ದೆಹಲಿ ಬಳಿಕ ಅಹಮದಬಾದ್ ಶಾಲೆಗಳಿಗೂ ಬಾಂಬ್ ಬೆದರಿಕೆ

ದೆಹಲಿ ಬಳಿಕ ಅಹಮದಬಾದ್ ಶಾಲೆಗಳಿಗೂ ಬಾಂಬ್ ಬೆದರಿಕೆ

ನವದೆಹಲಿ : ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನದ ಒಂದು ದಿನದ ಮುನ್ನ ಗುಜರಾತ್‌ ಅಹ್ಮದಬಾದ್ ನಲ್ಲಿರುವ ಹಲವು ಖಾಸಗಿ ಶಾಲೆಗಳಿಗೆ ಬಾಂಬ್ ಸ್ಫೋಟಿಸುವುದಾಗಿ ಇಮೇಲ್ ಮಾಡಲಾಗಿದೆ. ಇತ್ತಿಚೇಗೆ ದೆಹಲಿಯಲ್ಲಿ ಬಂದ ಬೆದರಿಕೆ ರೀತಿಯಲ್ಲಿ ಹಲವಾರು ಶಾಲೆಗಳಿಗೆ ಏಕ ಕಾಲದಲ್ಲಿ ಬೆದರಿಕೆ ಹಾಕಲಾಗಿದೆ.

ಅಹ್ಮದಬಾದ್‌ನ ಬೋಪಾಲ್ ನಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್, ಆನಂದ್ ನಿಕೇತನ್ ವಸ್ತ್ರಾಪುರದಲ್ಲಿರುವ ಏಷ್ಯಾ ಇಂಗ್ಲಿಷ್ ಸ್ಕೂಲ್, ಘಟ್ಲೋಡಿಯಾದಲ್ಲಿರುವ ಕ್ಯಾಲೋರೆಕ್ಸ್ ಶಾಲೆ, ಅಮೃತ ವಿದ್ಯಾಲಯ ಮತ್ತು ಚಂದಖೇಡದಲ್ಲಿರುವ ನ್ಯೂ ನೋಬಲ್ ಸ್ಕೂಲ್ ಮತ್ತು ಒಎನ್‌ಜಿಸಿ ಕೇಂದ್ರೀಯ ವಿದ್ಯಾಲಯಕ್ಕೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ‌.

ಇಮೇಲ್ ಸ್ವೀಕರಿಸಿದ ಬೆನ್ನಲೆ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿವೆ. ಬೇಸಿಗೆ ರಜೆ ಹಿನ್ನಲೆ ಆತಂಕಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿಲ್ಲ. ಮಾಹಿತಿ ಪಡೆದ ಪೊಲೀಸ್ ತಂಡಗಳು ಬಾಂಬ್ ಸ್ಕ್ವಾಡ್‌ಗಳೊಂದಿಗೆ ಶಾಲೆಗಳಿಗೆ ಬಂದು ಪರಿಶೀಲನೆ ನಡೆಸಿದವು. ಪ್ರಾಥಮಿಕ ಮಾಹಿತಿ ಪ್ರಕಾರ ಬೆದರಿಕೆ ಇಮೇಲ್‌ಗಳು ಭಾರತದ ಹೊರಗಿನ ಡೊಮೇನ್‌ನಿಂದ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ಬೆದರಿಕೆ ಬಂದ ಶಾಲೆಗಳನ್ನು ಪರಿಶೀಲಿಸಿದೆ, ಎಲ್ಲವೂ ಸುರಕ್ಷಿತ ಮತ್ತು ಸುಭದ್ರವಾಗಿದೆ. ನಮ್ಮ ಪೊಲೀಸರು, ಆಡಳಿತ ಮತ್ತು ಏಜೆನ್ಸಿಗಳು ತನಿಖೆ ನಡೆಸುತ್ತಿವೆ. ಗಾಬರಿಯಾಗುವಂತದ್ದು ಏನೂ ಇಲ್ಲ ಎಂದು ಬಾಂಬ್ ಸ್ಕ್ವಾಡ್ ಅಧಿಕಾರಿ ಬಿ. ಯಾದವ್ ಹೇಳಿದ್ದಾರೆ. ಕಳೆದ ವಾರ, ದೆಹಲಿ-ಎನ್‌ಸಿಆರ್‌ನಾದ್ಯಂತ 150 ಕ್ಕೂ ಹೆಚ್ಚು ಶಾಲೆಗಳು ಮತ್ತು ಲಕ್ನೋದ ಒಂದು ಶಾಲೆಗಳಿಗೆ ರಷ್ಯಾದಿಂದ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದವು.

Previous Post
ಕಾಂಗ್ರೆಸ್ ಗೆದ್ದರೆ ದಲಿತರು-OBCಗಳ ಮೀಸಲಾತಿ ಹೆಚ್ಚಳ: ರಾಹುಲ್ ಗಾಂಧಿ ಭರವಸೆ
Next Post
ಚುನಾವಣಾ ಹೊತ್ತಲ್ಲಿ ಇಡಿ ದಾಳಿ, ಜಾರ್ಖಂಡ್‌ನಲ್ಲಿ ಕಂತೆ ಕಂತೆ ಹಣ ವಶಕ್ಕೆ

Recent News