ಅಪರಾಧ ಪ್ರಕರಣದಲ್ಲಿ ದೋಷಿಯಾದ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಟ್ರಂಪ್!

ಅಪರಾಧ ಪ್ರಕರಣದಲ್ಲಿ ದೋಷಿಯಾದ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಟ್ರಂಪ್!

ವಾಷಿಂಗ್ಟನ್:‌ ವ್ಯವಹಾರಗಳ ದಾಖಲೆ ಪತ್ರಗಳನ್ನು ಪೋರ್ಜರಿ ಮಾಡಿದ ಪ್ರಕರಣದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದೋಷಿ ಎಂದು ನ್ಯೂಯಾರ್ಕ್‌ ಜ್ಯೂರಿ ಆದೇಶ ನೀಡುವ ಮೂಲಕ ಅಪರಾಧ ಪ್ರಕರಣದಲ್ಲಿ ದೋಷಿ ಎನ್ನಿಸಿಕೊಂಡ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಎಂಬ ಅಪಕೀರ್ತಿಗೆ ಒಳಗಾಗಿದ್ದಾರೆ.

ವ್ಯವಹಾರಗಳ ಸುಳ್ಳು ದಾಖಲೆ ಪತ್ರ ಸೃಷ್ಟಿಸಿರುವ ಪ್ರಕರಣದಲ್ಲಿ ಟ್ರಂಪ್‌ 34 ಕೌಂಟ್ಸ್‌ ಗಳಲ್ಲಿ ದೋಷಿ ಎಂದು ಜ್ಯೂರಿ ಪತ್ತೆ ಹಚ್ಚಿದೆ. ಇದರೊಂದಿಗೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿ ಮತ್ತೆ ಶ್ವೇತ ಭವನ ಪ್ರವೇಶಿಸಬೇಕೆಂಬ ಕನಸು ಭಗ್ನಗೊಂಡಂತಾಗಿದೆ.

ಟ್ರಂಪ್‌ ದೋಷಿ ಎಂದು ಸಾಬೀತಾದ ನಿಟ್ಟಿನಲ್ಲಿ ಪ್ರತಿ ಅಪರಾಧ ಪ್ರಕರಣಗಳಲ್ಲಿ ನಾಲ್ಕು ವರ್ಷಗಳ ಜೈಲುಶಿಕ್ಷೆ ಎದುರಿಸಬೇಕಾದ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. ಆದರೆ ಶಿಕ್ಷೆಯಿಂದ ವಿನಾಯ್ತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ನಾನು ತುಂಬಾ ಅಮಾಯಕ ವ್ಯಕ್ತಿ ಎಂದು ಟ್ರಂಪ್‌ ಸುದ್ದಿಗಾರರ ಜತೆ ಮಾತನಾಡುತ್ತ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಿಜವಾದ ತೀರ್ಪು ಮತದಾರರಿಂದ ಹೊರಬೀಳಲಿದೆ ಎಂದರು.

ಪ್ರಕರಣದ ವಿಚಾರಣೆಯ ಮೂಲಕ ಯಾರೊಬ್ಬರು ಕಾನೂನಿಗಿಂತ ಮೇಲಲ್ಲ ಎಂಬುದು ಸಾಬೀತಾಗಿದೆ ಎಂದು ಜೋ ಬೈಡೆನ್‌ ಪ್ರಚಾರ ಪ್ರಕಟನೆಯಲ್ಲಿ ತಿಳಿಸಿದ್ದು, ಟ್ರಂಪ್‌ ಬೆದರಿಕೆ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಹೇಳಿದೆ.

2020ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡೆನ್‌ ಗೆಲುವು ಸಾಧಿಸಿದ ಸಂದರ್ಭದಲ್ಲಿ ಗಲಭೆ ನಡೆಸಲು ಕುಮ್ಮಕ್ಕು ನೀಡಿದ ಆರೋಪ ಟ್ರಂಪ್‌ ಮೇಲಿದೆ. ಅಲ್ಲದೇ ಮಾಜಿ ಅಧ್ಯಕ್ಷ ಟ್ರಂಪ್‌ ಶ್ವೇತ ಭವನ ಬಿಡುವ ಸಂದರ್ಭದಲ್ಲಿ ರಹಸ್ಯ ದಾಖಲೆಗಳನ್ನು ಕೊಂಡೊಯ್ದಿರುವ ಆರೋಪವನ್ನು ಎದುರಿಸುತ್ತಿದ್ದಾರೆ.

Previous Post
ಇಂದು ಲೋಕಸಭೆಗೆ ಕಡೆಯ ಹಂತದ ಮತದಾನ, ಸಂಜೆ ಚುನಾವಣೊತ್ತರ ಸಮೀಕ್ಷೆ ಬಿಡುಗಡೆ
Next Post
ಜಮ್ಮು: ಕಂದಕಕ್ಕೆ ಉರುಳಿ ಬಿದ್ದ ಬಸ್: 21 ಮಂದಿ ಸಾವು, 60ಕ್ಕೂ ಹೆಚ್ಚು ಜನರಿಗೆ ಗಾಯ

Recent News