ಪ್ರಧಾನಿ ಮೋದಿ 2 ದಿನ ಫ್ರಾನ್ಸ್ ಪ್ರವಾಸ
ಪ್ರಧಾನಿ ಮೋದಿ 2 ದಿನ ಫ್ರಾನ್ಸ್ ಪ್ರವಾಸ ಮಾಡಲಿದ್ದಾರೆ. ಜುಲೈ 14 ರಂದು ನಡೆಯಲಿರುವ ವಾರ್ಷಿಕ ಬಾಸ್ಟಿಲ್ ಡೇ ಪರೇಡ್ನಲ್ಲಿ ಪ್ರಧಾನಿ ಮೋದಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿದಿವೆ.
ಫ್ರಾನ್ಸ್ ಪ್ರವಾಸದ ಬಗ್ಗೆ ಮೋದಿ ಇಂದು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
“ಪ್ಯಾರಿಸ್ಗೆ ತೆರಳುತ್ತಿದ್ದೇನೆ, ಅಲ್ಲಿ ನಾನು ಬಾಸ್ಟಿಲ್ ಡೇ ಆಚರಣೆಯಲ್ಲಿ ಪಾಲ್ಗೊಳ್ಳುತ್ತೇನೆ. ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮತ್ತು ಇತರ ಫ್ರೆಂಚ್ ಗಣ್ಯರೊಂದಿಗೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ಮಾಡಲಿದ್ದೇವೆ. ಇದರ ಜತೆಗೆ ಫ್ರಾನ್ಸ್ನಲ್ಲಿರುವ ಭಾರತೀಯರೊಂದಿಗೆ ಸಂವಾದ ಮತ್ತು ಅಲ್ಲಿನ ಸಿಇಒಗಳೊಂದಿಗೆ ಮಾತುಕತೆ ನಡೆಸಲಿದ್ದೇನೆ” ಎಂದು ಬರೆದುಕೊಂಡಿರುವುದು ವಿಶೇಷ.