ಭಾರಿ ಸದ್ದು ಮಾಡ್ತಿದೆ ಕುರುಡು ಕಾಂಚಾಣ: 4650 ಕೋಟಿ ರೂ. ಹಣ ಜಪ್ತಿ ದಾಖಲೆ

ಭಾರಿ ಸದ್ದು ಮಾಡ್ತಿದೆ ಕುರುಡು ಕಾಂಚಾಣ: 4650 ಕೋಟಿ ರೂ. ಹಣ ಜಪ್ತಿ ದಾಖಲೆ

ದೇಶದಲ್ಲಿ ಚುನಾವಣಾ ಕಾವು ಏರುತ್ತಲೇ ಇದೆ. ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಭರ್ಜರಿ ತಯಾರಿ ನಡೆಸಿದ್ದಾರೆ. ಮತದಾರರನ್ನು ತಮ್ಮತ್ತ ಸೆಳೆಯಲು ಪಕ್ಷಗಳ ಅಭ್ಯರ್ಥಿಗಳು ಭಿನ್ನ ವಿಭಿನ್ನ ತಂತ್ರಕ್ಕೆ ಮಣೆ ಹಾಕುತ್ತಿವೆ. ಮೊದಲ ಹಂತದ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇನ್ನು ಚುನಾವಣಾ ಅಧಿಕಾರಿಗಳು ದೇಶದಲ್ಲಿ ಒಟ್ಟು ಜಪ್ತಿ ಮಾಡಿದ ಹಣ ಹಾಗೂ ಮಧ್ಯದ ಬಗ್ಗೆ ಮಾಹಿತಿಯನ್ನು ನೀಡಿದೆ. ಸೀಜ್‌ ಆದ ಹಣ ಎಷ್ಟು ಎಂದು ತಿಳಿದರೆ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವುದು ಗ್ಯಾರಂಟಿ. ಲೋಕಸಭಾ ಚುನಾವಣೆಯ ಹಿನ್ನೆಯಲ್ಲಿ ಚುನಾವಣಾ ಅಧಿಕಾರಿಗಳು ಒಟ್ಟು 4650 ಕೋಟಿ ರೂಪಾಯಿಯನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಹಣದಲ್ಲಿ ಶೇಕಡಾ 45 ರಷ್ಟು ಮಾದಕ ದ್ರವ್ಯದಿಂದ ಬಂದಿದೆ.

ಕಳೆದ ಬಾರಿಗಿಂತ ಶೇ.34 ಹೆಚ್ಚು ಕಳೆದ ಒಂದು ತಿಂಗಳಲ್ಲಿ ವಶಪಡಿಸಿಕೊಂಡ ಅಕ್ರಮ ಹಣವು 2019 ರ ಲೋಕಸಭಾ ಚುನಾವಣೆಯ ವೇಳೆ ವಶಪಡಿಸಿಕೊಂಡ ಅಂಕಿ ಅಂಶವನ್ನು ಮೀರಿದೆ. ಮಾರ್ಚ್ 1ರಿಂದ ಪ್ರತಿದಿನ ಚುನಾವಣಾ ಆಯೋಗದ ಅಧಿಕಾರಿಗಳು ಸುಮಾರು 100 ಕೋಟಿ ರೂಪಾಯಿ ಅಕ್ರಮ ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇಷ್ಟೇ ಅಲ್ಲ, ಈ ಬಾರಿ ಖರ್ಚು ಮಾಡಿರುವ ಮೊತ್ತ 75 ವರ್ಷಗಳ ಲೋಕಸಭೆ ಚುನಾವಣೆ ಇತಿಹಾಸದಲ್ಲೇ ಅತಿ ಹೆಚ್ಚು. 2019ರ ಲೋಕಸಭೆ ಚುನಾವಣೆಗೂ ಮುನ್ನ 3475 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದುವರೆಗಿನ ದಾಖಲೆಯಾಗಿತ್ತು. ಈ ಬಾರಿಯ ಚುನಾವಣೆಗೆ ಇನ್ನು ದಿನಗಣನೇ ಆರಂಭವಾದ ಬೆನ್ನಲ್ಲೆ ಕಳೆದ ಬಾರಿಯ ಅಂಕಿ ಅಂಶವನ್ನು ಮೀರಿದ್ದು ದಾಖಲೆಯಾಗಿದೆ. ಕಳೆದ ಲೋಕಸಭಾ ಚುನಾವಣೆಗಿಂತ ಹೆಚ್ಚು ಹಣ ಈ ಬಾರಿ ಓಡಾಡುತ್ತಿದೆ.

