ಲೋಕಸಭೆ ಚುನಾವಣೆವರೆಗೂ ತೆರಿಗೆ ವಸೂಲಿಗೆ ಕ್ರಮ ಇಲ್ಲ ಸುಪ್ರೀಂಕೋರ್ಟ್‌ಗೆ ಆದಾಯ ತೆರಿಗೆ ಇಲಾಖೆಯಿಂದ ಭರವಸೆ

ಲೋಕಸಭೆ ಚುನಾವಣೆವರೆಗೂ ತೆರಿಗೆ ವಸೂಲಿಗೆ ಕ್ರಮ ಇಲ್ಲ ಸುಪ್ರೀಂಕೋರ್ಟ್‌ಗೆ ಆದಾಯ ತೆರಿಗೆ ಇಲಾಖೆಯಿಂದ ಭರವಸೆ

ನವದೆಹಲಿ: ಆದಾಯ ತೆರಿಗೆಯ ಬಡ್ಡಿ ಸಹಿತ ತೆರಿಗೆ ದಂಡ ಸಂಕಷ್ಟದಲ್ಲಿ ಸಿಲುಕಿದ್ದ ಕಾಂಗ್ರೆಸ್‌ ಪಕ್ಷಕ್ಕೆ ಐಟಿ ಬಿಗ್‌ ರಿಲೀಫ್‌ ನೀಡಿದೆ. ಲೋಕಸಭಾ ಚುನಾವಣೆ ಮುಗಿಯುವರೆಗೂ ಬಾಕಿ ಉಳಿಸಿಕೊಂಡಿರುವ ಸುಮಾರು 3,500 ಕೋಟಿ ರೂ. ತೆರಿಗೆ ವಸೂಲಿ ಮಾಡಲು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಇಡಿ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದೆ.

ಆದಾಯ ತೆರಿಗೆ ಇಲಾಖೆ ಒಟ್ಟು 3,567 ಕೋಟಿ ರೂ. ಬಾಕಿ ತೆರಿಗೆ ಪಾವತಿಸುವಂತೆ ನೀಡಿದ ನೋಟಿಸ್‌ ಪ್ರಶ್ನಿಸಿ ಕಾಂಗ್ರೆಸ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಬಿ.ವಿ.ನಾಗರತ್ನ ನೇತೃತ್ವದ ಪೀಠದ ದ್ವಿ ಸದಸ್ಯ ಪೀಠ ವಿಚಾರಣೆಗೆ ನಡೆಸಿತು. ಈ ವೇಳೆ ಐಟಿ ಪರ ವಾದ‌ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಚುನಾವಣೆ ನಡೆಯುತ್ತಿರುವುದರಿಂದ ಮತ್ತು ಚುನಾವಣೆಯ ನಂತರದ ವಿಚಾರಣೆಯವರೆಗೆ ಬಾಕಿ ಉಳಿಸಿರುವ ತೆರಿಗೆ ವಸೂಲಿ ಮಾಡಲು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ದಯವಿಟ್ಟು ಜೂನ್ ಎರಡನೇ ವಾರದಲ್ಲಿ ಈ ವಿಚಾರವನ್ನು ಪಟ್ಟಿ ಮಾಡಿ ಎಂದು ಮನವಿ ಮಾಡಿದರು.

ವಾದವನ್ನು ಆಲಿಸಿದ ಪೀಠ ತುಷಾರ್‌ ಮೆಹ್ತಾ ವಾದವನ್ನು ದಾಖಲೆಗೆ ಪರಿಗಣಿಸಿತು. ಇದೇ ವೇಳೆ ನೀವು ಯಾರೊಬ್ಬರ ಬಗ್ಗೆ ಯಾವಾಗಲೂ ನಕಾರಾತ್ಮಕವಾಗಿ ಗ್ರಹಿಸಬಾರದು ಎಂದು ಕಾಂಗ್ರೆಸ್‌ ಪರ ಹಾಜರಾಗಿದ್ದ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರಿಗೆ ನ್ಯಾ. ನಾಗರತ್ನ ಲಘುವಾಗಿ ಹೇಳಿದರು. ಇದಕ್ಕೆ ಸಿಂಘ್ವಿ, ನಾನು ಮೂಖನಾಗಿದ್ದೇನೆ. ಕೆಲವೇ ಬಾರಿ ನಾನು ಮೂಖನಾಗಿದ್ದೇನೆ ಎಂದು ಅಚ್ಚರಿ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ಮನವಿಯನ್ನು ಪುರಸ್ಕರಿಸಿದ ಕೋರ್ಟ್‌ ಮುಂದಿನ ವಿಚಾರಣೆಯನ್ನು ಜುಲೈ ಎರಡನೇ ವಾರಕ್ಕೆ ಮುಂದೂಡಿತು.

Previous Post
ಇವಿಎಂ ಫಿಕ್ಸಿಂಗ್ ಎಂದ ರಾಹುಲ್ ಗಾಂಧಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು
Next Post
ಜ್ಞಾನವ್ಯಾಪಿ ಮಸೀದಿ ಆವರಣದಲ್ಲಿ ಪೂಜೆಗೆ ತಡೆ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್

Recent News