ಕೇಜ್ರಿವಾಲ್ ಗೆ ಜಾಮೀನು ನೀಡುವ ಸುಳಿವು ನೀಡಿದ ಸುಪ್ರೀಂಕೋರ್ಟ್

ಕೇಜ್ರಿವಾಲ್ ಗೆ ಜಾಮೀನು ನೀಡುವ ಸುಳಿವು ನೀಡಿದ ಸುಪ್ರೀಂಕೋರ್ಟ್

ನವದೆಹಲಿ : ಮಧ್ಯಂತರ ಜಾಮೀನು ನೀಡಿದರೆ ಅರವಿಂದ್ ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿ ಯಾವುದೇ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ಮೂಲಕ ಹೊಸ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಂಗ ಬಂಧನದಲ್ಲಿರುವ ಮುಖ್ಯಮಂತ್ರಿ ಕೇಜ್ರಿವಾಲ್ ಅವರಿಗೆ ಸುಪ್ರೀಂಕೋರ್ಟ್ ಜಾಮೀನು ನೀಡುವ ಸುಳಿವು ನೀಡಿದೆ.

ಇಡಿ ಬಂಧನ ಪ್ರಶ್ನಿಸಿ ಮತ್ತು ಮಧ್ಯಂತರ ಜಾಮೀನು ಕೋರಿ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾ. ಸಂಜೀವ್ ಖನ್ನಾ ನೇತೃತ್ವದ ದ್ವಿ ಸದಸ್ಯ ಪೀಠ, ಚುನಾವಣೆ ಹಿನ್ನಲೆ ನಾವು ನಿಮ್ಮ ಮಧ್ಯಂತರ ಜಾಮೀನು ಪರಿಗಣಿಸುತ್ತಿದ್ದೇವೆ ಇಲ್ಲದಿದ್ದರೆ ಪರಿಗಣಿಸುತ್ತಿರಲಿಲ್ಲ ಎಂದು ಹೇಳಿತು.

ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮಧ್ಯಂತರ ಜಾಮೀನು ಅರ್ಜಿಯನ್ನು ತೀವ್ರವಾಗಿ ವಿರೋಧಿಸಿದರು. ದಯವಿಟ್ಟು ರಾಜಕೀಯ ನಾಯಕನನ್ನು ಪ್ರತ್ಯೇಕ ವರ್ಗ ಎಂದು ಗುರುತಿಸಬೇಡಿ ಮತ್ತು ಅವರನ್ನು ಸಾಮಾನ್ಯರಿಂದ ಬೇರ್ಪಡಿಸಬೇಡಿ. 1.5 ವರ್ಷಗಳಲ್ಲಿ ಇಡಿ ಏನನ್ನೂ ಮಾಡಿಲ್ಲ, ಚುನಾವಣೆಯ ಸಮಯದಲ್ಲಿ ಅವರನ್ನು ಬಂಧಿಸಿದೆ ಎನ್ನುವ ಅಭಿಪ್ರಾಯ ಇದೆ, ಇದು ಸರಿಯಾದ ಅನಿಸಿಕೆ ಅಲ್ಲ ಅವರು ಹೇಳಿದರು.

ಚುನಾವಣೆಗಳನ್ನು ಉಲ್ಲೇಖಿಸಿ ಕೇಜ್ರಿವಾಲ್ ಜಾಮೀನು ನೀಡಿವುದು ಕೆಟ್ಟ ಸಂಪ್ರದಾಯ, ಇತರರು ಇದೇ ರೀತಿಯ ವಿನಾಯಿತಿಗಳನ್ನು ಬಯಸುತ್ತಾರೆ. ಆದಾಗ್ಯೂ, ರಾಜಕಾರಣಿಗಳಿಗೆ ಯಾವುದೇ ವಿಶೇಷ ವಿನಾಯಿತಿಯನ್ನು ರಚಿಸುತ್ತಿಲ್ಲ ಆದರೆ ಸಾರ್ವತ್ರಿಕ ಚುನಾವಣೆಗಳು ಬಾಕಿಯಿದೆ ಎಂಬ ಅಂಶವನ್ನು ಗಣನೆಗೆ ತೆಗೆದುಕೊಂಡು ಆದೇಶವನ್ನು ನೀಡುತ್ತಿದೆ ಎಂದು ನ್ಯಾಯಾಲಯ ಹೇಳಿತು‌.

ಈ ನಡುವೆ ಕೇಜ್ರಿವಾಲ್ ಪರ ವಕೀಲ ಅಭಿಷೇಕ್ ಮನುಸಿಂಘ್ವಿ ಪ್ರಶ್ನಿಸಿದ ಪೀಠ, ಚುನಾವಣೆಗಳ ಹಿನ್ನೆಲೆಯಲ್ಲಿ ನಾವು ಮಧ್ಯಂತರ ಜಾಮೀನು ನೀಡುತ್ತೇವೆ ಎಂದಿಟ್ಟುಕೊಳ್ಳಿ ನಂತರ ನೀವು ಕಚೇರಿಗೆ ಹಾಜರಾದರೆ ಘರ್ಷಣೆಗೆ ದಾರಿ ಮಾಡಿಕೊಡುತ್ತದೆ. ಸರ್ಕಾರದ ಕೆಲಸದಲ್ಲಿ ಹಸ್ತಕ್ಷೇಪ ಮಾಡಲು ನಾವು ಬಯಸುವುದಿಲ್ಲ. ಮಧ್ಯಂತರ ಜಾಮೀನು ನೀಡಬೇಕೆ ಬೇಡ್ವೆ ಎನ್ನುವುದು ಪರಿಶೀಲಿಸಲಿದ್ದೇವೆ, ಮೇ 9 ಅಥವಾ ಮುಂದಿನ ವಾರ ಮತ್ತೆ ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್ ತಿಳಿಸಿದೆ.

ಸುಪ್ರೀಂಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡುವೆ ಇಡಿ ವಿಶೇಷ‌ ನ್ಯಾಯಲಯ ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಂಗ ಬಂಧನವನ್ನು ಮೇ 20 ವರೆಗೂ ವಿಸ್ತರಿಸಿ ಆದೇಶ ಹೊರಡಿಸಿದೆ.

Previous Post
ಬೋಧಕ, ಬೋಧಕೇತರ ನೇಮಕಾತಿ ರದ್ದು ಆದೇಶಕ್ಕೆ ಸುಪ್ರೀಂ ತಡೆ
Next Post
ಬಿಜೆಪಿ ಸೇರ್ಪಡೆಯಾದ ಕಾಂಗ್ರೇಸ್ ವಕ್ತಾರೆ ರಾಧಿಕಾ ಖೇರಾ

Recent News