ಇಂದಿನಿಂದ 12 ರಾಜ್ಯಗಳಲ್ಲಿ ನಾಮಪತ್ರ ಸಲ್ಲಿಕೆ ಆರಂಭ

ಇಂದಿನಿಂದ 12 ರಾಜ್ಯಗಳಲ್ಲಿ ನಾಮಪತ್ರ ಸಲ್ಲಿಕೆ ಆರಂಭ

ನವದೆಹಲಿ, ಮಾರ್ಚ್ 28: ಭಾರತದಲ್ಲಿ 17ನೇ ಲೋಕಸಭೆಯ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಹೊಸದಾಗಿ ಮತ್ತೆ ಲೋಕಸಭಾ ಚುನಾವಣೆಯು ಏಳು ಹಂತಗಳಲ್ಲಿ ನಡೆಯಲಿದೆ. ಇದರಲ್ಲಿ ಎರಡನೇ ಹಂತದಲ್ಲಿ ಒಟ್ಟು 12 ರಾಜ್ಯಗಳ 88 ಸಂಸದೀಯ ಸ್ಥಾನಗಳಿಗೆ (ಕ್ಷೇತ್ರ) ಚುನಾವಣೆ ಏಪ್ರಿಲ್ 26 ರಂದು ನಡೆಯಲಿದೆ. ಈ ಎಲ್ಲ ರಾಜ್ಯಗಳಲ್ಲಿ ಇಂದು ಮಾರ್ಚ್ 28ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಇಂದು ಗುರುವಾರದಿಂದ 12 ರಾಜ್ಯಗಳ 88 ಕ್ಷೇತ್ರಗಳ ವಿವಿಧ ರಾಜಕೀಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಏಪ್ರಿಲ್ 04 ಕೊನೆ ದಿನವಾಗಿದೆ. ಏಪ್ರಿಲ್ 05 ರಂದು ನಾಮಪತ್ರಗಳನ್ನು (ಜಮ್ಮು-ಕಾಶ್ಮೀರ ಹೊರತುಪಡಿಸಿ) ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ನಂತರ ಏಪ್ರಿಲ್ 08ರಂದು ಉಮೇದುವಾರಿಕೆ ಹಿಂಪಡೆಯಲು ಅವಕಾಶ ಇರುತ್ತದೆ ಎಂದು ಭಾರತೀಯ ಚುನಾವಣೆ ಆಯೋಗ (ಇಸಿಐ)ವು ಗುರುವಾರ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.

ಜಮ್ಮು- ಕಾಶ್ಮೀರದಲ್ಲಿ ಏ.6ಕ್ಕೆ ಪರಿಶೀಲನೆ ಕೇಂದ್ರ ಚುನಾವಣೆ ಆಯೋಗ ಅಧಿಸೂಚನೆ ಹೊರಡಿಸಿದ ದಿನದಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗುತ್ತಿದೆ. ಏಪ್ರಿಲ್ 5 ರಂದು, ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಏಪ್ರಿಲ್ 6 ರಂದು ಸಲ್ಲಿಕೆಯಾಗಿರುವ ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ.

ಲೋಕಸಭಾ ಚುಣಾವಣೆಯ ಎರಡನೇ ಹಂತದಲ್ಲಿ ಹೊರ ಮಣಿಪುರ ಲೋಕಸಭಾ ಕ್ಷೇತ್ರದ ಒಂದು ಭಾಗದಲ್ಲಿ ಮತದಾನವೂ ನಡೆಯಲಿದೆ. ಈ ಹೊರ ಮಣಿಪುರ ಕ್ಷೇತ್ರದ ಚುನಾವಣೆಯ ಅಧಿಸೂಚನೆ ಮಾರ್ಚ್ 20 ರಂದು ಮೊದಲ ಹಂತದ ಗೆಜೆಟ್ ಅಧಿಸೂಚನೆ ಸೇರಿಸಿ ಪ್ರಕಟಿಸಲಾಗಿದೆ. ಈ ಹೊರ ಮಣಿಪುರ ಲೋಕಸಭಾ ಕ್ಷೇತ್ರದ 15 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 19 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಕ್ಷೇತ್ರದ 13 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 26 ರಂದು ಮತದಾನ ನಡೆಯಲಿದೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏ.26ಕ್ಕೆ ಚುನಾವಣಾ ನಡೆಯುವ ರಾಜ್ಯಗಳು ಎರಡನೇ ಹಂತದಲ್ಲಿ ಲೋಕಸಭಾ ಚುನಾವಣೆಯು ಅಸ್ಸಾಂ, ರಾಜಸ್ಥಾನ, ತ್ರಿಪುರ, ಬಿಹಾರ, ಛತ್ತೀಸ್‌ಗಢ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕ, ಕೇರಳ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಹೊರ ಭಾಗದ ಹೊರತಾಗಿ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಇದರೊಂದಿಗೆ ಕರ್ನಾಟಕದ ಒಟ್ಟು 28 ಕ್ಷೇತ್ರಗಳಲ್ಲಿ ಅರ್ಧ ಕ್ಷೇತ್ರಗಳಿಗೆ ರಾಜಕ್ಕೆ ಸೀಮಿತವಾಗಿ ಮೊದಲ ಹಂತದಲ್ಲಿ ಚುನಾವಣೆ ಏಪ್ರಿಲ್ 26 ರಂದು ನಡೆಯಲಿದೆ. ಇದು ದೇಶದ ಮಟ್ಟಿಗೆ ಎರಡನೇ ಹಂತದ ಚುನಾವಣೆ ಆಗಿದೆ. ಈ ಹದಿನಾಲ್ಕು ಕ್ಷೇತ್ರಗಳಿಗೂ ಇಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಿದೆ.

Previous Post
ಡಿ.ಕೆ.ಸುರೇಶ್ ಅವರು ನೂರಕ್ಕೆ ನೂರು ಈ ಬಾರಿಯೂ ಗೆಲ್ತಾರೆ: ಸಿ.ಎಂ.ಸಿದ್ದರಾಮಯ್ಯ ಸ್ಪಷ್ಟ ಮಾತು
Next Post
ಮಾ.30ರಂದು ಕಾರ್ಯಕರ್ತರ ಜತೆ ಸುಮಲತಾ ಮಹತ್ವದ ಸಭೆ: ಕುತೂಹಲಗಳಿಗೆ ಅಂದು ತೆರೆ?

Recent News