ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಒಟ್ಟಾರೆ ಶೇ. 81.15ರಷ್ಟು ಫಲಿತಾಂಶ ಬಂದಿದೆ. ಎಂದಿನಂತೆ ಈ ಬಾರಿಯೂ ಬಾಲಿಕಿಯರೇ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ.

ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಒಟ್ಟಾರೆ ಶೇ. 81.15ರಷ್ಟು ಫಲಿತಾಂಶ ಬಂದಿದೆ. ಎಂದಿನಂತೆ ಈ ಬಾರಿಯೂ ಬಾಲಿಕಿಯರೇ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿಂದು ಫಲಿತಾಂಶಗಳ ವಿವರಗಳನ್ನು ನೀಡಿದರು.
ಈ ವರ್ಷ ಒಟ್ಟಾರೆ 6,81,079 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ 5,52,690 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಒಟ್ಟಾರೆ ಶೇ. 81.15ರಷ್ಟು ಫಲಿತಾಂಶ ಬಂದಿದೆ ಎಂದರು.
ಕಳೆದ ವರ್ಷಕ್ಕೆ ಹೋಲಿಸಿದರೆ ಫಲಿತಾಂಶದ ಪ್ರಮಾಣ ಏರಿಕೆಯಾಗಿದ್ದು, ಕಳೆದ ವರ್ಷ ಶೇ.74.67 ರಷ್ಟು ಫಲಿತಾಂಶ ಬಂದಿತ್ತು. ಈ ವರ್ಷ ಶೇ.6.48 ರಷ್ಟು ಫಲಿತಾಂಶದಲ್ಲಿ ಏರಿಕೆಯಾಗಿದೆ ಎಂದು ಅವರು ಹೇಳಿದರು.
ಕಲಾವಿಭಾಗದಲ್ಲಿ ಶೇ. 68.36 ರಷ್ಟು ವಾಣಿಜ್ಯ ವಿಭಾಗದಲ್ಲಿ ಶೇ.80.94 ರಷ್ಟು, ವಿಜ್ಞಾನ ವಿಭಾಗದಲ್ಲಿ ಶೇ.89.96 ರಷ್ಟು ಫಲಿತಾಂಶ ಬಂದಿದೆ ಎಂದು ಅವರು ವಿವರ ನೀಡಿದರು.
ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಶೇ. 97 ರಷ್ಟು ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಪಡೆದಿದ್ದರೆ, ಶೇ. 96.80 ಫಲಿತಾಂಶದೊಂದಿಗೆ ಉಡುಪಿ 2ನೇ ಸ್ಥಾನದಲ್ಲಿದೆ. ಶೇ. 94.89ರಷ್ಟು ಫಲಿತಾಂಶದೊಂದಿಗೆ ವಿಜಯಪುರ 3ನೇ ಸ್ಥಾನದಲ್ಲಿದ್ದರೆ, ಶೇ. 72.86 ಫಲಿತಾಂಶದೊಂದಿಗೆ ಗದಗ ಜಿಲ್ಲೆ ಕೊನೆಯಸ್ಥಾನದಲ್ಲಿದೆ.

ಬಾಲಕಿಯರೇ ಮೇಲಗೈ, ಗ್ರಾಮೀಣರು ಮುಂದು
ಎಂದಿನಂತೆ ಫಲಿತಾಂಶದಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದು, ಬಾಲಕಿಯರ ಉತ್ತೀರ್ಣದ ಪ್ರಮಾಣ ಶೇ., 84.87 ರಷ್ಟಿದ್ದರೆ, ಬಾಲಕರ ಉತ್ತೀರ್ಣದ ಪ್ರಮಾಣ ಶೇ.76.98ರಷ್ಟಿದೆ, ಫಲಿತಾಂಶದಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಮುಂದಿದ್ದು, ನಗರ ಪ್ರದೇಶ ವಿದ್ಯಾರ್ಥಿಗಳ ಉತ್ತೀರ್ಣತಾ ಪ್ರಮಾಣ ಶೇ.81.10 ರಷ್ಟಿದ್ದರೆ ಗ್ರಾಮಾಂತರ ಪ್ರದೇಶ ವಿದ್ಯಾರ್ಥಿಗಳ ಉತೀರ್ಣತಾ ಪ್ರಮಾಣ ಶೇ.81.31 ರಷ್ಟು ಇದೆ.

ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದವರ ಉತ್ತೀರ್ಣತಾ ಪ್ರಮಾಣ ಶೇ.70.41 ರಷ್ಟಿದ್ದರೆ ಇಂಗ್ಲಿಷ್ ಮಾಧ್ಯಮದಲ್ಲಿ ಶೇ. ಪರೀಕ್ಷೆ ಬರೆದವರ ಉತ್ತೀರ್ಣತಾ ಪ್ರಮಾಣ ಶೇ.87.40ರಷ್ಟಿದೆ ಈ ಬಾರಿಯ ಪರೀಕ್ಷೆಯಲ್ಲಿ ಒಟ್ಟಾರೆ ಉನ್ನತ ಶ್ರೇಣಿ ಮೇಲೆ ಶೇ. 85 ಅಥವಾ ಅದಕ್ಕಿಂತ ಹೆಚ್ಚಿನ ಅಂಕ ಪಡದ ವಿದ್ಯಾರ್ಥಿಗಳ ಸಂಖ್ಯೆ 1,53,370ರಷ್ಟಿದೆ ಪ್ರಥಮ ದರ್ಜೆ ಅಂದರೆ ಶೇ. 85 ಕ್ಕಿಂತ ಕಡಿಮೆ ಹಾಗೂ ಶೇ. 60 ಕ್ಷಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ 2,89,733, ದ್ವಿತೀಯ ದರ್ಜೆ ಅಂದರೆ ಶೇ.60ಕ್ಕಿಂತ ಕಡಿಮೆ ಹಾಗೂ ಶೇ. 5ಕ್ಕಿಂತ ಹೆಚ್ಚು ಅಂಕ ಪಡೆದವರ ವಿದ್ಯಾರ್ಥಿಗಳ ಸಂಖ್ಯೆ 72,098 ರಷ್ಟಿದ್ದೆರೆ ದ್ವಿತೀಯ ದರ್ಜೆ ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ 37,489, ಈ ಬಾರಿಯ ಪರೀಕ್ಷೆಯಲ್ಲಿ 91 ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶೇ. 100ರಷ್ಟು ಫಲಿತಾಂಶ ಬಂದಿದ್ದರೆ 26 ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಶೇ. 100ರಷ್ಟು ಫಲಿತಾಂಶ ಬಂದಿದ್ದು, 345 ಅನುದಾನರಹಿತ ಪದವಿ ಪೂರ್ವ ಕಾಲೇಜಿನಲ್ಲಿ ಶೇ. 100ರಷ್ಟು ಫಲಿತಾಂಶ ಬಂದಿದೆ.

