ಒಡಿಶಾ ಸಿಎಂ ಸ್ಥಾನಕ್ಕೆ ನವೀನ್ ಪಟ್ನಾಯಕ್ ರಾಜೀನಾಮೆ

ಒಡಿಶಾ ಸಿಎಂ ಸ್ಥಾನಕ್ಕೆ ನವೀನ್ ಪಟ್ನಾಯಕ್ ರಾಜೀನಾಮೆ

ಭುವನೇಶ್ವರ, ಜೂ. 5: ಒಡಿಶಾದಲ್ಲಿ ತಮ್ಮ 24 ವರ್ಷಗಳ ಆಡಳಿತದ ಅಂತ್ಯ ಹಾಡಿರುವ ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್, ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಸೋಲಿನ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ  ಬುಧವಾರ ರಾಜೀನಾಮೆ ನೀಡಿದ್ದಾರೆ. ಅವರು ರಾಜಭವನದಲ್ಲಿ ರಾಜ್ಯಪಾಲ ರಘುಬರ್ ದಾಸ್ ಅವರಿಗೆ ರಾಜೀನಾಮೆ ಪತ್ರವನ್ನು ನೀಡಿದರು.

ಪಟ್ನಾಯಕ್ ಅವರ ನಿವಾಸದಲ್ಲಿ ಹಲವಾರು ಬಿಜೆಡಿ ನಾಯಕರು ಜಮಾಯಿಸಿದ್ದರೂ, ಅವರು ರಾಜೀನಾಮೆ ಸಲ್ಲಿಸಲು ರಾಜ್ಯಪಾಲರ ಮನೆಗೆ ಏಕಾಂಗಿಯಾಗಿ ಬಂದರು. ನಿರಂತರವಾಗಿ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಿದ ಒಡಿಶಾದ ನಾಲ್ಕೂವರೆ ಕೋಟಿ ಜನರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನಾನು ಗೌರವಾನ್ವಿತ ರಾಜ್ಯಪಾಲರನ್ನು ಭೇಟಿಯಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ನನ್ನ ರಾಜೀನಾಮೆಯನ್ನು ಸಲ್ಲಿಸಿದೆ. ಒಡಿಶಾದ ಜನರ ಸೇವೆಗೆ ನಾನು ದೃಢವಾಗಿ ಬದ್ಧನಾಗಿರುತ್ತೇನೆ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಒಡಿಶಾದ 147 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿಯು 78 ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರಕ್ಕೆ ಬಂದರೆ, ಬಿಜೆಡಿ ಕೇವಲ 51 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ 14 ಕ್ಷೇತ್ರಗಳನ್ನು ಗೆದ್ದು, ಸಿಪಿಐ (ಎಂ) ಒಂದು ಕ್ಷೇತ್ರವನ್ನು ಗೆದ್ದುಕೊಂಡಿದೆ. ಆದರೆ, ಮೂವರು ಸ್ವತಂತ್ರ ಅಭ್ಯರ್ಥಿಗಳು ಸಹ ವಿಜಯಶಾಲಿಯಾಗಿದ್ದಾರೆ. ನವೀನ್ ಪಟ್ನಾಯಕ್ ಅವರು ಮಾರ್ಚ್ 5, 2000ರಂದು ಒಡಿಶಾದ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು. 2024ರವರೆಗೆ ಮುಖ್ಯಮಂತ್ರಿಯಾಗಿದ್ದರು.

Previous Post
ಬಿಜೆಪಿಯೊಂದಿಗೆ ಮೈತ್ರಿ ಮುಂದುವರಿಸುತ್ತೇವೆ: ಜೆಡಿಯು ಸ್ಪಷ್ಟನೆ
Next Post
ನಿನ್ನ ತಂಗಿಯಾಗಿರಲು ಹೆಮ್ಮೆ: ರಾಹುಲ್‌ ಗಾಂಧಿ ಕುರಿತು ಪ್ರಿಯಾಂಕಾ ಗಾಂಧಿ ಪೋಸ್ಟ್

Recent News