ಮತದಾನೋತ್ತರ ಸಮೀಕ್ಷೆಗಳಲ್ಲಿ 350ಕ್ಕಿಂತ ಹೆಚ್ಚು ಸ್ಥಾನ ಪಡೆಯಲಿರುವ ಎನ್‌ಡಿಎ; ಇಂಡಿಯಾ ಮೈತ್ರಿಕೂಟಕ್ಕೆ 125-150 ಸ್ಥಾನ

ಮತದಾನೋತ್ತರ ಸಮೀಕ್ಷೆಗಳಲ್ಲಿ 350ಕ್ಕಿಂತ ಹೆಚ್ಚು ಸ್ಥಾನ ಪಡೆಯಲಿರುವ ಎನ್‌ಡಿಎ; ಇಂಡಿಯಾ ಮೈತ್ರಿಕೂಟಕ್ಕೆ 125-150 ಸ್ಥಾನ

ಹೊಸದಿಲ್ಲಿ: ಎನ್‌ಡಿಎ ಮೈತ್ರಿಕೂಟ 350ಕ್ಕಿಮತ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು 4 ಎಕ್ಸಿಟ್ ಪೋಲ್ ಗಳು ಭವಿಷ್ಯ ನುಡಿದಿದೆ. ಇಂಡಿಯಾ ನ್ಯೂಸ್-ಡಿ ಡೈನಾಮಿಕ್ಸ್ ಮತದಾನೋತ್ತರ ಸಮೀಕ್ಷೆಯ ಪ್ರಕಾರ, ಎನ್‌ಡಿಎ ಮೈತ್ರಿಕೂಟ 371 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದರೆ, ಇಂಡಿಯಾ ಮೈತ್ರಿಕೂಟ 125 ಸ್ಥಾನಗಳಿಗಷ್ಟೆ ತೃಪ್ತಿ ಪಟ್ಟುಕೊಳ್ಳಲಿದೆ.ಇತರರು 47 ಸ್ಥಾನಗಳಲ್ಲಿ ಗೆಲುವು ಸಾಧಿಸಲಿವೆ. ಜನ್ ಕಿ ಬಾತ್ ಸಮೀಕ್ಷೆಯ ಪ್ರಕಾರ, ಎನ್‌ಡಿಎ ಮೈತ್ರಿಕೂಟ 362-392 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಇಂಡಿಯಾ ಮೈತ್ರಿಕೂಟ 141-161 ಸ್ಥಾನ ಗಳಿಸಲಿದೆ. ಇತರರು 10-20 ಸ್ಥಾನ ಗಳಿಸಲಿದ್ದಾರೆ.ರಿಪಬ್ಲಿಕ್ ಭಾರತ್-ಮ್ಯಾಟ್ರಿಝ್ ಸಮೀಕ್ಷೆಯ ಪ್ರಕಾರ, ಎನ್‌ಡಿಎ 353-368 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದ್ದರೆ, ಇಂಡಿಯಾ ಮೈತ್ರಿಕೂಟ 118-133 ಸ್ಥಾನಕ್ಕಷ್ಟೆ ಸೀಮಿತವಾಗಲಿದೆ. ಇತರರು 43-48 ಸ್ಥಾನಗಳಲ್ಲಿ ಜಯ ಸಾಧಿಸಲಿದ್ದಾರೆ.ರಿಪಬ್ಲಿಕ್ ಟಿವಿ-ಪಿ ಮಾರ್ಕ್ ಸಮೀಕ್ಷೆಯ ಪ್ರಕಾರ, ಎನ್‌ಡಿಎ 359 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಇಂಡಿಯಾ ಮೈತ್ರಿಕೂಟ ಕೇವಲ 154 ಸ್ಥಾನಗಳಲ್ಲಿ ಗೆಲುವು ಪಡೆಯಲಿದೆ. ಇತರರು 30 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ. ಈ ನಾಲ್ಕು ಸಮೀಕ್ಷೆಗಳ ಸರಾಸರಿ ಆಧಾರದಲ್ಲಿ ಎನ್‌ಡಿಎ 350ಕ್ಕಿಂತ ಹೆಚ್ಚು ಹಾಗೂ ಇಂಡಿಯಾ ಮೈತ್ರಿಕೂಟ 125-150 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ʼಪೋಲ್ ಆಫ್ 4 ಎಕ್ಸಿಟ್ ಪೋಲ್ಸ್ʼ ಅಂದಾಜಿಸಿದೆ.

Previous Post
ಕೇಜ್ರಿವಾಲ್‌ಗೆ ಆಂಬುಲೆನ್ಸ್ ಕಳುಹಿಸಿ ಕಿಚಾಯಿಸಿದ ಬಿಜೆಪಿ ನಾಯಕ
Next Post
ನಾವು ಒಗ್ಗಟ್ಟಾಗಿದ್ದೇವೆ; ಒಗ್ಗಟ್ಟಾಗಿಯೇ ಇರುತ್ತೇವೆ: ‘ಇಂಡಿಯಾ’ ಸಭೆ ಬಳಿಕ ಖರ್ಗೆ

Recent News