2 ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ 6 ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ 26 ಅನುದಾನರಹಿತ ಪದವಿಪೂರ್ವ ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.
ವಿವಿಧ ವಿಷಯಗಳಲ್ಲಿ 100ಕ್ಕೆ 100 ಅಂಕ ಗಳಿಸಿದ ವಿದ್ಯಾರ್ಥಿಗಳು
ಈ ಬಾರಿಯ ಪರೀಕ್ಷೆಯಲ್ಲಿ ಕನ್ನಡದಲ್ಲಿ 2,570 ವಿದ್ಯಾರ್ಥಿಗಳು 100ಕ್ಕೆ 100 ರಷ್ಟು ಅಂಕಗಳಿಸಿದರೆ ಇಂಗ್ಲಿಷ್‍ನಲ್ಲಿ 5, ಹಿಂದಿಯಲ್ಲಿ 55, ಸಂಸ್ಕøತದಲ್ಲಿ 1,499, ಇತಿಹಾಸದಲ್ಲಿ 933, ಅರ್ಥಶಾಸ್ತ್ರದಲ್ಲಿ 1,403, ಸಮಾಜಶಾಸ್ತ್ರ್ರದಲ್ಲಿ 405, ವ್ಯವಹಾರ ಅಧ್ಯಯನದಲ್ಲಿ 293, ಭೂಗೋಳ ಶಾಸ್ತ್ರದಲ್ಲಿ 466, ರಾಜ್ಯಶಾಸ್ತ್ರದಲ್ಲಿ 339, ಲೆಕ್ಕಶಾಸ್ತ್ರದಲ್ಲಿ 1,788, ಗಣಿತ ಶಾಸ್ತ್ರÀದಲ್ಲಿ 6,960, ಭೌಶಾಸ್ತ್ರದಲ್ಲಿ 454, ರಸಾಯನ ಶಾಸ್ತ್ರದಲ್ಲಿ 1960, ಜೀವಶಾಸ್ತ್ರದಲ್ಲಿ 5925, ಗಣಕ ವಿಜ್ಞಾನದಲ್ಲಿ 2661, ಬೇಸಿಕ್ ಮ್ಯಾಥ್ಸ್‍ನಲ್ಲಿ 289, ಆಟೋಮೊಬೈಲ್‍ನಲ್ಲಿ 23, ಬ್ಯೂಟಿ ಮತ್ತು ವೆಲ್‍ನೆಸ್‍ನಲ್ಲಿ 12, ಗೃಹ ವಿಜ್ಞಾನದಲ್ಲಿ 3, ಎಲೆಕ್ಟ್ರಾನಿಕ್ಸ್‍ನಲ್ಲಿ 277, ಶಿಕ್ಷಣದಲ್ಲಿ 236, ಮನಃಶಾಸ್ತ್ರದಲ್ಲಿ 80, ತರ್ಕಶಾಸ್ತ್ರದಲ್ಲಿ 3, ಫ್ರೆಂಚ್‍ನಲ್ಲಿ 32, ಐಚ್ಛಿಕ ಕನ್ನಡದಲ್ಲಿ 35, ಭೂವಿಜ್ಞಾನದಲ್ಲಿ 3, ಮಾಹಿತಿ ತಂತ್ರಜ್ಞಾನದಲ್ಲಿ 889 ವಿದ್ಯಾರ್ಥಿಗಳು ಶೇ. 100ಕ್ಕೇ 100ರಷ್ಟು ಅಂಕ ಪಡೆದಿದ್ದಾರೆ.

