ರಾಜಧಾನಿಯಲ್ಲಿ ತೀವ್ರ ನೀರಿನ ಬಿಕ್ಕಟ್ಟು, ಸುಪ್ರೀಂ ಮೆಟ್ಟಿಲೇರಿದ ಆಪ್ ಸರ್ಕಾರ

ರಾಜಧಾನಿಯಲ್ಲಿ ತೀವ್ರ ನೀರಿನ ಬಿಕ್ಕಟ್ಟು, ಸುಪ್ರೀಂ ಮೆಟ್ಟಿಲೇರಿದ ಆಪ್ ಸರ್ಕಾರ

ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ನೀರಿನ ಬಿಕ್ಕಟ್ಟಿನ ಮಧ್ಯೆ ನೆರೆಯ ಹರಿಯಾಣ, ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶದಿಂದ ಹೆಚ್ಚುವರಿ ನೀರಿನ ಪೂರೈಕೆಯನ್ನು ಪಡೆಯಲು ದೆಹಲಿ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ. ಇದಕ್ಕೂ ಮುನ್ನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರಾಜಧಾನಿಯೊಂದಿಗೆ ಗಡಿ ಹಂಚಿಕೊಂಡಿರುವ ರಾಜ್ಯಗಳು ನೀರಿನ ಪೂರೈಕೆಯನ್ನು ಕಡಿಮೆಗೊಳಿಸಿವೆ ಎಂದು ಹೇಳಿಕೊಂಡಿದ್ದರು.

ಬಿಜೆಪಿಯು ಹರಿಯಾಣ ಮತ್ತು ಯುಪಿಯಲ್ಲಿ ತನ್ನ ಸರ್ಕಾರಗಳೊಂದಿಗೆ ಮಾತನಾಡಿ ದೆಹಲಿಗೆ ಒಂದು ತಿಂಗಳ ಕಾಲ ನೀರು ಕೊಟ್ಟರೆ, ದೆಹಲಿಯ ಜನರು ಬಿಜೆಪಿಯ ಈ ಕ್ರಮವನ್ನು ಬಹಳವಾಗಿ ಮೆಚ್ಚುತ್ತಾರೆ, ಇಂತಹ ಸುಡುವ ಬಿಸಿಯು ಯಾರ ನಿಯಂತ್ರಣದಲ್ಲಿಲ್ಲ. ಆದರೆ, ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಜನರಿಗೆ ಪರಿಹಾರವನ್ನು ನೀಡಬಹುದು ಎಂದರು.

ನೀರಿನ ಬಿಕ್ಕಟ್ಟಿನ ನಡುವೆ, ದೆಹಲಿ ಸರ್ಕಾರವು ಕಟ್ಟುನಿಟ್ಟಾದ ಕ್ರಮಗಳನ್ನು ಪರಿಚಯಿಸಿದೆ. ಇದರಲ್ಲಿ ಯಾರಾದರೂ ನೀರನ್ನು ವ್ಯರ್ಥ ಮಾಡುವುದು ಕಂಡುಬಂದರೆ ಅವರಿಗೆ ₹ 2,000 ದಂಡ ವಿಧಿಸಲಾಗುತ್ತದೆ. ನಿರ್ಮಾಣ ಸ್ಥಳಗಳು ಅಥವಾ ವಾಣಿಜ್ಯ ಸಂಸ್ಥೆಗಳಲ್ಲಿ ಯಾವುದೇ ಅಕ್ರಮ ನೀರಿನ ಸಂಪರ್ಕವನ್ನು ಕಡಿತಗೊಳಿಸಲು ಮುಂದಾಗಿದೆ.

Previous Post
ಜೈಲಿನಿಂದ ಹಿಂದಿರುಗಿದ ನಂತರ ಮಹಿಳೆಯರಿಗೆ ಪ್ರತಿ ತಿಂಗಳಿಗೆ 1 ಸಾವಿರ ರೂ
Next Post
ಇಂದು ಲೋಕಸಭೆಗೆ ಕಡೆಯ ಹಂತದ ಮತದಾನ, ಸಂಜೆ ಚುನಾವಣೊತ್ತರ ಸಮೀಕ್ಷೆ ಬಿಡುಗಡೆ

Recent News