ರಾಯ್ ಬರೇಲಿ ಉಳಿಸಿಕೊಳ್ತಾರ ರಾಹುಲ್ ಗಾಂಧಿ

ರಾಯ್ ಬರೇಲಿ ಉಳಿಸಿಕೊಳ್ತಾರ ರಾಹುಲ್ ಗಾಂಧಿ

ನವದೆಹಲಿ : 2024ರ ಲೋಕಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಂದು ವರದಿಯಾಗಿದೆ. ಅವರು ವಯನಾಡ್ ಕ್ಷೇತ್ರವನ್ನು ತ್ಯಜಿಸಬಹುದು ಎನ್ನಲಾಗುತ್ತಿದ್ದು, ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಜೂನ್ 8ರಂದು ನಡೆದ ಸಭೆಯಲ್ಲಿ 18 ನೇ ಲೋಕಸಭೆಯಲ್ಲಿ ರಾಹುಲ್ ಗಾಂಧಿಯನ್ನು ವಿರೋಧ ಪಕ್ಷದ ನಾಯಕರಾಗಿ (ಎಲ್‌ಒಪಿ) ನೇಮಿಸುವ ನಿರ್ಣಯವನ್ನು ಅಂಗೀಕರಿಸಿದೆ.

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನವನ್ನು ವಹಿಸುವಂತೆ ರಾಹುಲ್ ಗಾಂಧಿ ಅವರಿಗೆ ಸಿಡಬ್ಲ್ಯುಸಿ ಸರ್ವಾನುಮತದಿಂದ ಮನವಿ ಮಾಡಿದೆ. ಸಂಸತ್ತಿನ ಒಳಗೆ ಈ ಅಭಿಯಾನವನ್ನು ಮುನ್ನಡೆಸಲು ಅವರೇ ಉತ್ತಮ ವ್ಯಕ್ತಿ ಎಂದು ಸಭೆಯ ನಂತರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆಸಿ ವೇಣುಗೋಪಾಲ್ ಹೇಳಿದರು. ಪಕ್ಷದ ಮಾಜಿ ಮುಖ್ಯಸ್ಥರು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ರಾಯ್‌ಬರೇಲಿ ಮತ್ತು ಕೇರಳದ ವಯನಾಡ್ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ. ಕಾಂಗ್ರೆಸ್ ಪುನರುಜ್ಜೀವನ ಪ್ರಾರಂಭವಾಗಿದೆ ಮತ್ತು ಸಿಡಬ್ಲ್ಯೂಸಿಯಲ್ಲಿನ ವಾತಾವರಣವು ನಾಲ್ಕು ತಿಂಗಳ ಹಿಂದೆ ಇದ್ದದ್ದಕ್ಕಿಂತ ಈಗ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ವೇಣುಗೋಪಾಲ್ ಹೇಳಿದರು.

ಭಾರತದ ಜನರು ಮಾತನಾಡಿದ್ದಾರೆ, ಕಾಂಗ್ರೆಸ್‌ಗೆ ಮತ್ತೊಂದು ಅವಕಾಶ ನೀಡಲಾಗಿದೆ, ಅದನ್ನು ಕಟ್ಟುವುದು ನಮಗೆ ಬಿಟ್ಟದ್ದು ಎಂದು ಅವರು ಹೇಳಿದರು.
ಹಿರಿಯ ಕಾಂಗ್ರೆಸ್ ನಾಯಕ ಮತ್ತು ಅಲಪ್ಪುಳದಿಂದ ಹೊಸದಾಗಿ ಚುನಾಯಿತ ಸಂಸದ ಕೆಸಿ ವೇಣುಗೋಪಾಲ್ ಅವರು “ಸಿಡಬ್ಲ್ಯೂಸಿ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ರಾಹುಲ್ ಗಾಂಧಿ ಜಿ ಅವರಿಗೆ ಸರ್ವಾನುಮತದಿಂದ ವಿನಂತಿಸಿದೆ ಎಂದು ಹೇಳಿದರು.

Previous Post
ಮೋದಿ ಕ್ಯಾಬಿನೆಟ್‌ನಲ್ಲಿ ಸ್ಮೃತಿ ಇರಾನಿ, ರಾಜೀವ್ ಚಂದ್ರಶೇಖರ್, ಅಶ್ವಿನಿ ಚೌಬೆ ಸೇರಿದಂತೆ 20 ಅನುಭವಿ ಮುಖಗಳಿಗೆ ಗೇಟ್‌ ಪಾಸ್‌!
Next Post
ಪ್ರಮಾಣ ವಚನಕ್ಕೂ ಮುನ್ನ ಸಂಭಾವ್ಯ ಸಚಿವರೊಂದಿಗೆ ಮೋದಿ ಸಭೆ: 100 ದಿನಗಳ ಕ್ರಿಯಾ ಯೋಜನೆ ಕುರಿತು ಸುಧೀರ್ಘ ಚರ್ಚೆ, ಬಾಕಿ ಇರುವ ಯೋಜನೆಗಳನ್ನು ಪೂರ್ಣಗೊಳಿಸಲು ನಿರ್ದೇಶನ

Recent News