ಪರೀಕ್ಷೆ-2 ಏ. 29 ರಿಂದ ಆರಂಭ
ಈ ವರ್ಷದಿಂದ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಉತ್ತಮ ಪಡಿಸಿಕೊಳ್ಳಲು ಪರೀಕ್ಷೆ 2ಕ್ಕೆ ಹಾಜರಾಗಬಹುದಾಗಿದ್ದು, ಪುನರಾವರ್ತಿತ ಮತ್ತು ಫಲಿತಾಂಶ ಉತ್ತಮ ಪಡಿಸಿಕೊಳ್ಳಲು ಪರೀPಕ್ಷೆ -2ಕ್ಕೆ ದಿನಾಂಕ 10,04,2024ರಿಂದ 16,04.2024ರವರೆಗೆ ತಮ್ಮ ಕಾಲೇಜು ಅಥವಾ ಕೆಎಸ್‍ಇಎಬಿ ಪೋರ್ಟಲ್‍ನಲ್ಲಿ ಆನ್‍ಲೈನ್‍ನಲ್ಲಿ ನೋಂದಾಯಿಸಿಕೊಳ್ಳಬಹುದು.
ಪರೀಕ್ಷೆ-2
ದ್ವಿತೀಯ ಪರೀಕ್ಷೆಗಳು ಈ ತಿಂಗಳ 29 ರಿಂದ ಆರಂಭವಾಗಲಿದ್ದು, ಮೇ 16ರವರೆಗೆರೂ ದ್ವಿತೀಯ ಪರೀಕ್ಷೆ-2 ನಡೆಯಲಿದೆ.
ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್‍ಗೆ ಅರ್ಜಿ ಸಲ್ಲಿಸಲು ಈ ತಿಂಗಳ 16 ಕಡೆಯ ದಿನವಾಗಿದೆ. ಮರು ಮೌಲ್ಯಮಾಪನ ಹಾಗೂ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಈ ತಿಂಗಲ 14 ರಿಂದ ಅವಕಾಶವಿದ್ದು, ಏ. 20 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿ ಪಡೆಯಲುಪ್ರತಿ ವಿಷಯಕ್ಕೆ 530 ರೂ. ಶುಲ್ಕವಿದ್ದು, ಪ್ರತಿ ಮರುಮೌಲ್ಯಮಾಪನದ ಶುಲ್ಕ ಪ್ರತಿ ವಿಷಯಕ್ಕೆ 1670 ಆಗಿದೆ.
ಅಂಕಗಳ ಮರು ಎಣಿಕೆಗೆ ಯಾವುದೇ ಶುಲ್ಕ ಇಲ್ಲ
ಪರೀಕ್ಷೆ-2ಗೆ ದಂಡರಹಿತವಾಗಿ ಅರ್ಜಿ ಸಲ್ಲಿಸಲು ಏ. 17 ಕೊನೆ ದಿನವಾಗಿದ್ದು ದಂಡ ಸಹಿತವಾಗಿ ಅರ್ಜಿ ಸಲ್ಲಿಸಲು ಏ.20 ಕಡೆಯ ದಿನ

ಜಿಲ್ಲಾವಾರು ಫಲಿತಾಂಶದ ವಿವರ:
ದಕ್ಷಿಣ ಕನ್ನಡ 97.37,
ಉಡುಪಿ-96.80,
ವಿಜಯಪುರ-94.89,
ಉತ್ತರ ಕನ್ನಡ-92.51,
ಕೊಡಗು- 92.13
ಬೆಂಗಳೂರು ದಕ್ಷಿಣ, 89.57
ಬೆಂಗಳೂರು ಉತ್ತರ, 88.67
ಶಿವಮೊಗ್ಗ-88.58
ಚಿಕ್ಕಮಗಳೂರು-88.20
ಬೆಂಗಳೂರು ಗ್ರಾಮಾಂತರ=87.55
ಬಾಗಲಕೋಟೆ-87.54
ಕೋಲಾರ-86.12
ಹಾಸನ-85.83
ಚಾಮರಾಜನಗರ-84.99
ಚಿಕ್ಕೋಡಿ-84.10
ರಾಮನಗರ-83.58
ಮೈಸೂರು-83.13
ಚಿಕ್ಕಬಳ್ಳಾಪುರ-82.84
ಬೀದರ್-81.69
ತುಮಕೂರು-81.03
ದಾವಣಗೆರೆ-96
ಕೊಪ್ಪಳ-80.83
ಧಾರವಾಡ-80.70
ಮಂಡ್ಯ-80.56
ಹಾವೇರಿ-78.36
ಯಾದಗಿರಿ-77.29
ಬೆಳಗಾವಿ-7720
ಕಲಬುರಗಿ-75.48
ಬಳ್ಳಾರಿ-74.70
ರಾಯಚೂರು-73.11
ಚಿತ್ರದುರ್ಗ-72.92
ಗದಗ-72.86

Previous Post
ಉಮರ್ ಖಾಲಿದ್ ಜಾಮೀನು ಅರ್ಜಿ ವಿರೋಧಿಸಿದ ದೆಹಲಿ ಪೊಲೀಸ್
Next Post
ಎಎಪಿ ಶಾಸಕನ ಬಂಧನಕ್ಕೆ ಕೋರ್ಟ್‌ ಮೆಟ್ಟಿಲೇರಿದ ED

Recent News