ಭಾರತೀಯ ಬಿಲಿಯನೇರ್ಗಳ ಸಂಪತ್ತು 41% ಹೆಚ್ಚಳ – ದೇಶದ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿ, ಅದಾನಿಗೆ ಅಗ್ರಸ್ಥಾನ
ನವದೆಹಲಿ : ಫೋರ್ಬ್ಸ್ ತನ್ನ ಇತ್ತೀಚಿನ ವಿಶ್ವದ ಬಿಲಿಯನೇರ್ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ, 200 ಭಾರತೀಯರನ್ನು ಈ ಪಟ್ಟಿ ಒಳಗೊಂಡಿದ್ದು $954 ಶತಕೋಟಿಯ ಸಾಮೂಹಿಕ ಸಂಪತ್ತನ್ನು ಹೊಂದಿದ್ದಾರೆ. ಕಳೆದ ವರ್ಷ 169 ಭಾರತೀಯರು ಈ ಪಟ್ಟಿಯಲ್ಲಿದ್ದರು $675 ಶತಕೋಟಿ ಮೌಲ್ಯ ಹೊಂದಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತೀಯ ಬಿಲಿಯನೇರ್ಗಳ ಸಂಪತ್ತು ಈ ಬಾರಿ 41% ಪಟ್ಟಿಯಲ್ಲಿ ಹೆಚ್ಚಳವಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ನ ಅಧ್ಯಕ್ಷ ಮುಖೇಶ್ ಅಂಬಾನಿ 116 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ ಭಾರತೀಯ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ಜಾಗತಿಕ ಮಟ್ಟದಲ್ಲಿ ಒಂಬತ್ತನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇದರ ಜೊತೆಗೆ ಭಾರತ ಮತ್ತು ಏಷ್ಯಾದ ಶ್ರೀಮಂತ ವ್ಯಕ್ತಿಯೂ ಆಗಿದ್ದಾರೆ. ಅಂಬಾನಿಯವರ ನಿವ್ವಳ ಮೌಲ್ಯವು 39.76% ಹೆಚ್ಚಾಗಿದೆ, $100 ಬಿಲಿಯನ್ ಕ್ಲಬ್ನಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯರಾಗಿದ್ದಾರೆ.
ಅದಾನಿ ಗ್ರೂಪ್ನ ಅಧ್ಯಕ್ಷರಾದ ಗೌತಮ್ ಅದಾನಿ ಅವರು $ 84 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಭಾರತದ ಶ್ರೀಮಂತರಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸಾವಿತ್ರಿ ಜಿಂದಾಲ್ $33.5 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಭಾರತದ ಶ್ರೀಮಂತ ಮಹಿಳೆಯಾಗಿ ಹೊರಹೊಮ್ಮಿದ್ದಾರೆ. ಕಳೆದ ವರ್ಷ ಅವರು ಆರನೇ ಸ್ಥಾನದಲ್ಲಿದ್ದರು ಈ ಬಾರಿ ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ.
ಫೋರ್ಬ್ಸ್ 2024 ಪಟ್ಟಿಯು ನರೇಶ್ ಟ್ರೆಹಾನ್, ರಮೇಶ್ ಕುಂಞಿಕಣ್ಣನ್ ಮತ್ತು ರೇಣುಕಾ ಜಗ್ತಿಯಾನಿ ಅವರಂತಹ ಪ್ರಮುಖ ವ್ಯಕ್ತಿಗಳನ್ನು ಒಳಗೊಂಡಂತೆ 25 ಹೊಸ ಭಾರತೀಯ ಬಿಲಿಯನೇರ್ಗಳನ್ನು ಪರಿಚಯಿಸಿದೆ. ಬೈಜು ರವೀಂದ್ರನ್ ಮತ್ತು ರೋಹಿಕಾ ಮಿಸ್ತ್ರಿ ಅವರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿದೆ. ಜಾಗತಿಕ ಮಟ್ಟದಲ್ಲಿ ಬರ್ನಾರ್ಡ್ ಅರ್ನಾಲ್ಟ್ ಮತ್ತು ಕುಟುಂಬದವರು $233 ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ, ನಂತರದಲ್ಲಿ ಎಲೋನ್ ಮಸ್ಕ್ ($195 ಶತಕೋಟಿ), ಜೆಫ್ ಬೆಜೋಸ್ ($194 ಶತಕೋಟಿ), ಮಾರ್ಕ್ ಜುಕರ್ಬರ್ಗ್ ($177 ಶತಕೋಟಿ), ಮತ್ತು ಲ್ಯಾರಿ ಎಲಿಸನ್ ($114 ಶತಕೋಟಿ) ಆಸ್ತಿ ಹೊಂದಿದ್ದಾರೆ.
ಫೋರ್ಬ್ಸ್ 2024 ಪಟ್ಟಿಯಲ್ಲಿರುವ ಭಾರತೀಯರು
ಮುಖೇಶ್ ಅಂಬಾನಿ ನಿವ್ವಳ ಮೌಲ್ಯ 116 ಬಿಲಿಯನ್ ಡಾಲರ್
ಗೌತಮ್ ಅದಾನಿ- 84 ಬಿಲಿಯನ್ ಡಾಲರ್ ಮೌಲ್ಯ
ಶಿವ ನಡಾರ್ ನಿವ್ವಳ ಮೌಲ್ಯ $36.9 ಬಿಲಿಯನ್
ಸಾವಿತ್ರಿ ಜಿಂದಾಲ್ ನಿವ್ವಳ ಮೌಲ್ಯ $33.5 ಬಿಲಿಯನ್
ದಿಲೀಪ್ ಶಾಂಘ್ವಿ ನಿವ್ವಳ ಮೌಲ್ಯ $26.7 ಬಿಲಿಯನ್
ಸೈರಸ್ ಪೂನಾವಲ್ಲಾ- ನಿವ್ವಳ ಮೌಲ್ಯ $21.3 ಬಿಲಿಯನ್
ಕುಶಾಲ್ ಪಾಲ್ ಸಿಂಗ್- ನಿವ್ವಳ ಮೌಲ್ಯ $20.9 ಬಿಲಿಯನ್
ಕುಮಾರ್ ಬಿರ್ಲಾ – ನಿವ್ವಳ ಮೌಲ್ಯ $19.7 ಬಿಲಿಯನ್
ರಾಧಾಕಿಶನ್ ದಮಾನಿ- ನಿವ್ವಳ ಮೌಲ್ಯ $17.6 ಬಿಲಿಯನ್
ಲಕ್ಷ್ಮಿ ಮಿತ್ತಲ್ ನಿವ್ವಳ ಮೌಲ್ಯ $16.4 ಬಿಲಿಯನ್