ಲಿಂಗಸಮಾನತೆ: ರಾಧಿಕಾ ಸೆನ್‌ಗೆ ವಿಶ್ವಸಂಸ್ಥೆಯ ವಾರ್ಷಿಕ ಪ್ರಶಸ್ತಿ

ಲಿಂಗಸಮಾನತೆ: ರಾಧಿಕಾ ಸೆನ್ಗೆ ವಿಶ್ವಸಂಸ್ಥೆಯ ವಾರ್ಷಿಕ ಪ್ರಶಸ್ತಿ

ವಿಶ್ವಸಂಸ್ಥೆ: ಸೇನೆಯಲ್ಲಿ ಲಿಂಗ ಸಮಾನತೆಯನ್ನು ಪ್ರತಿಪಾದಿಸುವ ಪ್ರಮುಖರಿಗೆ ವಿಶ್ವಸಂಸ್ಥೆ ನೀಡಲಿರುವ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿಯ 2023ನೇ ಸಾಲಿಗೆ ಭಾರತದ ಮೇಜರ್ ರಾಧಿಕಾ ಸೆನ್ ಅವರು ಆಯ್ಕೆಯಾಗಿದ್ದಾರೆ. ರಾಧಿಕಾ ಸೆನ್ ಅವರು ಪ್ರಸ್ತುತ ಕಾಂಗೊದಲ್ಲಿ ವಿಶ್ವಸಂಸ್ಥೆಯ ಸೇವಾ ಚಟುವಟಕೆಗಳಲ್ಲಿ ತೊಡಗಿದ್ದಾರೆ. ವಿಶ್ವಸಂಸ್ಥೆಯ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್ ಅವರು ಸೆನ್ ಅವರನ್ನು, ‘ನಿಜವಾದ ಮಾದರಿ ನಾಯಕಿ’ ಎಂದು ಬಣ್ಣಿಸಿದ್ದಾರೆ. ವಿಶ್ವಸಂಸ್ಥೆಯಲ್ಲಿ ಮೇ 30ರಂದು ನಡೆಯಲಿರುವ ‘ಶಾಂತಿ ರಕ್ಷಕರ ಅಂತರರಾಷ್ಟ್ರೀಯ ದಿನ’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕಾಂಗೊದಲ್ಲಿ ಅವರು 2023ರ ಮಾರ್ಚ್‌ನಿಂದ ಇಂಡಿಯನ್ ರ‍್ಯಾಪಿಡ್ ಡೆಪ್ಲಾಯ್‌ಮೆಂಟ್ ಬೆಟಾಲಿಯನ್‌ (ಐಎನ್‌ಡಿಆರ್‌ಡಿಬಿ) ಕಮಾಂಡರ್ ಆಗಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ರಾಧಿಕಾ ಸೆನ್ ಅವರು ಹಿಮಾಚಲ ಪ್ರದೇಶದಲ್ಲಿ 1993ರಲ್ಲಿ ಜನಿಸಿದ್ದರು. ಭಾರತೀಯ ಸೇನೆಗೆ ಎಂಟು ವರ್ಷಗಳ ಹಿಂದೆ ಸೇರ್ಪಡೆಯಾಗಿದ್ದರು. ಇವರು ಬಾಂಬೆ ಐಐಟಿಯಲ್ಲಿ ಜೈವಿಕ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ

Previous Post
ಕಾನೂನುಗಳನ್ನೇ ಮುಗಿಸಿಬಿಡಲಿರುವ ಮೋದಿ: ರಾಹುಲ್ ಗಾಂಧಿ
Next Post
ಮೇಲ್ಮನೆ ಸದಸ್ಯರ ಆಯ್ಕೆ; ಸಿಎಂ, ಡಿಸಿಎಂ ಏಕಪಕ್ಷೀಯ ನಿರ್ಧಾರ ಸೂಕ್ತವಲ್ಲ

Recent News