ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿಯ ತೇಜಸ್ವಿ ಸೂರ್ಯಗೆ ಜಯ

ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿಯ ತೇಜಸ್ವಿ ಸೂರ್ಯಗೆ ಜಯ

ಈ ಬಾರಿ ಅತ್ಯಂತ ರೋಚಕತೆ ಹೆಚ್ಚಿಸಿರುವ ಕ್ಷೇತ್ರಗಳಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಸಹ ಒಂದು. ಈ ಕ್ಷೇತ್ರದಲ್ಲಿ ಯುವಕರ ನಡುವಿನ ಫೈಟ್‌ ಎಲ್ಲರ ಚಿತ್ತ ಕದ್ದಿತ್ತು. ಅಲ್ಲದೆ ಎರಡು ರಾಜಕೀಯ ಕುಟುಂಬಗಳ ನಡುವಿನ ಹೊರಾಟದಲ್ಲಿ, ಮತದಾರ ಪ್ರಭು ತೇಜಸ್ವಿ ಸೂರ್ಯ ಅವರಿಗೆ ಜೈ ಎಂದಿದ್ದಾರೆ. ಈ ಕ್ಷೇತ್ರದಲ್ಲಿ ಏಪ್ರಿಲ್‌ 26 ರಂದು ಮತದಾನವಾಗಿದೆ. ಈ ಕ್ಷೇತ್ರವನ್ನು ಬಿಜೆಪಿ ಸತತವಾಗಿ ಗೆಲ್ಲುತ್ತಲೇ ಬರುತ್ತಿದೆ. ಸದ್ಯ ಹಾಲಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ಬಿಜೆಪಿ ಮತ್ತೊಮ್ಮೆ ಲೋಕಸಭೆ ಪ್ರವೇಶಿಸಿದ್ದಾರೆ. ಇನ್ನು ವಿಧಾಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ಸೌಮ್ಯಾ ರೆಡ್ಡಿ ಅವರಿಗೆ ಮತ್ತೊಮ್ಮೆ ನಿರಾಸೆ ಆಗಿದೆ. ಇನ್ನು ತೇಜಸ್ವಿ ಸೂರ್ಯ ಅವರ ಗೆಲುವಿನ ಬಗ್ಗೆ ಅಧಿಕೃತ ಘೋಷಣೆ ಒಂದೆ ಬಾಕಿ ಇದೆ.

ಈ ಕ್ಷೇತ್ರದಲ್ಲಿ 1989ರಲ್ಲಿ ಕೊನೆಯ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್‌.ಗುಂಡು ರಾವ್‌ ಜಯ ದಾಖಲಿಸಿದ್ದರು. ಇದಾದ ಬಳಿಕ ನಡೆದ ಎಂಟು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲು ಕಂಡಿದೆ. ಇದೇ ಕ್ಷೇತ್ರದಿಂದ ಅನಂತ್‌ ಕುಮಾರ್ ಆರು ಬಾರಿ ಲೋಕಸಭೆ ಪ್ರವೇಶಿಸಿದ್ದಾರೆ. – ಬೆಂಗಳೂರಿನ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರಿಗೆ 71716 – ಬೆಂಗಳೂರು ಬಿಜೆಪಿ 42,683, ಕಾಂಗ್ರೆಸ್‌ 20,542 ಮತಗಳು. ತೇಜಸ್ವಿ ಸೂರ್ಯ ಅವರಿಗೆ 22,141 ಮುನ್ನಡೆ.

– ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ -ಅಂಚೆ ಮತದಾನ ಏಣಿಕೆ ಆರಂಭ ಎರಡನೇ ಬಾರಿ ಲೋಕಸಭಾ ಪ್ರವೇಶಿಸುವ ಕನಸಿನಲ್ಲಿ ತೇಜಸ್ವಿ ಸೂರ್ಯ.

Previous Post
ಚಂದ್ರಬಾಬು ನಾಯ್ಡುಗೆ ಮತ್ತೆ ಒಲಿಯಲಿದೆ ಸಿಎಂ ಪಟ್ಟ; ಜೂನ್‌ 9ರಂದು ಪ್ರಮಾಣ ವಚನ ಸ್ವೀಕಾರ ಸಾಧ್ಯತೆ
Next Post
ಉತ್ತರ ಪ್ರದೇಶದಲ್ಲಿ ಇತಿಹಾಸ ಬರೆದ ಭೀಮ್ ಆರ್ಮಿ ಸಂಸ್ಥಾಪಕ ಚಂದ್ರಶೇಖರ್ ಆಜಾದ್

Recent News