ಮೋದಿ ಕೋಮು ಭಾವನೆ ಕೆರೆಳಿಸುವ ಭಾಷಣ ಮಾಡಿದರೆ ಹೊರತು ಜನರ ಸಮಸ್ಯೆ ಬಗ್ಗೆ ಮಾತನಾಡಲಿಲ್ಲ – ಖರ್ಗೆ

ಮೋದಿ ಕೋಮು ಭಾವನೆ ಕೆರೆಳಿಸುವ ಭಾಷಣ ಮಾಡಿದರೆ ಹೊರತು ಜನರ ಸಮಸ್ಯೆ ಬಗ್ಗೆ ಮಾತನಾಡಲಿಲ್ಲಖರ್ಗೆ

ನವದೆಹಲಿ : ಈ ಬಾರಿಯ ಲೋಕಸಭೆಯ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೋಮು ಭಾವನೆ ಕೆರೆಳಿಸುವ ಭಾಷಣ ಮಾಡಿದ್ದಾರೆ, ತಮ್ಮ ಚುನಾವಣಾ ಭಾಷಣದಲ್ಲಿ 431 ಬಾರಿ ಅವರು ಮಂದಿರ – ಮಸೀದಿ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ, ಕಳೆದ 15 ದಿನಗಳ ಭಾಷಣದಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ 232 ಬಾರಿ ಉಲ್ಲೇಖಿಸಿದ್ದಾರೆ, 573 ಬಾರಿ ಇಂಡಿಯಾ ಮೈತ್ರಿಕೂಟದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಒಂದು ದಿನವೂ ಅವರು ಜನರ ಸಮಸ್ಯೆಗಳ ಬಗ್ಗೆ ಮಾತನಾಡಲಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅರೋಪಿಸಿದ್ದಾರೆ.

ಏಳನೇ ಹಂತದ ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ ಹಿನ್ನಲೆ ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ  ನಡೆಸಿ ಮಾತನಾಡಿದ ಅವರು, ಈ ಚುನಾವಣೆ ಬಹು ವರ್ಷಗಳ ವರೆಗೆ ನೆನಪಿನಲ್ಲಿ ಇರಲಿದೆ, ಸಂವಿಧಾನ ಉಳಿಸಲು ಜನರೇ ಚುನಾವಣೆ ಮಾಡಿದ್ದಾರೆ ಬಿಜೆಪಿಯ ವಿಭಜನಕಾರಿ ಪ್ರಚಾರವನ್ನು ಜನರು ಒಪ್ಪಿಲ್ಲ, ನಾವು ಜನರ ವಿಷಯಗಳ ಕುರಿತು ಪ್ರಚಾರ ಮಾಡಿದ್ದೇವೆ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ತಿಳಿಸುತ್ತೇನೆ, ಇಂಡಿಯಾ ಒಕ್ಕೂಟದ ನಾಯಕರಿಗೂ ಧನ್ಯವಾದ ತಿಳಿಸುತ್ತೇವೆ ಎಂದರು. ಪ್ರತಿಪಕ್ಷಗಳ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ ಅವರು, ಜನರ ಸಮಸ್ಯೆಗಳ ಬಗ್ಗೆ ಒಂದು ದಿನವೂ ಮಾತನಾಡಲಿಲ್ಲ, ಚುನಾವಣೆಗೂ ಮುನ್ನವೇ ನಮ್ಮ ಪಕ್ಷದ ಬ್ಯಾಂಕ್ ಖಾತೆ ಬಂದ್ ಮಾಡಿದರು, ಈ ಹಿಂದೆ ಯಾವ ಸರ್ಕಾರವೂ ಈ ರೀತಿ ಮಾಡಿರಲಿಲ್ಲ, ವಿರೋಧ ಪಕ್ಷಗಳನ್ನು ಹೀಗೆ ನಡೆಸುಕೊಂಡಿರಲಿಲ್ಲ ಪ್ರಧಾನಿ ಮೋದಿ ಚುನಾವಣಾ ಪ್ರಚಾರವನ್ನು ಗಮನಿಸಿದ್ದೀರಿ ಮೋದಿ ತನ್ನನ್ನು ತಾನು ದೇವರು ಎಂದು ಹೇಳಿಕೊಂಡಿದ್ದಾರೆ, ಜೂನ್ 4 ಜನರು ಹೊಸ ಸರಕಾರವನ್ನು ಚುನಾಯಿಸಲಿದ್ದಾರೆ ಇಂಡಿಯಾ ಒಕ್ಕೂಟ ಬಹುಮತದೊಂದಿಗೆ ಸರಕಾರ ರಚಿಸಲಿದೆ, ಎಲ್ಲರನ್ನು ಒಳಗೊಳ್ಳುವ ಸರಕಾರ ಮಾಡಲಿದ್ದೇವೆ. ಪ್ರಧಾನಿ ಯಾರು ಆಗಬೇಕು ಎನ್ನುವುದನ್ನು ಬಳಿಕ ಎಲ್ಲರೂ ಸೇರಿ ನಿರ್ಧಾರ ಮಾಡಲಿದ್ದೇವೆ ಎಂದರು. ಜೂನ್ 1 ರಂದು ಸಾಮಾನ್ಯ ಸಭೆ ನಡೆಸುತ್ತಿದ್ದು ಫಲಿತಾಂಶ ದಿನದ ತಯಾರಿ ಮಾಡಲಿದ್ದೇವೆ ಎಂದು ತಿಳಿಸಿದರು.

