ತಾಪಮಾನ ಏರಿಕೆ: ಮಕ್ಕಾದಲ್ಲಿ 550 ಸಾವು

ತಾಪಮಾನ ಏರಿಕೆ: ಮಕ್ಕಾದಲ್ಲಿ 550 ಸಾವು

ಮಕ್ಕಾ, ಜೂ. 19: ತಾಪಮಾನ ಏರಿಕೆಯಿಂದ ಈ ಬಾರಿಯ ಹಜ್ ಕರ್ಮದ ವೇಳೆ 550ಕ್ಕೂ ಹೆಚ್ಚು ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತರಲ್ಲಿ 323 ಮಂದಿ ಈಜಿಪ್ಟಿಯನ್ನರು, 60 ಜನರು ಜೋರ್ನಾಡಿನವರು ಹಾಗೂ 150ಕ್ಕೂ ಹೆಚ್ಚು ಮಂದಿ ವಿವಿಧ ದೇಶಗಳಿಂದ ಬಂದವರು. 2023ರ ಹಜ್‌ ಯಾತ್ರೆ ವೇಳೆ 240 ಮಂದಿ ಸಾವನ್ನಪ್ಪಿದ್ದರು ಎಂದು ಅರಬ್ ರಾಜತಾಂತ್ರಿಕರನ್ನು ಉಲ್ಲೇಖಿಸಿ ವರದಿಗಳು ಹೇಳಿವೆ.

ಮೃತದೇಹಗಳನ್ನು ಮಕ್ಕಾದ ಹೊರ ವಲಯದ ಅಲ್‌-ಮುಯಿಸೆಮ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಈ ವರ್ಷ ಸುಮಾರು 18 ಲಕ್ಷ ಜನರು ಹಜ್‌ ಕರ್ಮದಲ್ಲಿ ಭಾಗವಹಿಸಿದ್ದರು. ಈ ಪೈಕಿ 16 ಲಕ್ಷ ಮಂದಿ ವಿವಿಧ ದೇಶಗಳಿಂದ ಆಗಮಿಸಿದವರು ಎಂದು ರಾಜತಾಂತ್ರಿಕರು ತಿಳಿಸಿದ್ದಾರೆ.
ಈ ಬಾರಿ ಮಕ್ಕಾದಲ್ಲಿ ಬಿಸಿಲಿನ ತಾಪಮಾನ ಏರಿಕೆಯಿಂದ ಹೆಚ್ಚಿನ ಸಾವುಗಳು ಸಂಭವಿಸಿದೆ. ಮಕ್ಕಾದ ಗ್ರ್ಯಾಂಡ್ ಮಸೀದಿ ಮಸ್ಜಿದುಲ್ ಹರಮ್‌ನ ಬಳಿ ತಾಪಮಾನ 51.8 ಡಿಗ್ರಿ ಸೆಲ್ಸಿಯಸ್ (125 ಫ್ಯಾರನ್‌ಹೀಟ್) ದಾಖಲಾಗಿದೆ ಎಂದು ಸೌದಿ ರಾಷ್ಟ್ರೀಯ ಹವಾಮಾನ ಕೇಂದ್ರ ತಿಳಿಸಿದೆ

Previous Post
ಅಸ್ಸಾಂ ಪ್ರವಾಹ: 30ಕ್ಕೂ ಹೆಚ್ಚು ಸಾವು, ಸುಮಾರು 2 ಲಕ್ಷ ಜನ ಸಂಕಷ್ಟದಲ್ಲಿ
Next Post
100 ಕೋಟಿ ಕಿಕ್‌ಬ್ಯಾಕ್‌ಗೆ ಬೇಡಿಕೆ ಇಟ್ಟಿದ್ದಕ್ಕೆ ಸಾಕ್ಷಿ ಇದೆ ವಿಚಾರಣೆ ವೇಳೆ ಇಡಿ ಪರ ವಕೀಲರ ಹೇಳಿಕೆ | ಕೇಜ್ರಿವಾಲ್ ನ್ಯಾಯಂಗ ಬಂಧನ ವಿಸ್ತರಣೆ

Recent News