ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣ ಉದ್ಯಮಿ ವಿಶಾಲ್ ಅಗ್ರವಾಲ್ ಪೋಲಿಸ್ ಕಸ್ಟಡಿಗೆ

ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣ ಉದ್ಯಮಿ ವಿಶಾಲ್ ಅಗ್ರವಾಲ್ ಪೋಲಿಸ್ ಕಸ್ಟಡಿಗೆ

ಪುಣೆ : ಪುಣೆಯಲ್ಲಿ ಐಷಾರಾಮಿ ಕಾರು ಪೋರ್ಷೆ ಚಲಾಯಿಸಿ ಇಬ್ಬರನ್ನು ಬಲಿ ಪಡೆದ 17 ವರ್ಷದ ಬಾಲಕನ ತಂದೆ ರಿಯಲ್ ಎಸ್ಟೇಟ್ ಉದ್ಯಮಿ ವಿಶಾಲ್ ಅಗ್ರವಾಲ್ ಅವರನ್ನು ಬಂಧಿಸಿದ್ದ ಪೊಲೀಸರು ಬುಧವಾರ ನ್ಯಾಯಲಯದ ಮುಂದೆ ಹಾಜರುಪಡಿಸಿ ಎರಡು ದಿನಗಳ ಕಸ್ಟಡಿಗೆ ಪಡೆದಿದ್ದಾರೆ. ಅಪ್ರಾಪ್ತ ಬಾಲಕನಿಗೆ ಐಷಾರಾಮಿ ಕಾರ್ ನೀಡಿದ್ದು ಘಟನೆಗೆ ಬಾಲಕನ ತಂದೆಯ ನಿರ್ಲಕ್ಷವೂ ಕಾರಣವಾಗಿದ್ದು ತನಿಖೆ ನಡೆಸಲು ಐದು ದಿನ ಕಸ್ಟಡಿಗೆ ಬೇಕು ಎಂದು ಪೊಲೀಸರು ಮನವಿ ಮಾಡಿದರು. ವಾದ ಆಲಿಸಿದ ಕೋರ್ಟ್ ಎರಡು ದಿನಗಳ ಕಾಲ ವಿಶಾಲ್ ಅಗ್ರವಾಲ್ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿದೆ. ಈ ನಡುವೆ ಬೆಂಗಳೂರಿನಲ್ಲಿ ಖರೀದಿಸಿದ್ದ ಕಾರಿಗೆ ಶಾಶ್ವತ ನೊಂದಣಿ ಮಾಡಿಸಿರಲಿಲ್ಲ 1758 ರೂ. ಶುಲ್ಕ ಬಾಕಿ ಉಳಿಸಿಕೊಂಡು ನಿರ್ಲಕ್ಷ್ಯ ತೋರಿದ್ದ ಹಿನ್ನಲೆ ಕಾರಿನ ನೋಂದಣಿಯನ್ನು ಶಾಶ್ವತವಾಗಿ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ದೇಶದದ್ಯಾಂತ ಈ ಪ್ರಕರಣದ ಬಗ್ಗೆ ವಿರೋಧ ವ್ಯಕ್ತವಾದ ಬಳಿಕ ಎಚ್ಚೆತ್ತಿರುವ ಅಧಿಕಾರಗಳು ಆರೋಪಿ ಬಾಲಕನಿಗೆ 17 ವರ್ಷ ತುಂಬಿದ್ದು ಆತನಿಗೆ 25 ವರ್ಷ ತುಂಬವವರೆಗೆ ಡ್ರೈವಿಂಗ್ ಲೈಸೆನ್ಸ್ ನೀಡಲಾಗುವುದಿಲ್ಲ ಎಂದು ಪುಣೆ ಆರ್‌ಟಿಓ ತಿಳಿಸಿದೆ. ತನಿಖೆ ಸದ್ಯ ಮುಂದುವರಿದಿದ್ದು ಅಪ್ರಾಪ್ತ ವಯಸ್ಕನು ಮದ್ಯಪಾನ ಮಾಡಲು ಹೋಗಿದ್ದ ಬಾರ್‌ನಿಂದ 48,000 ರೂ ಹಣದ ಬಿಲ್ ಅನ್ನು ಪಡೆದುಕೊಳ್ಳಲಾಗಿದೆ.

Previous Post
ಕುಮಾನ್ ಹಿಮಾಲಯದಲ್ಲಿ 90 ಎಕರೆ ಹೋಟೆಲ್, ಟೌನ್‌ಶಿಪ್ ಯೋಜನೆಗೆ ಸುಪ್ರೀಂ ತಡೆ
Next Post
ಮಿತಿ ಮೀರಿದ ಮಾತು, ಕಾಂಗ್ರೇಸ್ ಬಿಜೆಪಿ ಸ್ಟಾರ್ ಪ್ರಚಾರಕರ ವಿರುದ್ಧ ಚು.ಆಯೋಗ ಗರಂ

Recent News