ಗಾಂಧಿ ಚಲನಚಿತ್ರದಿಂದ ವಿಶ್ವಕ್ಕೆ ಗಾಂಧಿ ಬಗ್ಗೆ ಗೊತ್ತಾಯ್ತು ಅಂತಾ ಮೋದಿ ಹೇಳಿದ್ದಾರೆ ಮಹಾತ್ಮಾ ಗಾಂಧಿಯವರ ಬಗ್ಗೆ ಮೋದಿ ಹೇಳಿರುವುದನ್ನು ನೋಡಿದರೆ ನನಗೆ ನಗು ಬರುತ್ತೆ, ಮೋದಿಯವರಿಗೆ ಗಾಂಧಿ ಬಗ್ಗೆ ಇರುವ ಅಜ್ಞಾನವೋ ಅಥವಾ ಗಾಂಧಿ ಬಗ್ಗೆ ಓದಿಲ್ಲವೋ ಗೊತ್ತಿಲ್ಲ, ವಿಶ್ವದ ಅನೇಕ ನಾಯಕರು ಗಾಂಧಿಯನ್ನು ಗುಣಗಾನ ಮಾಡಿದ್ದಾರೆ ವಿಶ್ವಸಂಸ್ಥೆಯಲ್ಲೂ ಮಹಾತ್ಮ ಗಾಂಧಿ ಪ್ರತಿಮೆ ಇದೆ. ಗಾಂಧಿ ಬಗ್ಗೆ ಗೊತ್ತಿಲ್ಲದಿದ್ದರೆ ಸಂವಿಧಾನದ ಬಗ್ಗೆಯೂ ಮೋದಿಗೆ ಗೊತ್ತಿಲ್ಲ ಎಂದು ತಿಳಿಯಬೇಕಾಗುತ್ತೆ, ಜೂನ್ 4 ರ ಬಳಿಕ ಮೋದಿಗೆ ವಿಶ್ರಾಂತಿ ಸಿಗಲಿದೆ ಆಗ ಮೋದಿಯವರು ಗಾಂಧಿಯವರ ಆತ್ಮಚರಿತ್ರೆ ಓದಲಿ, ಕನ್ಯಾಕುಮಾರಿಯಲ್ಲಿ ದ್ಯಾನ ಮಾಡುವುದು, ಸಮುದ್ರಕ್ಕೆ ಮುಳುವುದು ಬಿಟ್ಟು ಗಾಂಧಿ ಬಗ್ಗೆ ಓದಲಿ ಎಂದು ವ್ಯಂಗ್ಯ ಮಾಡಿದರು

Previous Post
‘ಗಾಂಧಿ ಸಿನೆಮಾ ಬರುವವರೆಗೆ ಮಹಾತ್ಮಾ ಗಾಂಧಿ ಯಾರೆಂದೇ ಗೊತ್ತಿರಲಿಲ್ಲ’ ಮೋದಿ ಉವಾಚ  
Next Post
ವಾಲ್ಮೀಕಿ ನಿಗಮ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಪ್ಪಿತಸ್ಥರ ರಕ್ಷಣೆ ಪ್ರಶ್ನೆಯೇ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

Recent News