ಆಡಳಿತ ರಾಜ್ಯಗಳಲ್ಲಿ ನಿರೀಕ್ಷಿತ ಗುರಿ ತಲುಪದ ಕಾಂಗ್ರೇಸ್ CWC ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದ ಎಐಸಿಸಿ ಅಧ್ಯಕ್ಷ ಖರ್ಗೆ

ಆಡಳಿತ ರಾಜ್ಯಗಳಲ್ಲಿ ನಿರೀಕ್ಷಿತ ಗುರಿ ತಲುಪದ ಕಾಂಗ್ರೇಸ್ CWC ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದ ಎಐಸಿಸಿ ಅಧ್ಯಕ್ಷ ಖರ್ಗೆ

ನವದೆಹಲಿ : ಕಾಂಗ್ರೇಸ್ ಆಡಳಿತ ರಾಜ್ಯಗಳಲ್ಲಿ ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದ ಹಿನ್ನಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ನಡೆದ ಕಾಂಗ್ರೇಸ್ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಇನ್ನಷ್ಟು ಹೆಚ್ಚು ಸ್ಥಾನಗಳ ಗೆಲ್ಲಬಹುದಿತ್ತು ಎಂದು ಹೇಳಿದ್ದಾರೆ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ನಮ್ಮ ಒಕ್ಕೂಟ ಪಕ್ಷಗಳಿಗೆ ಮೊದಲು ಅಭಿನಂದನೆ ಸಲ್ಲಿಸಬೇಕು, ಒಕ್ಕೂಟ ಪಕ್ಷಗಳು ಅವರವರ ಪಾತ್ರ ಸೂಕ್ತವಾಗಿ ನಿಭಾಯಿಸಿವೆ ಪ್ರತಿ ರಾಜ್ಯದಲ್ಲೂ ಅಂಗ ಪಕ್ಷಗಳು ಒಬ್ಬರಿಗೊಬ್ಬರು ಸಹಕಾರಿಯಾಗಿ ನಿಂತಿದ್ದಾರೆ ಕಾಂಗ್ರೆಸ್ ಪಕ್ಷದ ಶಿಸ್ತು ಹಾಗೂ ಒಗ್ಗಟ್ಟು ಎಂದಿಗೂ ಕಡಿಮೆ ಆಗಬಾರದು ಜನ ನಮ್ಮ ಮೇಲೆ ಅಭೂತಪೂರ್ವ ನಿರೀಕ್ಷೆ ಇಟ್ಟುಕೊಂಡು ಗೆಲಿಸಿದ್ದಾರೆ ಅದರ ಮೇಲೆಯೇ ಮುಂದೆ ಪಕ್ಷವನ್ನು ಗಟ್ಟಿಗೊಳಿಸಬೇಕು

ಕಾಂಗ್ರೇಸ್ ಆಡಳಿತ ರಾಜ್ಯಗಳಲ್ಲಿ ನಾವು ನಿರೀಕ್ಷಿತ ಗುರಿಯನ್ನು ತಲುಪಿಲ್ಲ, ನಾವು ಆ ರಾಜ್ಯಗಳಿಂದ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದೇವು, ಹೀಗಾಗಿ ರಾಜ್ಯವಾರು ಫಲಿತಾಂಶ ಪರಾಮರ್ಶೆ ಮಾಡುವುದು ಸೂಕ್ತ. ಎಲ್ಲಿ ಹಿನ್ನಡೆಯಾಗಿದೆ ಆಯಾಯ ರಾಜ್ಯಗಳ ನಾಯಕರ ಜೊತೆಗೆ ಪ್ರತ್ಯೇಕ ಸಭೆ ನಡೆಸಲಾಗುವುದು, ತಳ ಮಟ್ಟದಲ್ಲಿ ಏನಾಗಿದೆ ಎನ್ನುವ ಬಗ್ಗೆ ಗಮನ ಹರಿಸಬೇಕು ಸೋತ ರಾಜ್ಯಗಳಲ್ಲಿ ತುರ್ತು ಮದ್ದು ಹುಡುಕುವ ಅಗತ್ಯವಿದೆ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Previous Post
ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಹುಲ್ ಗಾಂಧಿ ಹೆಸರು ಕಾಂಗ್ರೇಸ್ ಕಾರ್ಯಕಾರಣಿಯಲ್ಲಿ ಸರ್ವಾನುಮತದಿಂದ ಅಂಗೀಕಾರ
Next Post
ನರೇಂದ್ರ ಮೋದಿ ಪ್ರಮಾಣ ವಚನ ಕಾರ್ಯಕ್ರಮ ರಾಷ್ಟ್ರಪತಿ ಭವನಕ್ಕೆ ಹೆಚ್ಚಿನ ಭದ್ರತೆ

Recent News