ಘರ್ ಘರ್ ಗ್ಯಾರಂಟಿ ಅಭಿಯಾನಕ್ಕೆ ಖರ್ಗೆ ಚಾಲನೆ

ಘರ್ ಘರ್ ಗ್ಯಾರಂಟಿ ಅಭಿಯಾನಕ್ಕೆ ಖರ್ಗೆ ಚಾಲನೆ

ನವದೆಹಲಿ : ಮುಂಬರುವ ಲೋಕಸಭಾ ಚುನಾವಣೆ ತಯಾರಿಯಲ್ಲಿರುವ ಕಾಂಗ್ರೆಸ್ ‘ಘರ್ ಘರ್ ಗ್ಯಾರಂಟಿ’ ಅಭಿಯಾನವನ್ನು ಆರಂಭಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಇಂದು ದೆಹಲಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದರು. ಪಕ್ಷದ ಐದು ಗ್ಯಾರಂಟಿಗಳ ಬಗ್ಗೆ ಜಾಗೃತಿ ಮೂಡಿಸಲು ದೇಶದ 8 ಕೋಟಿ ಕುಟುಂಬಗಳನ್ನು ಅಭಿಯಾನದ ಮೂಲಕ ತಲುಪುವ ಯೋಜನೆ ಮಾಡಿದೆ.

ನಮ್ಮ “ಪಂಚ ನ್ಯಾಯ ಪಚೀಸ್ ಗ್ಯಾರಂಟಿ” ( 5 ನ್ಯಾಯ 25 ಗ್ಯಾರಂಟಿ ) ಅನ್ನು ಜನರಿಗೆ ತಲುಪಿಸಲು ಈ ಗ್ಯಾರಂಟಿ ಕಾರ್ಡ್ ಅನ್ನು ವಿತರಿಸುತ್ತಿದ್ದೇವೆ. ಎಲ್ಲಾ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಈ ಕಾರ್ಡ್ ಅನ್ನು ದೇಶದಾದ್ಯಂತ ಮನೆ ಮನೆಗೆ ತಲುಪಿಸಲಿದ್ದಾರೆ ಈ ಮೂಲಕ ನಮ್ಮ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಏನು ಮಾಡಲಿದೆ ಎಂಬುದನ್ನು ಜನರಿಗೆ ತಿಳಿಸುತ್ತೇವೆ ಎಂದು ಖರ್ಗೆ ಹೇಳಿದರು.

ಇನ್ನು ಆಡಳಿರೂಢ ಬಿಜೆಪಿ ವಿರುದ್ಧ ಪ್ರಬಲ ವಿರೋಧ ಪಕ್ಷವಾಗಿ ಅಖಾಡಕ್ಕೆ ಇಳಿದಿರುವ ಕಾಂಗ್ರೇಸ್ ಎಪ್ರೀಲ್ 5 ರಂದು ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಕಾಂಗ್ರೆಸ್‌ನ ಪ್ರಣಾಳಿಕೆಯು ಯುವ ನ್ಯಾಯ, ನಾರಿ ನ್ಯಾಯ, ‘ಕಿಸಾನ್ ನ್ಯಾಯ, ಶ್ರಮಿಕ್ ನ್ಯಾಯ ಮತ್ತು ಹಿಸ್ಸೆದಾರಿ ನ್ಯಾಯ ಗ್ಯಾರಂಟಿಗಳನ್ನು ಘೋಷಿಸಿರುವ ಕಾಂಗ್ರೇಸ್ ಈ ನ್ಯಾಯದ ಐದು ಆಧಾರ ಸ್ತಂಭಗಳ ಮೇಲೆ ಒತ್ತು ಇತರೆ ಘೋಷಣೆಗಳನ್ನು ಮಾಡಲಿದೆ.

ಐದು ಪ್ರಮುಖ ಗ್ಯಾರಂಟಿಯಾಗಿದ್ದು ಇದರ ಜೊತೆಗೆ ದೇಶಕ್ಕೆ ಅನ್ವಯಿಸುವ ರೀತಿಯಲ್ಲಿ ದೊಡ್ಡ ಘೋಷಣೆ ಒಳಗೊಂಡಿರಲಿದೆ ಎನ್ನಲಾಗಿದೆ. ಈ ಎಲ್ಲ ಅಂಶಗಳನ್ನು ಜನರ ಮನೆಗೆ ತಲುಪಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಜನರನ್ನು ಸೆಳೆಯುವ ಲೆಕ್ಕಚಾರದಲ್ಲಿದೆ ಕಾಂಗ್ರೇಸ್.

Previous Post
ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ರಾಜ್ಯಸಭೆಯಿಂದ ನಿವೃತ್ತಿ
Next Post
ಸಂವಿಧಾನವನ್ನು ಬದಲಾಯಿಸಲು ನಮಗೆ ಉಭಯ ಸದನಗಳಲ್ಲಿ ಅತ್ಯಧಿಕ ಬಹುಮತ ಬೇಕು ಬಿಜೆಪಿ ಅಭ್ಯರ್ಥಿ ಜ್ಯೋತಿ ಮಿರ್ಧಾ ವಿವಾದತ್ಮಾಕ ಹೇಳಿಕೆ

Recent News