ಅಧಿಕಾರ ಸ್ವೀಕರಿಸಿದ ರಾಜ್ಯದ ನಾಲ್ವರು ಕೇಂದ್ರ ಸಚಿವರು

ಅಧಿಕಾರ ಸ್ವೀಕರಿಸಿದ ರಾಜ್ಯದ ನಾಲ್ವರು ಕೇಂದ್ರ ಸಚಿವರು

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಕೇಂದ್ರ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದ ಸಂಪುಟ ದರ್ಜೆ ಸಚಿವರಾದ ಪ್ರಹ್ಲಾದ್ ಜೋಶಿ, ಹೆಚ್.ಡಿ ಕುಮಾರಸ್ವಾಮಿ, ರಾಜ್ಯಖಾತೆ ಸಚಿವರಾದ ಶೋಭಾ ಕರಂದ್ಲಾಜೆ ಮತ್ತು ವಿ‌.ಸೋಮಣ್ಣ ಖಾತೆ ಹಂಚಿಕೆ ಬಳಿಕ ತಮ್ಮ ಕಚೇರಿಗಳಲ್ಲಿ ಅಧಿಕಾರ ಸ್ವೀಕರಿಸಿದರು.

ಹೆಚ್.ಡಿ ಕುಮಾರಸ್ವಾಮಿ ಅವರು ಉದ್ಯೋಗ ಭವನದಲ್ಲಿರುವ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವಾಲಯದಲ್ಲಿ ಅಧಿಕಾರ ಸ್ವೀಕರಿಸಿದರು. ಪೂಜೆ ಸಲ್ಲಿಸಿ ಬಳಿಕ ಕಡತಕ್ಕೆ ಸಹಿ ಹಾಕುವ ಮೂಲಕ ಅಧಿಕಾರ ಸ್ವೀಕರಿಸಿದರು. ಆಹಾರ ಮತ್ತು ನಾಗರೀಕ ಸರಬರಾಜು ಖಾತೆ, ನವೀಕರಿಸಬಹುದಾದ ಇಂಧನ ಖಾತೆ ಸಚಿವರಾಗಿ ಕೃಷಿ ಮತ್ತು ಊರ್ಜಾ ಭವನದಲ್ಲಿ ಅಧಿಕಾರ ಸ್ವೀಕರಿಸಿದರು.

ರೈಲು ಭವನದಲ್ಲಿ ವಿ. ಸೋಮಣ್ಣ ರೈಲ್ವೆ ಹಾಗೂ ಜಲಶಕ್ತಿ ಭವನದಲ್ಲಿ ಜಲಶಕ್ತಿ ರಾಜ್ಯಖಾತೆ ರಾಜ್ಯಖಾತೆಯನ್ನು ವಹಿಸಿಕೊಂಡರು. ಶೋಭಾ ಕರಂದ್ಲಾಜೆ ಅವರಿಗೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ರಾಜ್ಯ ಖಾತೆ ಮತ್ತು ಕಾರ್ಮಿಕ ಇಲಾಖೆ ರಾಜ್ಯಖಾತೆ ಸಚಿವರಾಗಿ ಅಧಿಕಾರ ಸ್ವೀಕರಿಸಿದರು‌.

