Recent News