ಇಂದು ಲೋಕಸಭೆಗೆ ಕಡೆಯ ಹಂತದ ಮತದಾನ, ಸಂಜೆ ಚುನಾವಣೊತ್ತರ ಸಮೀಕ್ಷೆ ಬಿಡುಗಡೆ

ಇಂದು ಲೋಕಸಭೆಗೆ ಕಡೆಯ ಹಂತದ ಮತದಾನ, ಸಂಜೆ ಚುನಾವಣೊತ್ತರ ಸಮೀಕ್ಷೆ ಬಿಡುಗಡೆ

ಚರ್ಚೆಯಲ್ಲಿ ಭಾಗಿಯಲ್ಲ ಎಂದ ಕಾಂಗ್ರೇಸ್ | ಸಮೀಕ್ಷೆಗಳ ಬಗ್ಗೆ ಎಚ್ಚರ ಎಂದ ಎಸ್ಪಿ

ನವದೆಹಲಿ : ಏಳು ರಾಜ್ಯಗಳ 56 ಕ್ಷೇತ್ರಕ್ಕೆ ಮತ್ತು ಕೇಂದ್ರಾಡಳಿತ ಪ್ರದೇಶವಾದ ಚಂಡೀಗಡ ಲೋಕಸಭಾ ಕ್ಷೇತ್ರಕ್ಕೆ ಕೊನೆಯ ಹಂತದಲ್ಲಿ ಇಂದು ಚುನಾವಣೆ ನಡೆಯಲಿದೆ. ಸಂಜೆ 6.30ರ ನಂತರ ಮತಗಟ್ಟೆ ಸಮೀಕ್ಷೆ ಹೊರಬೀಳಲಿದೆ. ಚುನಾವಣೆ ನಡೆಯುವ ರಾಜ್ಯಗಳಲ್ಲಿನ ಫಲಿತಾಂಶ, ಬಿಜೆಪಿ , ಕಾಂಗ್ರೆಸ್, ಜೆಡಿಯು, ಟಿಎಂಸಿ, ಎಸ್‌ಪಿ, ಬಿಎಸ್‌ಪಿ, ಆಮ್ ಆದ್ಮಿ ಪಕ್ಷ ಮತ್ತು ಶಿರೋಮಣಿ ಅಕಾಲಿದಳದ ಪಾಲಿಗೆ ನಿರ್ಣಾಯಕವಾಗಲಿದೆ.

ಈ ಹಂತದಲ್ಲಿ ಒಟ್ಟು 904 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಉತ್ತರ ಪ್ರದೇಶ ಮತ್ತು ಪಂಜಾಬ್‌ನಲ್ಲಿ ತಲಾ 13, ಪಶ್ಚಿಮ ಬಂಗಾಳದಲ್ಲಿ 9, ಬಿಹಾರದಲ್ಲಿ 8, ಒಡಿಶಾದಲ್ಲಿ 6, ಹಿಮಾಚಲ ಪ್ರದೇಶದಲ್ಲಿ 4, ಜಾರ್ಖಂಡ್‌ನಲ್ಲಿ 3 ಮತ್ತು ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢದಲ್ಲಿ ಮತದಾನ ನಡೆಯಲಿದೆ. ಒಡಿಶಾದ ವಿಧಾನಸಭಾ ಕ್ಷೇತ್ರಗಳಿಗೂ ಮತದಾನ ನಡೆಯಲಿದೆ.

ಕಡೆಹಂತದ ಲೋಕಸಭೆ ಚುನಾವಣೆಯಲ್ಲಿ 5.24 ಕೋಟಿ ಪುರುಷ, 4.82 ಮಹಿಳೆಯರು ಸೇರಿ 10.06 ಕೋಟಿ ಮತದಾರರು ಮತದಾನಕ್ಕೆ ಅರ್ಹವಾಗಿದ್ದು 10.9 ಲಕ್ಷ ಚುನಾವಣಾ ಕರ್ತವ್ಯಕ್ಕೆ ಸಿಬ್ಬಂದಿ ನಿಯೋಜಿಸಿ 1.09 ಲಕ್ಷ ಮತದಾನ ಕೇಂದ್ರಗಳ ನಿರ್ಮಾಣ ಮಾಡಿದೆ. ಚುನಾವಣಾ ಕರ್ತವ್ಯಕ್ಕೆ 13 ರೈಲ್ವೆ ಮತ್ತು 8 ಹೆಲಿಕಾಪ್ಟರ್ ಗಳು, 172 ವೀಕ್ಷಕರು, 2708 ಫ್ಲೈಯಿಂಗ್‌ ಸ್ಲೈಡ್ ನೇಮಕ ನಿಯೋಜನೆ ಮಾಡಿದೆ.

ವಾರಣಾಸಿಯಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವ ಪ್ರಮುಖ ಅಭ್ಯರ್ಥಿಗಳಲ್ಲಿ ನರೇಂದ್ರ ಮೋದಿ ಒಬ್ಬರು. ಅವರ ವಿರುದ್ಧ ಕಾಂಗ್ರೆಸ್‌ನ ಅಜಯ್‌ ರೈ ಕಣಕ್ಕಿಳಿದಿದ್ದಾರೆ. ಡೈಮಂಡ್ ಹಾರ್ಬರ್‌ನಿಂದ ಅಭಿಷೇಕ್ ಬ್ಯಾನರ್ಜಿ (ಟಿಎಂಸಿ), ಹಮೀರ್‌ಪುರದಲ್ಲಿ ಅನುರಾಗ್ ಠಾಕೂರ್ (ಬಿಜೆಪಿ), ಗೋರಖ್‌ಪುರದಲ್ಲಿ ರವಿ ಕಿಶನ್ (ಬಿಜೆಪಿ), ಪಾಟಲಿಪುತ್ರದಲ್ಲಿ ಮಿಸಾ ಭಾರತಿ (ಆರ್‌ಜೆಡಿ) ಮತ್ತು ಮಂಡಿಯಲ್ಲಿ ಕಂಗನಾ ರನೌತ್ (ಬಿಜೆಪಿ) ಇತರ ಪ್ರಮುಖ ಅಭ್ಯರ್ಥಿಗಳು.

ಬಾಕ್ಸ್

ಚುನಾವಣೊತ್ತರ ಸಮೀಕ್ಷೆ ನಂಬಬೇಡಿ

ಬಿಜೆಪಿಯ ಸುಳ್ಳು ಮತ್ತು ಅದರ ನಿರ್ಗಮನ ಸಮೀಕ್ಷೆಗಳ ವಿರುದ್ಧ ಜಾಗರೂಕರಾಗಿ ಇರುಬೇಕು” ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಶುಕ್ರವಾರ ತಮ್ಮ ಪಕ್ಷದ ಕಾರ್ಯಕರ್ತರು, ಅಭ್ಯರ್ಥಿಗಳು ಮತ್ತು ಪದಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಎಕ್ಸ್‌ ಪೋಸ್ಟ್‌ನಲ್ಲಿ ಮನವಿ ಮಾಡಿರುವ ಅವರು, ಇಂದು ನಾನು ನಿಮಗೆ ಅತ್ಯಂತ ಪ್ರಮುಖವಾದ ಮನವಿಯನ್ನು ಮಾಡುತ್ತಿದ್ದೇನೆ. ನಾಳೆ ಮತದಾನದ ಸಮಯದಲ್ಲಿ ಮತ್ತು ಮತದಾನದ ನಂತರದ ದಿನಗಳಲ್ಲಿ ಮತ ಎಣಿಕೆಯವರೆಗೂ ನೀವೆಲ್ಲರೂ ಸಂಪೂರ್ಣ ಜಾಗರೂಕರಾಗಿರಬೇಕು. ಮತಗಳು ಮುಗಿದಿವೆ ಮತ್ತು ನೀವು ವಿಜಯದ ಪ್ರಮಾಣಪತ್ರವನ್ನು ಸ್ವೀಕರಿಸುತ್ತೀರಿ, ಬಿಜೆಪಿ ಸುಳ್ಳಗಳಿಂದ ದಾರಿತಪ್ಪಬೇಡಿ ಎಂದು ಹೇಳಿದ್ದಾರೆ.

ಚುನಾವಣೊತ್ತರ ಸಮೀಕ್ಷೆ ಚರ್ಚೆಯಲ್ಲಿ ಭಾಗಿಯಾಗಲ್ಲ – ಕಾಂಗ್ರೇಸ್

ಕಡೆಯ ಹಂತದ ಮತದಾನ ಸಂಜೆಗೆ ಅಂತ್ಯವಾಗುತ್ತಿದ್ದು ಬಳಿಕ ಪ್ರಕಟವಾಗುವ ಸಮೀಕ್ಷೆಗಳ ಚರ್ಚೆಯಲ್ಲಿ ಕಾಂಗ್ರೇಸ್ ಭಾಗಿಯಾಗುವುದಿಲ್ಲ ಎಂದು ಕಾಂಗ್ರೇಸ್ ನಾಯಕ ಪವನ್ ಖೇರಾ ತಿಳಿಸಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿದರುವ ಅವರು ಜನರು ಮತದಾನ ಮಾಡಿದ್ದಾರೆ ಫಲಿತಾಂಶ ಭದ್ರವಾಗಿದೆ ಈ ನಡುವೆ ಟಿಆರ್‌ಪಿಗಾಗಿ ಮಾಡುವ ಚರ್ಚೆಗಳಲ್ಲಿ ನಾವು ಭಾಗಿಯಾಗುವುದಿಲ್ಲ, ಫಲಿತಾಂಶ ದಿನದಂದು ಮುಕ್ತವಾಗಿ ಚರ್ಚೆಯಾಗುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

Previous Post
ರಾಜಧಾನಿಯಲ್ಲಿ ತೀವ್ರ ನೀರಿನ ಬಿಕ್ಕಟ್ಟು, ಸುಪ್ರೀಂ ಮೆಟ್ಟಿಲೇರಿದ ಆಪ್ ಸರ್ಕಾರ
Next Post
ಅಪರಾಧ ಪ್ರಕರಣದಲ್ಲಿ ದೋಷಿಯಾದ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಟ್ರಂಪ್!

Recent News