ಅಧಿಕಾರ ಸ್ವೀಕಾರ ಬಳಿಕ ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣ, ಹೊಸ ಜವಾಬ್ದಾರಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ನನ್ನ ಪಕ್ಷಕ್ಕೆ ಧನ್ಯವಾದಗಳು ಕಳೆದ ಹತ್ತು ವರ್ಷದಲ್ಲಿ ಮೋದಿ ಅವರ ನಾಯಕತ್ವ, ದೂರದೃಷ್ಟಿ ಚಿಂತನೆ ವಿಶ್ವ ಭಾರತದತ್ತ ನೋಡುವಂತೆ ಮಾಡಿದೆ ಮೋದಿ ಅವರು ಮೂರನೇ ಪ್ರಧಾನಿಯಾಗಿದ್ದಾರೆ, ಸರ್ಕಾರದ ಸೌಲಭ್ಯಗಳನ್ನು 140 ಕೋಟಿ ಜನರಿಗೆ ಮುಟ್ಟಿಸಬೇಕು ಅಶ್ವಿನಿ ವೈಷ್ಣವ್ ಅವರ ನೇತೃತ್ವದಲ್ಲಿ ರೈಲ್ವೆ ಇಲಾಖೆಗೆ ಹತ್ತು ವರ್ಷದಲ್ಲಿ ಹಲವು ಕೊಡುಗೆ ನೀಡಿದೆ ಅಶ್ವಿನಿ ವೈಷ್ಣವ್ ಜೊತೆಗೆ ಕೆಲಸ ಮಾಡಲು ಆನಂದವಾಗುತ್ತದೆ ವಿಕಸಿತ್ ಭಾರತ್ ಇನ್ನು ಯಶಸ್ವಿಗೆ ಕೊಂಡೊಯ್ಯಲು ಪ್ರಯತ್ನಿಸುತ್ತೇವೆ ಎಂದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಮಾನ್ಯ ಪ್ರಧಾನಿಗಳು ನನಗೆ ಈ ಖಾತೆ ನೀಡಿದ್ದಾರೆ ನನಗೆ ಈ ಜವಾಬ್ದಾರಿ ನೀಡಿದ್ದಕ್ಕಾಗಿ ಮೋದಿ ಅವರಿಗೆ ಧನ್ಯವಾದಗಳು ನಾನು ನಮ್ಮ ಕ್ಷೇತ್ರ, ರಾಜ್ಯ, ದೇಶದ ಜನತೆಗೆ ಧನ್ಯವಾದ ಹೇಳ್ತಿದ್ದೇನೆ ಪ್ರಧಾನಿ, ಮುಂದಿನ 125 ದಿನಗಳ ಕಾರ್ಯಾ ಹೇಗಿರಬೇಕು ಎಂಬುದಕ್ಕೆ ಮೊದಲೇ ಹೇಳಿದ್ದಾರೆ. ಪಿಯುಶ್ ಗೊಯಲ್ ಕೂಡ ಈ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ 80 ಕೋಟಿ ಜನರಿಗೆ ದೊಡ್ಡ ಪ್ರಮಾಣದಲ್ಲಿ ಆಹಾರ ಭದ್ರತಾ ಕಾರ್ಯಕ್ರಮ ಮಾಡಿದ್ದಾರೆ ಇಂತಹ ಸ್ಕೀಮ್ ನಡೆಸುವ ಇಲಾಖೆಯಲ್ಲಿ ಮೋದಿಯವರು ನನಗೆ ಸ್ಥಾನ ನೀಡಿದ್ದಾರೆ ನಂಬಿಕೆ ಇಟ್ಟು ನನಗೆ ಈ ಖಾತೆ ನೀಡಿದ್ದಕ್ಕೆ ಧನ್ಯವಾದಗಳು ನಿಜಕ್ಕೂ ಪ್ರಧಾನಿ ಗೆ ಧನ್ಯವಾದಗಳು ಅರ್ಪಿಸುತ್ತೇನೆ ಎಂದರು.

Previous Post
ತಮಾಷೆಗಾಗಿ ಏರ್ ಕೆನಡಾ ವಿಮಾನಕ್ಕೆ ಬಾಂಬ್ ಬೆದರಿಕೆ ಹಾಕಿದ್ದ ಬಾಲಕ
Next Post
ವರ್ಗಾವಣೆ ವೇಳೆ ತೆರಿಗೆ ಸಂಗ್ರಹದಲ್ಲಿ ಅಧಿಕಾರಿಗಳ ಕಾರ್ಯಕ್ಷಮತೆ ಪರಿಗಣನೆ : ಸಿಎಂ

Recent News