ನೀತಿ ಸಂಹಿತೆ ಜಾರಿ, ಟೋಲ್ ದರ ಪರಿಷ್ಕರಣೆ ಸದ್ಯಕ್ಕಿಲ್ಲ

ನೀತಿ ಸಂಹಿತೆ ಜಾರಿ, ಟೋಲ್ ದರ ಪರಿಷ್ಕರಣೆ ಸದ್ಯಕ್ಕಿಲ್ಲ

ನವದೆಹಲಿ : ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನಲೆ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ರೋಡ್ ಟೋಲ್ ದರಗಳ ಪರಿಷ್ಕರಣೆ ಮಾಡದಿರಲು ನಿರ್ಧರಿಸಿದೆ. ಪ್ರತಿ ವರ್ಷ ಏಪ್ರಿಲ್ 1 ರಂದು ಟೋಲ್ ಶುಲ್ಕವನ್ನು ಹೆಚ್ಚಿಸಲಾಗುತ್ತದೆ. ಆದಾಗ್ಯೂ, ಈ ವರ್ಷ ಲೋಕಸಭಾ ಚುನಾವಣೆಯ ಕಾರಣದಿಂದಾಗಿ ಟೋಲ್ ದರ ಪರಿಷ್ಕರಣೆಯನ್ನು ತಡೆಹಿಡಿಯಲಾಗಿದೆ.

ಸುಮಾರು 1,100 ಟೋಲ್ ಪ್ಲಾಜಾಗಳು ಟೋಲ್ ದರವನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಹೆದ್ದಾರಿ ನಿರ್ವಾಹಕರು ಈಗಾಗಲೇ ಸ್ಥಳೀಯ ಪತ್ರಿಕೆಗಳ ಮೂಲಕ ಈ ಕುರಿತು ಸೂಚನೆ ನೀಡಿದ್ದಾರೆ. ಶುಲ್ಕಗಳು 3-5% ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. FY19 ರಲ್ಲಿ ₹ 2,52,000 ಕೋಟಿ ಟೋಲ್ ಸಂಗ್ರಹವಾಗಿತ್ತು, FY23 ರಲ್ಲಿ ₹ 5,40,000 ಕೋಟಿಗಳಷ್ಟು ಟೋಲ್ ಸಂಗ್ರಹವಾಗಿದೆ

ರಾಷ್ಟ್ರೀಯ ಹೆದ್ದಾರಿಗಳ ಹೆಚ್ಚಳವಾಗಿರುವ ಹಿನ್ನಲೆ ಟೋಲ್ ಪ್ಲಾಜಾಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಲೋಕಸಭೆ ಚುನಾವಣೆಯ ನಂತರವೇ ಹೊಸ ದರಗಳು ಅನ್ವಯವಾಗುತ್ತವೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಎನ್‌ಎಚ್‌ಎಐಗೆ ಈ ಹಿಂದೆ ತಿಳಿಸಿದೆ. ಹೀಗಾಗೀ ಲೋಕಸಭೆ ಚುನಾವಣೆ ಅಂತ್ಯದವರೆಗೂ ಹಳೆ ದರ ಮುಂದುವರಿಯಲಿದ್ದು ಪ್ರಯಾಣಿಕರಿಗೆ ಕೊಂಚ ಅಮಧಾನ ತಂದಿದೆ.

Previous Post
INDIA ಹೆಸರಿಗೆ ಆಕ್ಷೇಪ – ಪ್ರತಿಕ್ರಿಯೆ ನೀಡಲು ವಿಪಕ್ಷಗಳಿಗೆ ಹೈಕೋರ್ಟ್ ಕಡೆಯ ಅವಕಾಶ
Next Post
ಆಯುರ್ವೇದ ಉತ್ಪನ್ನಗಳನ್ನು ಉತ್ತೇಜಿಸಲು ದಾರಿತಪ್ಪಿಸುವ ಜಾಹೀರಾತುಗಳ ಪ್ರಸಾರ ಬಾಬಾ ರಾಮದೇವ್, ಆಚಾರ್ಯ ಬಾಲಕೃಷ್ಣ ಕ್ಷಮೆ ಒಪ್ಪದ ಸುಪ್ರೀಂಕೋರ್ಟ್

Recent News