ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಖಿಲೇಶ್ ಯಾದವ್

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಖಿಲೇಶ್ ಯಾದವ್

ಲಕ್ನೋ : ಕನೌಜ್ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿರುವ ಮಾಜಿ ಸಿಎಂ ಅಖಿಲೇಶ್ ಯಾದವ್ ಕರ್ಹಾಲ್ ವಿಧಾನಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಸಭೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ದುಬೆ ಅವರ ಮಾಹಿತಿ ಪ್ರಕಾರ ರಾಜೀನಾಮೆಯನ್ನು ಸ್ವೀಕರಿಸಿದ್ದು ಶೀಘ್ರದಲ್ಲೇ ಅಂಗೀಕರಿಸಲಾಗುವುದು ಎಂದು ತಿಳಿಸಿದ್ದಾರೆ.

ಇತ್ತಿಚೇಗೆ ಎಸ್‌ಪಿ ಶಾಸಕ ಲಾಲ್‌ಜಿ ವರ್ಮಾ ಕೂಡ ರಾಜೀನಾಮೆ ನೀಡಿದ್ದರು. ಲಾಲ್ಜಿ ವರ್ಮಾ ಲೋಕಸಭೆ ಸದಸ್ಯರಾಗಿಯೂ ಆಯ್ಕೆಯಾಗಿದ್ದಾರೆ. ಇದಲ್ಲದೆ, ಫೈಜಾಬಾದ್ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಅವಧೇಶ್ ಪ್ರಸಾದ್ ಕೂಡ ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಅಖಿಲೇಶ್ ಯಾದವ್ ಯುಪಿ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಿದ್ದರು, ಅವರು ರಾಜೀನಾಮೆ ನೀಡಿರುವ ಹಿನ್ನಲೆ ಮುಂಬರುವ ಸಮಯದಲ್ಲಿ ಅಖಿಲೇಶ್ ಚಿಕ್ಕಪ್ಪ ಶಾಸಕ ಶಿವಪಾಲ್ ಸಿಂಗ್ ಯಾದವ್ ಅಥಾವ ರಾಮ್ ಅಚಲ್ ರಾಜ್‌ಭರ್, ಇಂದರ್‌ಜಿತ್ ಸರೋಜ್ ಮತ್ತು ಕಮಲ್ ಅಖ್ತರ್‌ಗೆ ನಡುವೆ ಯಾರಾದರೂ ಒಬ್ಬರಿಗೆ ಈ ಜವಬ್ದಾರಿ ನೀಡುವ ಸಾಧ್ಯತೆಗಳಿದೆ.

ಅಖಿಲೇಶ್ ಯಾದವ್ ನೇತೃತ್ವದಲ್ಲಿ ಎಸ್‌ಪಿ ದೇಶದ ಮೂರನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ, ಯುಪಿಯಲ್ಲಿ, ಎಸ್‌ಪಿ ಏಕಾಂಗಿಯಾಗಿ 37 ಸ್ಥಾನಗಳನ್ನು ಮತ್ತು ಭಾರತ ಮೈತ್ರಿಕೂಟದ ಮಿತ್ರಪಕ್ಷವಾದ ಕಾಂಗ್ರೆಸ್‌ನ ಸಹಯೋಗದೊಂದಿಗೆ ಒಟ್ಟು 43 ಸ್ಥಾನಗಳನ್ನು ಗೆದ್ದಿದೆ

Previous Post
ಭದ್ರತಾ ಪಡೆಗಳ ಗುರಿಯಾಗಿಸಿ ಭಯೋತ್ಪಾದಕ ದಾಳಿ ನಡೆಯಬಹುದು ಗುಪ್ತಚರ ಇಲಾಖೆಯಿಂದ ಎಚ್ಚರಿಕೆ
Next Post
ದೆಹಲಿಯಲ್ಲಿ ನೀರಿನ ಬಿಕ್ಕಟ್ಟು ದೆಹಲಿ ಸರ್ಕಾರಕ್ಕೆ ಚಾಟೀ ಬೀಸಿದ ಸುಪ್ರೀಂಕೋರ್ಟ್

Recent News