ಏನೇನು ಜಪ್ತಿ? ಉಚಿತ ಕೊಡುಗೆಗಳನ್ನು ನೀಡುವ ಭರಾಟೆಯಲ್ಲಿ ಅಭ್ಯರ್ಥಿಗಳು ಮತದಾರರಿಗೆ ದಿನಬಳಿಕೆ ವಸ್ತುಗಳನ್ನು ನೀಡಿದೆ. ಆಯೋಗದ ಪ್ರಕಾರ ಈ ವರ್ಷ ಸುಮಾರು 1143 ಕೋಟಿ ರೂ. ಮೌಲ್ಯದ ಉಚಿತಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಪ್ತಿ ಮಾಡಿದ ಹಣದಲ್ಲಿ ಕೇವಲ 2,069 ಕೋಟಿ ರೂ.ಗಳ ಔಷಧ (ಡ್ರಗ್ಸ್) ಮಾತ್ರ ಸೇರಿದ್ದು, ಇದಲ್ಲದೇ ರೂ.395 ಕೋಟಿ ಮೌಲ್ಯದ ನಗದು ಹಾಗೂ ರೂ.489 ಕೋಟಿಗೂ ಅಧಿಕ ಮೌಲ್ಯದ ಮದ್ಯ ಸೇರಿದೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ. ಯಾವ ರಾಜ್ಯಕ್ಕೆ ನಂಬರ್ 1 ಸ್ಥಾನ ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಮಾರ್ಚ್ 1 ರಿಂದ ರಾಜಸ್ಥಾನದಲ್ಲಿ ಒಟ್ಟು 778.53 ಕೋಟಿ ರೂ. ವಶಪಡಿಸಿಕೊಳ್ಳಲಾಗಿದ್ದು ಮೊದಲ ಸ್ಥಾನದಲ್ಲಿದೆ. ಗುಜರಾತ್‌ನಲ್ಲಿ 605.34 ಕೋಟಿ ರೂ.ಗಳನ್ನು ಜಪ್ತಿ ಮಾಡಲಾಗಿದೆ. ತಮಿಳುನಾಡಿನಿಂದ ಅತಿ ಹೆಚ್ಚು 53 ಕೋಟಿ ವಶಪಡಿಸಿಕೊಳ್ಳಲಾಗಿದೆ. ಇದಾದ ನಂತರ ತೆಲಂಗಾಣದಲ್ಲು 49 ಕೋಟಿ ರೂ., ಮಹಾರಾಷ್ಟ್ರದಿಂದ 40 ಕೋಟಿ ರೂ., ಕರ್ನಾಟಕ ಮತ್ತು ರಾಜಸ್ಥಾನದಿಂದ ತಲಾ 35-35 ಕೋಟಿ ರೂ. ಜಪ್ತಿ ಮಾಡಿಕೊಳ್ಳಲಾಗಿದೆ. ಚುನಾವಣಾ ಆಯೋಗದ ಅಂಕಿ ಅಂಶಗಳನ್ನು ನೋಡಿದರೆ, ವಶಪಡಿಸಿಕೊಂಡ ಭಾರತದ ಟಾಪ್ 10 ರಾಜ್ಯಗಳ ಪೈಕಿ 5 ರಾಜ್ಯಗಳು ಬಿಜೆಪಿ ಆಳ್ವಿಕೆಯಲ್ಲಿವೆ. ಈ ಮೊದಲ ಹತ್ತು ರಾಜ್ಯಗಳಲ್ಲಿ ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಬಿಹಾರ ಸೇರಿವೆ.

Previous Post
ಇಂದು ಬಾಲ ರಾಮನ ಹಣೆಗೆ ಸೂರ್ಯರಶ್ಮಿ ತಿಲಕ ರಾಮನವಮಿ ಹಿನ್ನಲೆ ಅಯೋಧ್ಯೆಯಲ್ಲಿ ಭಾರಿ ಜನ ಸಂದಣಿ
Next Post
ಸಿಎಎ ರದ್ದು, ಉಚಿತ ಎಲ್‌ಪಿಜಿ ಸಿಲಿಂಡರ್‌ ಟಿಎಂಸಿ ಪ್ರಣಾಳಿಕೆ ಘೋಷಣೆ

Recent News