G20 ದೇಶಗಳಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದ್ದರೂ ಬಡ ರಾಷ್ಟ್ರವಾಗಿದೆ – ರಘುರಾಮ್ ರಾಜನ್

G20 ದೇಶಗಳಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದ್ದರೂ ಬಡ ರಾಷ್ಟ್ರವಾಗಿದೆ – ರಘುರಾಮ್ ರಾಜನ್

ನವದೆಹಲಿ : G20 ದೇಶಗಳಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದ್ದರೂ ಅದು ಬಡ ರಾಷ್ಟ್ರವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ. ಆನ್ ಜಿಪಿಎಸ್: ಇಂಡಿಯಾಸ್ ಎಂಪ್ಲಾಯ್ಮೆಂಟ್ ಕ್ರೈಸಿಸ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ.

ತಮ್ಮ ಮಾತಿನಲ್ಲಿ ಭಾರತದ ನಿರುದ್ಯೋಗ ಸಮಸ್ಯೆಯನ್ನು ಎತ್ತಿ ತೋರಿಸಿರುವ ರಘುರಾಮ್ ರಾಜನ್, ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಏಪ್ರಿಲ್ 2024 ವರದಿಯಲ್ಲಿ 8.1% ನಿರುದ್ಯೋಗ ಪ್ರಮಾಣ ತೋರಿಸಿದೆ. ಭಾರತದಲ್ಲಿ ದುಡಿಯುವ ಜನಸಂಖ್ಯೆಯ 37.6% ಮಾತ್ರ ಲಾಭದಾಯಕವಾಗಿ ಉದ್ಯೋಗದಲ್ಲಿದ್ದಾರೆ ಹೀಗಾಗಿ G20 ನಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದ್ದರೂ ಸಹ ಇದು ಅತ್ಯಂತ ಬಡ ದೇಶವಾಗಿದೆ ಎಂದು ರಾಜನ್ ಹೇಳಿದರು.

ಪ್ರಸ್ತುತ ಭಾರತವು ಹೆಚ್ಚಿನ ಸಂಖ್ಯೆಯ ಯುವಜನರು ಹೆಚ್ಚಿನ ಪ್ರಮಾಣದಲ್ಲಿ ಕಾರ್ಮಿಕ ಬಲಕ್ಕೆ ಬರುತ್ತಿದ್ದಾರೆ ನಾವು ಅವರನ್ನು ಬಳಸಿಕೊಳ್ಳಲು ಸಾಧ್ಯವಾದರೆ ಭಾರತವು ಹೆಚ್ಚು ವೇಗವಾಗಿ ಬೆಳೆಯುತ್ತದೆ ಎಂದ ಅವರು ಆರ್ಥಿಕ ಬೆಳವಣಿಗೆಯ ಅವಧಿಯಲ್ಲಿ ಚೀನಾ ಮತ್ತು ಕೊರಿಯಾವನ್ನು ಉಲ್ಲೇಖಿಸಿದರು. ಚೀನಾ, ಕೊರಿಯಾ ಮತ್ತು ತೈವಾನ್‌ಗಳು ಭಾರತದಂತೆಯೇ ಅಭಿವೃದ್ಧಿಯ ಹಂತದಲ್ಲಿದ್ದಾಗ 10% ಬೆಳವಣಿಗೆ ದರ ಹೊಂದಿದ್ದವು ಆದರೆ
ಭಾರತ ಪ್ರಸ್ತುತ 6.5% ದರದಲ್ಲಿ ಬೆಳೆಯುತ್ತಿದೆ ಎಂದು ವಿವರಿಸಿದರು.

ನಾವು ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ್ದೇವೆ ಶ್ರೀಮಂತ ದೇಶಗಳಿಗೆ ಹೋಲಿಸಿದರೆ ನಾವು ನಿಜವಾಗಿಯೂ ಉತ್ತಮವಾಗಿದ್ದೇವೆ ಆದ್ದರಿಂದ ನಾವು ಒಟ್ಟಾರೆ GDP ವಿಷಯದಲ್ಲಿ ಇತರೆ ದೇಶಗಳನ್ನು ಹಿಂದಿಕ್ಕುತ್ತಿದ್ದೇವೆ ಇತ್ತಿಚೇಗೆ ನಾವು ಯುಕೆಯನ್ನು ಹಿಂದಿಕ್ಕಿದೆ ಭಾರತವು ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ಮಾಜಿ ಆರ್‌ಬಿಐ ಗವರ್ನರ್ ಹೇಳಿದರು.

ಪ್ರಸ್ತುತ ಜನಸಂಖ್ಯೆಯ ಲಾಭಾಂಶವು ಶಾಶ್ವತವಾಗಿ ಉಳಿಯುವುದಿಲ್ಲ ಮತ್ತು ಜನಸಂಖ್ಯೆಯ ವಯಸ್ಸಾದಂತೆ ಜನರು ಕಡಿಮೆ ಉದ್ಯೋಗಿಗಳಿಗೆ ಸೇರುತ್ತಾರೆ, 2047-2050 ರ ಹೊತ್ತಿಗೆ ದೇಶದಲ್ಲಿ ಯುವಕರ ಪ್ರಮಾಣ ತಗ್ಗಬಹುದು ಆಗ ನಾವು ಶ್ರೀಮಂತರಾಗುತ್ತೇವೆಯೇ? ನಿರುದ್ಯೋಗ ಸಮಸ್ಯೆಗೆ ಸರಕಾರ ಸೂಕ್ತ ಪರಿಹಾರ ನೀಡುತ್ತಿಲ್ಲ ಫೆಬ್ರವರಿ 2024 ರಲ್ಲಿ ಬಿಡುಗಡೆಯಾದ ‘ಭಾರತೀಯ ಆರ್ಥಿಕತೆಯ ಶ್ವೇತಪತ್ರ’ದಲ್ಲಿ ‘ನಿರುದ್ಯೋಗ’ ಎಂಬ ಪದವನ್ನು ಉಲ್ಲೇಖಿಸಿಲ್ಲ. ಭಾರತಕ್ಕೆ ತತ್‌ಕ್ಷಣದ ಸವಾಲು ಎಂದರೆ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸುವುದು, ಉದ್ಯೋಗಿಗಳನ್ನಾಗಿ ಮಾಡಲು ಕೌಶಲ್ಯವನ್ನು ಹೆಚ್ಚಿಸುವುದು ಮತ್ತು ಕಾರ್ಮಿಕ ಬಲದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಪ್ರಮುಖವಾಗಿದೆ ಎಂದರು.

Previous Post
ಹೆಲಿಕಾಪ್ಟರ್‌ ಪತನ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವು
Next Post
ದಕ್ಷಿಣ ಎಲ್ಲೇಡೆ ಮಳೆಯ ಅಬ್ಬರ, ಉತ್ತರ ಭಾರತದಲ್ಲಿ ನೆತ್ತಿ ಸುಡುತ್ತಿರುವ ಬಿಸಿಲು

Recent News