ಪುಷ್ಪ ಸಿನಿಮಾದಿಂದ ವೃತ್ತಿ ಬದುಕಿನಲ್ಲಿ ಬದಲಾವಣೆಯಾಗಲಿಲ್ಲ : ಫಾಸಿಲ್

ಪುಷ್ಪ ಸಿನಿಮಾದಿಂದ ವೃತ್ತಿ ಬದುಕಿನಲ್ಲಿ ಬದಲಾವಣೆಯಾಗಲಿಲ್ಲ : ಫಾಸಿಲ್

ಮುಂಬೈ, ಮೇ 7: ಪುಷ್ಪಾ.. ದಿ ರೈಸ್ ಸಿನಿಮಾವನ್ನು ಯಾರೂ ನೋಡಿಲ್ಲ ಹೇಳಿ. ಆ ಸಿನಿಮಾದಲ್ಲಿ ಪೊಲೀಸ್ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದು ಫಹಾದ್ ಫಾಸಿಲ್. ಭನ್ವರ್ ಸಿಂಗ್ ಶೇಖಾವತ್ ಪಾತ್ರದಲ್ಲಿ ಎಲ್ಲರ ಗಮನ ಸೆಳೆದಿದ್ದರು. ಖಳನಾಯಕನಾಗಿ ಅಲ್ಲು ಅರ್ಜುನ್ ಎದುರು ತೊಡೆ ತಟ್ಟಿದ್ದರು. ಆದರೆ ಇದೀಗ ಸಂದರ್ಶನವೊಂದರಲ್ಲಿ ಪುಷ್ಪಾ ಸಿನಿಮಾ ಬಗ್ಗೆ ಮಾತನಾಡಿ, ಪುಷ್ಪಾ ಸಿನಿಮಾದಿಂದ ತನ್ನ ವೃತ್ತಿ ಬದುಕಿನಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಇದನ್ನು ನಿರ್ದೇಶಕರ ಮುಂದೆಯೂ ಹೇಳುತ್ತೇನೆ ಎಂದಿದ್ದಾರೆ.

ಪುಷ್ಪ-2 ಸಿನಿಮಾದಲ್ಲೂ ಫಹಾದ್ ಮುಂದುವರೆದಿದ್ದಾರೆ. ಹೀಗಿರುವಾಗ ಹಿಂಗ್ಯಾಕೆ ಹೇಳಿದ್ರು ಎಂಬ ಪ್ರಶ್ನೆ ಕಾಡದೆ ಇರುವುದಿಲ್ಲ. ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಗೆ ಎಷ್ಟು ಪ್ರಶಂಸೆ ಸಿಕ್ಕಿತ್ತೋ, ಅಷ್ಟೇ ಪ್ರಶಂಸೆ ಫಹಾದ್ ಫಾಸಿಲ್ ಅವರಿಗೂ ಸಿಕ್ಕಿತ್ತು. ಈ ಮೆಗಾ ಬಜೆಟ್ ಸಿನಿಮಾದಲ್ಲಿ ಫಹಾದ್ ಕಡಿಮೆ ಸಮಯ ಕಾಣಿಸಿಕೊಂಡರು ಅವರ ಪಾತ್ರ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈ ಸಂಬಂಧ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ಪುಷ್ಪ ಸಿನಿಮಾದಿಂದ ನಿಮ್ಮ ಕ್ರೇಜ್ ಪರಭಾಷೆಗಳಿಗೂ ಹರಡಿದೆಯೇ ಎಂದು ಪ್ರಶ್ನೆಗೆ ಉತ್ತರಿಸಿದ ಫಹಾದ್, ಪುಷ್ಪ ಸಿನಿಮಾದಿಂದ ನನ್ನ ವೃತ್ತಿ ಬದುಕಿನಲ್ಲೇನು ಯಾವುದೇ ಬದಲಾವಣೆ ಆಗಿಲ್ಲ. ಈ ವಿಷಯವನ್ನು ನಿರ್ದೇಶಕ ಸುಕುಮಾರ್ ಮುಂದೆಯೇ ಹೇಳುತ್ತೇನೆ. ಇದರಲ್ಲಿ ಮುಚ್ಚಿಡಲು ಏನು ಇಲ್ಲ‌. ನಾನು ಪ್ರಾಮಾಣಿಕವಾಗಿ ಹೇಳಬೇಕು. ನಾನಿಲ್ಲಿ ನನ್ನ ಕೆಲಸವನ್ನಷ್ಟೇ ಮಾಡುತ್ತಿದ್ದೇನೆ. ಈ ಸಿನಿಮಾ ಬಳಿಕ ಜನ ನನ್ನ ಬಳಿ ಮ್ಯಾಜಿಕ್ ನಿರೀಕ್ಷೆ ಮಾಡುತ್ತಿದ್ದಾರೆ. ಆದರೆ‌ ಈ ಸಿನಿಮಾವನ್ನು ನಾನು ಕೇವಲ‌ ಸುಕುಮಾರ್ ಸರ್ ಅವರ ಮೇಲಿನ ಪ್ರೀತಿಗಾಗಿ ಮಾಡುತ್ತಿದ್ದೇನೆ ಎಂದಿದ್ದಾರೆ.

Previous Post
ಮತದಾನದ ವಿವರ ತಡವಾಗಿ ಪ್ರಕಟ, ಮತದಾರರ ಮಾಹಿತಿ ಮಾಯ: ಖರ್ಗೆ
Next Post
ಬೋಧಕ, ಬೋಧಕೇತರ ನೇಮಕಾತಿ ರದ್ದು ಆದೇಶಕ್ಕೆ ಸುಪ್ರೀಂ ತಡೆ

Recent News